ಕತ್ರಿನಾ ಕಲ್ಯಾಣಕ್ಕೆ ಹೋಗ್ತಿರಾ ಅಂದ್ರೇ ಶಾಕ್​ ಆದ ಕಿಯರಾ ಏನಂದ್ರು? 


ಬಾಲಿವುಡ್​ನಲ್ಲಿ ಸದ್ಯಕ್ಕೇನಿದ್ರು ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದುವೆ ವಿಚಾರದ್ದೇ ಸದ್ದು. ರಾಜಸ್ತಾನದಲ್ಲಿ 7 ನೇ ತಾರೀಖಿನಿಂದ 9 ನೇ ತಾರೀಖಿನವರೆಗೆ ಅದ್ಧೂರಿಯಾಗಿ ನೆರವೇರಲಿದೆ ವಿಕ್ಕಿ ಮತ್ತು ಕತ್ರಿನಾ ಕೈಫ್​ ಮದುವೆ.

ಸಪ್ತ ಕಂಡೀಷನ್​ ಹಾಕಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಕತ್ರಿನಾ- ವಿಕ್ಕಿ ಮದುವೆಗೆ, ವಿಕ್ಕಿ ಕೋ ಸ್ಟಾರ್​ ಆಗಿ ನಟಿಸಿದ್ದ ಮತ್ತು ಬಾಲಿವುಡ್​ನ ಹಾಟ್​ ಬೆಡಗಿ ಕಿಯರಾ ಅಡ್ವಾನಿ ಮದುವೆ ಸಮಾರಂಭಕ್ಕೆ ಹಾಜರಾಗುತ್ತಿಲ್ಲವಂತೆ. ಇತ್ತೀಚೆಗೆ ಪತ್ರಕರ್ತರು ಕಿಯರಾ ಅಡ್ವಾನಿಯವರನ್ನು ನೀವು ವಿಕ್ಕಿ ಮತ್ತು ಕತ್ರಿನಾ ಮದುವೆಗೆ ಹಾಜರಾಗುತ್ತೀರಾ.? ಎಂದು ಕೇಳಿದಾಗ , ಶಾಕ್​ ಆದ ಕಿಯರಾ ಹೋ ಹೌದಾ.? ನಾನು ಅವರ ಮದುವೆ ಬಗ್ಗೆ ಕೇಳಿದ್ದೆ, ಆದರೆ ಮದುವೆ ಸಮಾರಂಭಕ್ಕೆ ಹಾಜರಾಗುವಂತೆ ನನಗೆ ಯಾವುದೇ ಆಮಂತ್ರಣ ಬಂದಿಲ್ಲ. ಒಂದು ವೇಳೆ ನನಗೆ ಇನ್ವಿಟೇಷನ್​ ಬಂದರೆ ಖಂಡಿತವಾಗಿಯೂ ಭಾಗಿಯಾಗುತ್ತೇನೆ ಎಂದು ಹೇಳಿದ್ದಾರೆ.

 

News First Live Kannada


Leave a Reply

Your email address will not be published. Required fields are marked *