‘ಕತೆ ಡಬ್ಬಿ’ಯ ಸಕ್ಸಸ್​​​​ನಲ್ಲಿ ಕನ್ನಡತಿ ರಂಜನಿ ರಾಘವನ್​


ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್ ನಟನೆಯ ಜೊತೆಗೆ ಕಳೆದ ಎರಡು ವರ್ಷಗಳಿಂದ ಬರವಣಿಗೆಯಲ್ಲಿ ನಿರತರಾಗಿದ್ದು, ಕನ್ನಡ ಸಾಹಿತ್ಯ ಲೋಕಕ್ಕೆ ಸಣ್ಣ ಕತೆಗಳನ್ನ ಕೊಡುಗೆ ನೀಡಿದ್ದಾರೆ ನಮ್ಮ ಪುಟ್ಟಗೌರಿ. ಇಷ್ಟು ದಿನ ಅವರ ವೆಬ್‌ಸೈಟ್‌ನಲ್ಲಿ ರಂಜನಿ ಪ್ರಕಟಿಸುತ್ತಿದ್ದ ಕತೆಗಳನ್ನ ಒಟ್ಟು ಗೂಡಿಸಿ ಅವರ ಓದುಗ ಅಭಿಮಾನಿಗಳಿಗೆ ಗಿಫ್ಟ್​ ನೀಡಿದ್ದಾರೆ.

ಈ ಹಿಂದೆ ಕೂಡ ತಮಗೆ ಬರವಣಿಗೆ ಬಗ್ಗೆ ಎಷ್ಟು ಅಭಿರುಚಿ ಇದೆ ಅನ್ನೋದನ್ನ ಪ್ರೂವ್​ ಮಾಡಿದ್ದರು. ಅದಕ್ಕೆ ಸಾಕ್ಷಿಯಾಗಿದ್ದು ಇಷ್ಟ ದೇವತೆ ಎಂಬ ಸೀರಿಯಲ್​. ಈ ಧಾರಾವಾಹಿಗೆ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡಿದ ಹೆಗ್ಗಳಿಕೆ ರಂಜನಿ ಅವರದ್ದು. ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಕನ್ನಡತಿ ಕತೆ ಡಬ್ಬಿ ಮೂಲಕ ಜನರ ಮನಸ್ಸು ಗೆಲ್ಲುತ್ತಿದ್ದಾರೆ.

ಸದ್ಯ ರಂಜನಿ ಅವರ ಕತೆ ಡಬ್ಬಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿದ್ದು, ಬಿಡುಗಡೆಯಾದ ಕೆಲವೇ ತಿಂಗಳಲ್ಲಿ 5 ನೇ ಮುದ್ರಣ ಕಂಡಿದೆ. ಇದು ರಂಜನಿ ಅವರ ಸಾಹಿತ್ಯ ಕೃಷಿಗೆ ದೊಡ್ಡ ಮೈಲುಗಲ್ಲಾಗಿ ನಿಂತಿದ್ದು, ರಂಜನಿ ಅವರು ನಿಜಕ್ಕೂ ಬಹುರೂಪಿ.

ಇದೇ ಖುಷಿಯಲ್ಲಿ ನ್ಯೂಸ್​ ಫರ್ಸ್ಟ್​ ಜೊತೆ ಮಾತ್ನಾಡಿದ ರಂಜನಿ ಅವರು, 15 ವಾರಗಳ ಕಾಲ ಪ್ರತಿ ಶುಕ್ರವಾರ ಸಣ್ಣ ಕತೆಗಳನ್ನ ಬರೆಯುತ್ತಿದ್ದೆ. ಅದನ್ನೇ ಪುಸ್ತಕದ ರೂಪದಲ್ಲಿ ಓದುಗರಿಗೆ ನೀಡಬೇಕು ಎಂಬ ಚಿಂತನೆ ಬಂದ ತಕ್ಷಣ ತಡ ಮಾಡದೇ ತಯಾರಿ ಮಾಡಿಕೊಂಡೆ. ಈಗ ಆ ಪುಸ್ತಕಕ್ಕೆ ಸಿಗುತ್ತಿರುವ ಬೆಂಬಲ ನೋಡಿ ತುಂಬಾ ಖುಷಿಯಾಗುತ್ತಿದೆ. ಈ ಸಂಭ್ರಮವನ್ನ ಓದುಗರ ಜೊತೆಯಲ್ಲಿ ಹಂಚಿಕೊಳ್ಳಬೇಕು ಎಂಬ ಕಾರಣಕ್ಕೆ ಮೈಸೂರಿನ ನವಕರ್ನಾಟಕ ಬುಕ್ ಹೌಸ್​ನಲ್ಲಿ ಕತೆಡಬ್ಬಿ ಆಟೋಗ್ರಾಫ್ ಕಾರ್ಯಕ್ರಮ ಮಾಡಲಾಯಿತು. ಅಲ್ಲಿ ಪುಸ್ತಕ-ಹರಟೆ-ಸೆಲ್ಫಿ-ಆಟೋಗ್ರಾಫ್ ಹೀಗೆ ಅಭಿಮಾನಿಗಳ ಜೊತೆ ಕಾಲ ಕಳೆದೆ ಎಂದರು.

ಕಿರುತೆರೆಯ ಜೊತೆಗೆ ಟಕ್ಕರ್, ಕ್ಷಮಿಸಿ ನಿಮ್ಮ ಕಾತೆಯಲ್ಲಿ ಹಣವಿಲ್ಲ ಹೀಗೆ ಹಲವಾರ ಸಿನಿಮಾಗಳಲ್ಲಿಯೂ ಬ್ಯಸಿಯಾಗಿರುವ ರಂಜನಿ ಅವರು ಸದ್ಯ ಈ ಎಲ್ಲದರ ನಡುವೆ ಬರಹಗಾರ್ತಿಯಾಗಿ ಹೊರಹೊಮ್ಮಿದ್ದಾರೆ.

The post ‘ಕತೆ ಡಬ್ಬಿ’ಯ ಸಕ್ಸಸ್​​​​ನಲ್ಲಿ ಕನ್ನಡತಿ ರಂಜನಿ ರಾಘವನ್​ appeared first on News First Kannada.

News First Live Kannada


Leave a Reply

Your email address will not be published. Required fields are marked *