ಬೆಂಗಳೂರು: ‘100’ ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಪುನೀತ್ ರಾಜ್ಕುಮಾರ್ ಅವರನ್ನ ನೆನೆದು ನಟ ರಮೇಶ್ ಅರವಿಂದ್ ಕಣ್ಣೀರಿಟ್ಟಿದ್ದಾರೆ.
ಮಲ್ಲೇಶ್ವರಂನ ಪಿಆರ್‌ವಿ ಥಿಯೇಟರ್ನಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿದ ರಮೇಶ್ ಅರವಿಂದ್ ಈ ವೇಳೆ ಭಾವುಕರಾಗಿದ್ದಾರೆ.
ಬಳಿಕ ಮಾತನಾಡಿದ ರಮೇಶ್ ಅಪ್ಪು ಅವರ ನಗು, ಲವಲವಿಕೆ ಸದಾ ಕಾಡುತ್ತಿದೆ. ಇಂದು ಅವರು ನಮ್ಮ ಜೊತೆಯಿಲ್ಲ, ಈಗ ನಮಗೆ ಉಳಿದಿರುವುದು ಅಪ್ಪು ನೆನೆಪು ಮಾತ್ರ ಎಂದಿದ್ದಾರೆ. ನಿಧನಕ್ಕೂ ಹಿಂದಿನ ದಿನ ರಾತ್ರಿ ಗುರುಕಿರಣ್ ನಿವಾಸದಲ್ಲಿ ಎಲ್ಲರು ಸೇರಿದ್ದೇವು. ಹುಟ್ಟು, ಸಾವು, ವೈರಾಗ್ಯ ಸೇರಿದಂತೆ ಅಲ್ಲಿ ಸಾಕಷ್ಟು ವಿಚಾರಗಳನ್ನ ಚರ್ಚಿಸಿದೆವು. ಕತ್ತಲಾದ ಮೇಲೆ ಬೆಳಕು ಬರಲೇಬೇಕಲ್ವಾ ಅಂತಾ ಪುನೀತ್ ಹೇಳಿದ್ದರು. ಆದರೆ ಬೆಳಕಾಗುವಂತೆಯೇ ಅಪ್ಪು ನಮ್ಮನ್ನ ಬಿಟ್ಟು ಹೋದರು ಎಂದು ಅವರು ಕಣ್ಣೀರಿಟ್ಟಿದ್ದಾರೆ.