Hello.. Hold on.. ಇದೇನಪ್ಪ ಎಂ.ಎಸ್ ಧೋನಿ ಅದೆಂಥ ಪುಣ್ಯ ಮಾಡಿದ್ದಾರೆ.. ಅವರು ಮುದ್ದಾಡ್ತಿದ್ರೂ ಹೆಂಡ್ತಿನೇ ನೋಡಿ ಖುಷಿ ಪಡ್ತಿದ್ರು ಅಂದ್ರೆ ಎಂಥ ಚೆಂದ.. ಅಂತ ಮನಸ್ಸಲ್ಲೇ ಮಂಡಿಗೆ ತಿನ್ನಬೇಡಿ.. ಯಾಕಂದ್ರೆ ಧೋನಿ ಮುದ್ದಾಡಿದ್ದು ಯಾರನ್ನ ಗೊತ್ತಾ?

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ.. ಕ್ರಿಕೆಟ್​ನ ಎಷ್ಟು ಇಷ್ಟ ಪಡ್ತಾರೋ.. ಅಷ್ಟೇ ಬೈಕ್​ಗಳನ್ನೂ.. ಕಾರ್​ಗಳನ್ನ ಜೊತೆಗೆ ಪ್ರಾಣಿಗಳನ್ನೂ ಇಷ್ಟ ಪಡ್ತಾರೆ.. ಈಗ ಅವರ ಫ್ಯಾಮಿಲಿಗೆ ಹೊಸ ಸೇರ್ಪಡೆಯಾಗಿದೆ.. ಅದೇ ಬ್ಲಾಕ್​ ಬ್ಯೂಟಿ ಚೇತಕ್ ಅನ್ನೋ ಕುದುರೆ.. ಅದಿನ್ನೇ ಕಣ್ರಿ ಧೋನಿ ಮುದ್ದಾಡ್ತಿದ್ದುದು..

ಹೌದು.. 14ನೇ ಆವೃತ್ತಿಯ ಐಪಿಎಲ್ ಮುಂದೂಡಿಕೆ ಹಿನ್ನೆಲೆ ಟೀಮ್ ಇಂಡಿಯಾದ ಮಾಜಿ ನಾಯಕ ಎಂ​.ಎಸ್​.ಧೋನಿ ಫುಲ್ ರಿಲ್ಯಾಕ್ಸ್​ ಆಗಿದ್ದಾರೆ. ಸದ್ಯ ರಾಂಚಿಯ ಫಾರ್ಮ್​ ಹೌಸ್​ನಲ್ಲಿ ಕುಟುಂಬ ಸದ್ಯರೊಂದಿಗೆ ಕಾಲಕಳೆಯುತ್ತಿದ್ದಾರೆ. ಐಪಿಎಲ್​​ನಿಂದ ನೇರ ಮನೆಗೆ ಆಗಮಿಸಿದ ಬೆನ್ನಲ್ಲೇ ಮೊದಲ ಬಾರಿಗೆ ಹೊಸ ಅತಿಥಿ ಚೇತಕ್​​​ನ ಭೇಟಿ ಮಾಡಿದ್ದಾರೆ. ಭೇಟಿಯ ವಿಡಿಯೋವನ್ನ ಪತ್ನಿ ಸಾಕ್ಷಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಮಿಸ್ಟರ್ ಕೂಲ್ ಧೋನಿ, ಕುದರೆಯನ್ನ ಮುದ್ದು ಮಾಡುತ್ತಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಕೂಡ ಆಗ್ತಿದೆ. ಇತ್ತೀಚಗಷ್ಟೇ ಧೋನಿ ಪತ್ನಿ ಸಾಕ್ಷಿ, ಕಪ್ಪು ಕುದುರೆಯೊಂದನ್ನ ಖರೀದಿಸಿ ಮನೆಗೆ ತಂದಿದ್ದರು, ಅಷ್ಟೇ ಅಲ್ಲದೆ, ಚೇತಕ್ ಎಂಬ ಹೆಸರು ನಾಮಕಾರಣ ಮಾಡಿದ್ದರು.

 

View this post on Instagram

 

A post shared by Sakshi Singh Dhoni (@sakshisingh_r)

 

The post ಕಣ್ಣ ಮುಂದೆನೇ ಗಂಡ ಮುದ್ದಾಡ್ತಿದ್ರೂ.. ನೋಡಿ ಖುಷಿ ಪಟ್ಟರು ಸಾಕ್ಷಿ ಧೋನಿ..! appeared first on News First Kannada.

Source: newsfirstlive.com

Source link