ಬಿಗ್​ಬಾಸ್ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಕೋರ್​ ಟೀಮ್​ ಎಂದು ಕರೆದುಕೊಳ್ಳುವ ಪ್ರಶಾಂತ್​ ಸಂಬರಗಿ, ಚಂದ್ರಚೂಡ್​ ಮತ್ತು ಶಮಂತ್​ ನಡುವೆ ಆಗಾಗ ಮನಸ್ತಾಪದ ಗಾಳಿ ಸುಳಿಯುತ್ತಲೇ ಇರುತ್ತದೆ.

ಪ್ರಶಾಂತ್​ ಅವರ ದತ್ತು ಪುತ್ರ ಅಂತಾ ಮನೆಯವರೆಲ್ಲಾ ಶಮಂತ್​ರನ್ನು ಕರೆಯತ್ತಾರೆ. ಆದರೆ ನಿನ್ನೆ ಇವರಿಬ್ಬರ ನಡುವೆ ಅಸಮಾಧಾನ ಉಂಟಾಗಿದೆ. ಶಮಂತ್​ ದಿನಕ್ಕೊಂದು ಹಾಡು ಬರೆಯುವುದನ್ನು ನೋಡಿದ್ದೇವೆ. ಆ ಹಾಡನ್ನು ಪ್ರಶಾಂತ್​ ಅವರ ಜೊತೆ ಕ್ಯಾಮೆರಾ ಮುಂದೆ ಬಂದು ಹೇಳುವುದು ವಾಡಿಕೆ.

ನಿನ್ನೆ ಕಣ್ಮಣಿ ಕುರಿತು ಶಮಂತ್​ ಹಾಡು ಬರೆಯುತ್ತಾರೆ. ಕಣ್ಮನಿ ಅಂದ್ರೇ ಯಾರು ಅಂತಿರಾ? ಅದೇ ರೀ.. ಕ್ಯಾಮೆರಾ ಕಣ್ಮನಿ. ಹಾಡು ಬರೆಯಲು ಪ್ರಶಾಂತ್​ ಕೂಡ ಸಹಾಯ ಮಾಡುತ್ತಾರೆ. ಆದರೆ ರಾತ್ರಿ ಕ್ಯಾಮೆರಾ ಮುಂದೆ ಶಮಂತ್​ ಅರವಿಂದ್ ಹಾಗೂ ದಿವ್ಯಾ ಯು. ಜೊತೆ ಹಾಡು ಹೇಳುತ್ತಾರೆ. ಇದೇ ಪ್ರಶಾಂತ್​ ಅವರ ಮುನಿಸಿಗೆ ಕಾರಣವಾಗಿದೆ.

ಇದನ್ನೂ ಓದಿ: ಬಿಗ್‌ಬಾಸ್ ಸೀಕ್ರೆಟ್‌ ಟಾಸ್ಕ್‌.. ಸಿಕ್ಕಾಪಟ್ಟೆ ಬಕ್ರಾ ಆದವರು ಯಾರು?

ಈ ಕುರಿತು ಪ್ರಶಾಂತ್ ಶಮಂತ್​ಗೆ ಹಂಗಿಸುತ್ತಾರೆ. ಅವಕಾಶವಾದಿ ಹಾಡೊಂದೆ ಅಲ್ಲ, ಬೇರೆಯಲ್ಲ ನೋಡ್ತಾ ಇದ್ದೀನಿ. ಮನಸ್ಸಲ್ಲಿ ಬೇರೆ, ತೆಲೆಯಲ್ಲಿ ಬೇರೆ ಇದೆ ನಿಂಗೆ ಎನ್ನುತ್ತಾರೆ. ಅದಕ್ಕೆ ಶಮಂತ್​.. ಇಲ್ಲ, ಅರವಿಂದ್ ನಿದ್ದೆ ಬರ್ತಿದೆ ಹಾಡು ಎಂದು ಹೇಳಿದ್ರು. ಹೀಗಾಗಿ ಹಾಡಿದೆ ಅಷ್ಟೇ. ಇನ್ಮೇಲೆ ಹೀಗೆ ಮಾಡುವುದಿಲ್ಲ ಎಂದು ಸಮಜಾಯಿಸಿ ನೀಡುತ್ತಾರೆ.

ಆದರೆ ಇಲ್ಲೊಂದು ಗಮನಿಸಬೇಕಾದ ವಿಷಯ ಇದೆ. ಸಿಟ್ಟಲ್ಲಿಯೇ ಮನಸ್ಸಿನ ಮಾತು ಹೊರಗೆ ಬರುತ್ತವೆ ಅನ್ನುವುದು ನಿಜ ಎನಿಸುತ್ತದೆ. ಪ್ರಶಾಂತ್​ ಶಮಂತ್​ಗೆ ಗೆದ್ದ ಎತ್ತಿನ ಬಾಲ ಹಿಡಿಯುತ್ತಿದ್ಯಾ ಎಂದು ಟೀಕಿಸುತ್ತಾರೆ.

ಇದನ್ನೂ ಓದಿ: ಬಿಗ್​ಬಾಸ್​ ಮನೆಯಲ್ಲಿ ಈ ವಾರ ನಾಮಿನೇಟ್ ಆದವ್ರು ಯಾರು..?

The post ಕಣ್ಮಣಿ ಇಂಪ್ರೆಸ್​ ಮಾಡಲು ಶಮಂತ್ ಹೊಸ ಆಯ್ಕೆ.. ಪ್ರಶಾಂತ್​ಗೆ ಮುನಿಸು..! appeared first on News First Kannada.

Source: newsfirstlive.com

Source link