ಹೇಳಿ ಕೇಳಿ ಇದು ಸೋಷಿಯಲ್ ಮೀಡಿಯಾ ಕಾಲ. ಇಲ್ಲಿ ಯಾರಿಗೂ ರಿಯಾಯಿತಿ ಕೊಡುವ ಮಾತೇ ಇಲ್ಲ. ಅದೆಂಥ ಅತಿರಥ ಮಹಾರಥರಾಗಿದ್ರೂ ಟ್ರೋಲರ್ಗಳು ಅವರನ್ನು ಬಿಡಲ್ಲ. ಈ ಮಾತು ಯಾಕೆ ಅಂದ್ರೆ ವಿಕ್ಕಿ-ಕತ್ರಿನಾ ಮದುವೆ ಕೂಡ ಫುಲ್ ಟ್ರೋಲ್ ಆಗ್ತಿದೆ. ಅನೇಕ ಸ್ವಾರಸ್ಯಕರವಾದ ಮತ್ತು ಕ್ರಿಯೇಟಿವಿಟಿಯಿಂದ ಕೂಡಿದ ಪೋಸ್ಟ್, ಮೀಮ್ಸ್, ವಿಡಿಯೊಗಳನ್ನು ಶೇರ್ ಮಾಡುತ್ತಿದ್ದಾರೆ. ಈ ಪೈಕಿ ಕೆಲವು ಟ್ರೋಲ್ಗಳಲ್ಲಿರುವ ಹಾಸ್ಯಪ್ರಜ್ಞೆ ಮೆಚ್ಚುಗೆಗೆ ಪಾತ್ರವಾಗಿದ್ದರೆ, ಇನ್ನು ಕೆಲವು ಟೀಕೆಗೆ ಗುರಿಯಾಗಿವೆ.
ಸಾಮಾನ್ಯ ಜನರಿಂದ ಹಿಡಿದು ಪ್ರಧಾನ ಮಂತ್ರಿವರೆಗೂ ಯಾರನ್ನೂ ಟ್ರೋಲರ್ಗಳು ಬಿಡುವುದಿಲ್ಲ. ಯಾವುದಾದ್ರೂ ಒಂದು ತಪ್ಪು ಕಾಣಿಸಿದ್ರೆ ಸಾಕು ಅದನ್ನು ಟ್ರೋಲ್ ಮಾಡ್ತಾರೆ. ಯಾವುದಾದ್ರೂ ಹಾಸ್ಯಮಯ ಸನ್ನಿವೇಶ ನಡೆದ್ರೂ ಸಾಕು ಅದನ್ನು ಟ್ರೋಲ್ ಮಾಡ್ತಾರೆ. ದೇಶದಲ್ಲಿ ಅತಿ ಹೆಚ್ಚು ಟ್ರೋಲ್ಗೆ ತುತ್ತಾಗುವವರು ಅಂದ್ರೆ ಸಿನಿಮಾದವರು ಮತ್ತು ರಾಜಕಾರಣಿಗಳು. ಯೆಸ್, ಈ ಎರಡು ಕ್ಷೇತ್ರದವರ ಮೇಲೆ ಜನರ ಕಣ್ಣು ಇದ್ದೇ ಇರುತ್ತೆ. ಪ್ರತಿಯೊಂದು ವಿಷಯವನ್ನು ಸೂಕ್ಷ್ಮವಾಗಿ ಗಮನಿಸೋ ಟ್ರೋಲರ್ಗಳು ಟ್ರೋಲ್ ಮಾಡಿ ಜನರನ್ನು ನಗೆಗಡಲಲ್ಲಿ ತೇಲಿಸಿ ಬಿಡ್ತಾರೆ. ಇನ್ನು ವಿಕ್ಕಿ, ಕತ್ರಿನಾ ಮದುವೆ ವಿಚಾರದಲ್ಲಿಯೂ ಫುಲ್ ಟ್ರೋಲ್ಗಳು ಆಗ್ತಾ ಇವೆ.
ಕತ್ರಿನಾ ಕೈಫ್ಗೆ ಬಾಲಿವುಡ್ನಲ್ಲಿ ನೆಲೆ ಕೊಡಿಸಿದ್ದೇ ಸಲ್ಮಾನ್ ಖಾನ್ ಅಂದ್ರೆ ತಪ್ಪಾಗಲಾರದು. ಹೌದು, ಅದು 2005 ರಲ್ಲಿ ‘ಮೈನೆ ಪ್ಯಾರ್ ಕ್ಯೂನ್ ಕೀ’ ಸಿನಿಮಾದಲ್ಲಿ ಸಲ್ಮಾನ್-ಕತ್ರಿನಾ ಜೊತೆಯಾಗಿ ಅಭಿನಯಿಸಿದ್ರು. ಅಲ್ಲಿಂದಲೇ ನೋಡಿ ಬಾಲಿವುಡ್ನಲ್ಲಿ ಕ್ಯಾಟ್ಗೆ ಅದೃಷ್ಟ ಖುಲಾಯಿಸಿ ಬಿಡ್ತು. ಆಮೇಲೆ ಆಕೆ ತಿರುಗಿ ನೋಡಿದ್ದೇ ಇಲ್ಲ. ಬಾಲಿವುಡ್ನಲ್ಲಿ ಆಕೆ ಮುಟ್ಟಿದೆಲ್ಲಾ ಚಿನ್ನ ಎನ್ನುವಂತೆ ಮಾಡಿರೋ ಬಹುತೇಕ ಎಲ್ಲಾ ಚಿತ್ರಗಳೂ ಸೂಪರ್ ಹಿಟ್. ಎಲ್ಲಾ ಸ್ಟಾರ್ ಹೀರೋಗಳ ಜೊತೆಗೂ ಅಭಿನಯಿಸಿದ ಖ್ಯಾತಿ ಕ್ಯಾಟ್ಗೆ ಇದೆ. ಈ ನಡುವೆ ಸಲ್ಮಾನ್ ಪ್ರೀತಿಯಲ್ಲಿ ಕತ್ರಿನಾ ಬಿದ್ದಿದ್ಲು. ಅನಂತರ ಬ್ರೇಕ್ಅಪ್ ಆಯ್ತು. ಆದ್ರೆ, ಇದೇ ವಿಚಾರವವನ್ನು ಇಟ್ಟುಕೊಂಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ಟ್ರೋಲ್ ಮಾಡಲಾಗ್ತಿದೆ. ಒಂದು ಕಡೆ ಕತ್ರಿನಾ ವಿಕ್ಕಿ ಫೋಟೋ ಹಾಕಿ ಮತ್ತೊಂದು ಕಡೆ ಸಲ್ಮಾನ್ ಖಾನ್ ಕಣ್ಣೀರು ಹಾಕೋ ಫೋಟೋ, ವಿಡಿಯೋಗಳನ್ನು ಅಪ್ಲೋಡ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ.
ಇನ್ನು ಮದುವೆಗೆ ಕತ್ರಿನಾ ಮಾಜಿ ಗೆಳೆಯಾ ಸಲ್ಮಾನ್ಗೆ ಆಹ್ವಾನ ಹೋಗಿದೆಯೋ ಇಲ್ವೋ? ಸಲ್ಮಾನ್ ಬರ್ತಾರೋ ಇಲ್ವೋ ಅನ್ನೋ ಚರ್ಚೆ ಇದೆ. ಆದ್ರೆ, ಇದನ್ನು ಟ್ರೋಲರ್ಗಳು ಹೇಗೆ ಟ್ರೋಲ್ ಮಾಡ್ತಾ ಇದ್ದಾರೆ ಗೊತ್ತಾ? ಸಲ್ಲು ತಮ್ಮ ಮಾಜಿ ಗೆಳತಿಯನ್ನು ಮದುಮಗಳ ರೂಪದಲ್ಲಿ ನೋಡಲು ವೇಷ ಬದಲಿಸಿ ಬರುತ್ತಾರಂತೆ! ಸೆಕ್ಯೂರಿಟಿ ಗಾರ್ಡ್ ಆಗಿ ಬಂದು ಕತ್ರಿನಾರನ್ನು ಕಣ್ತುಂಬಾ ನೋಡುತ್ತಾರಂತೆ! ಎಷ್ಟೇ ಭದ್ರತೆ ಮಾಡಿದರೂ ಸಲ್ಮಾನ್ ಸೂಪರ್ ಹೀರೊನಂತೆ ಹಾರಿ ಬರುತ್ತಾರಂತೆ. ಎಲ್ಲಾ ಪ್ರಯತ್ನಗಳು ವಿಫಲವಾದ್ರೆ ಕೊನೆಗೆ ಮದುವೆ ಮಂಟಪಕ್ಕೆ ವೇಟರ್ ರೂಪದಲ್ಲಾದರೂ ಬಂದು ಕತ್ರಿನಾರನ್ನು ಇಣುಕಿ ನೋಡುತ್ತಾರಂತೆ! ಯೆಸ್, ಸಲ್ಮಾನ್ ಕತ್ರಿನಾ ಅವರನ್ನು ಈ ರೀತಿಯಾಗಿ ಟ್ರೋಲ್ ಮಾಡಲಾಗುತ್ತಿದೆ.
‘ವೇಷ ಬದಲಿಸಿ ಬರ್ತಾರಂತೆ ರಣಬೀರ್ ಕಪೂರ್
ಕತ್ರಿನಾ-ವಿಕ್ಕಿ ಮದುವೆಯ ವಿಷಯದಲ್ಲಿ ಅತಿ ಹೆಚ್ಚು ಟ್ರೋಲ್ ಆಗಿರೋದು ಸಲ್ಮಾನ್ ಖಾನ್. ಎರಡನೇ ಸ್ಥಾನ ರಣಬೀರ್ ಕಪೂರ್ಗೆ ಸಿಕ್ಕಿದೆ. ಯಾಕಂದ್ರೆ, ಸಲ್ಮಾನ್ ಜೊತೆ ಬ್ರೇಕ್ ಅಪ್ ಆದ ಬಳಿಕ ಕ್ಯಾಟ್ ಹೆಸರು ರಣಬೀರ್ ಕಪೂರ್ ಜೊತೆ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಟ್ರೋಲರ್ಗಳು ರಣಬೀರ್ ಬಗ್ಗೆಯೂ ಟ್ರೋಲ್ ಮಾಡಿದ್ದಾರೆ. ಸಲ್ಮಾನ್ ಕೊನೆಯದಾಗಿ ಸೂಪರ್ ಹೀರೋ ಆಗಿಯಾದ್ರೂ ಮದುವೆಗೆ ಬಂದೆ ಬರ್ತಾನೆ, ಇನ್ನು ರಣಬೀರ್ಗೆ ವೇಷ ಬದಲಿಸಿ ಬರೋ ದಾರಿ ಮಾತ್ರ ಉಳಿದಿದೆ ಅಂತ ಟ್ರೋಲ್ ಮಾಡಿದ್ದಾರೆ.
ವಿಕ್ಕಿ-ಕತ್ರಿನಾ ಜೋಡಿ ತುಂಬಾ ಸೀಕ್ರೆಟ್ ಆಗಿ ಮದುವೆಯಾಗ್ತಿದ್ದಾರೆ. ಮದುವೆಗೆ ಬರೋ ಅತಿಥಿಗಳಿಗೆ ನೂರಾರು ನಿರ್ಬಂಧಗಳನ್ನು ವಿಧಿಸಲಾಗಿದೆ. ಮೊಬೈಲ್ ತೆಗೆದುಕೊಂಡು ಹೋಗೋ ಹಾಗಿಲ್ಲ, ಫೋಟೋ ಕ್ಲಿಕ್ ಮಾಡುವಂತಿಲ್ಲ, ಡ್ರೋನ್ ಬಳಿಸಿ ಕದ್ದು ಫೋಟೋ ಹೋಡೆಯೋ ಹಾಗೆ ಇಲ್ಲ..ಹೌದು, ಇಂತಹ ಹತ್ತಾರು ನಿರ್ಬಂಧಗಳಿಗೆ, ಈ ನಡುವೆ ಭಾರೀ ಭದ್ರತೆ ಕಲ್ಪಿಸಲಾಗಿದೆ. ಈ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ಗಳು ಹುಟ್ಟಿಕೊಂಡಿವೆ. ‘ಈ ನಿಯಮಗಳನ್ನು ನೋಡಿದರೆ ಇದು ಮದುವೆಯೋ ಅಥವಾ ಯಾವುದಾದರೂ ಸೀಕ್ರೆಟ್ ಮಿಷನ್? ಎಂದು ನೆಟ್ಟಿಗನೊಬ್ಬ ಟ್ವೀಟ್ ಮಾಡಿದ್ದರೆ, ಇನ್ನೊಬ್ಬ ‘ಇದು ಬಹುಶಃ ಮಿಷನ್ ಇಂಪಾಸಿಬಲ್’ ಆಗಿರಬೇಕು ಎಂದಿದ್ದಾನೆ. ಇನ್ನು ಕೆಲವರು ಸಲ್ಮಾನ್ ಖಾನ್ ನಟನೆಯ ಬಾಡಿಗಾರ್ಡ್ ಸಿನಿಮಾದ ಇಮೇಜನ್ನು ಪೋಸ್ಟ್ ಮಾಡಿ ಸಲ್ಮಾನ್ನ ಸೆಕ್ಯೂರಿಟಿ ಗಾರ್ಡ್ ಆಗಿ ಮಾಡಿದರೆ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಇಬ್ಬರ ನಡುವೆ ಪ್ರೀತಿ ಬೆಳೆದಿದ್ದು ಹೇಗೆ?
ಬಿಟೌನ್ನಲ್ಲಿ ಟಾಪ್ ನಟಿಯಾಗಿ ನೆಲೆನಿಂತ ಕತ್ರಿನಾ
ಬಾಲಿವುಡ್ನ ಸುಂದರ ನಟಿ ಕತ್ರಿನಾ ಕೈಫ್. 2003 ರಲ್ಲಿ ಬಿಟೌನ್ಗೆ ಕಾಲಿಟ್ಟ ಈಕೆ ತಿರುಗಿ ನೋಡಿದ್ದೇ ಇಲ್ಲ. ಶಾರುಖ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ರಣಬೀರ್ ಕಪೂರ್…..ಹೀಗೆ ಬಾಲಿವುಡ್ನ ಟಾಪ್ ಹೀರೋಗಳ ಜೊತೆ ಅಭಿನಯ ಮಾಡಿದ್ದಾರೆ. ಅನೇಕ ಸವಾಲಿನ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾಳೆ. ಕತ್ರಿನಾ ಸೌಂದರ್ಯವನ್ನು ನೋಡಿದ ಅಭಿಮಾನಿಗಳು ನನ್ಗೂ ಇಂತಹ ಒಂದು ಹುಡ್ಗಿ ಪ್ರೀತಿಸಲು ಸಿಗಬಾರದೇ ಅಂತ ಅದೆಷ್ಟೋ ಪಡ್ಡೆ ಹುಡುಗರು ನಿದ್ದೆ ಗೆಟ್ಟಿದ್ದಾರೆ. ಈ ನಡುವೆ ಸಲ್ಮಾನ್ ಖಾನ್, ರಣಬೀರ್ ಕಪೂರ್ ಜೊತೆಗಿನ ಬ್ರೇಕ್ ಅಪ್ ನಂತ್ರ ಕ್ಯಾಟ್ ಬಿದ್ದಿರೋದು ವಿಕ್ಕಿ ಕೌಶಲ್ಗೆ, ಇಬ್ಬರು ಯಾವ ಸಿನಿಮಾದಲ್ಲಿಯೂ ರೋಮ್ಯಾನ್ಸ್ ಮಾಡಿದಿಲ್ಲ. ಆದ್ರೆ, ಅವಾರ್ಡ್ ಪ್ರೋಗ್ರಾಮ್ಗಳಲ್ಲಿ, ಸಿನಿಮಾ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಾ ಸ್ನೇಹ ಬೆಳೆದು ಸ್ನೇಹ ಪ್ರೇಮಕ್ಕೆ ತಿರುಗಿದೆ.
ಮದುವೆ ನಂತ್ರ ಸಿನಿಮಾದಿಂದ ಕ್ಯಾಟ್ ದೂರ ಆಗ್ತಾರಾ?
ಸಾಮಾನ್ಯವಾಗಿ ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ಇರೋ ಹೀರೋಯಿನ್ಗಳು ಮದುವೆಯ ನಂತ್ರ ಸಿನಿಮಾದಿಂದ ದೂರವಾದ ನೂರಾರು ಉದಾಹರಣೆಗಳು ಇವೆ. ಆದ್ರೆ, ಬಾಲಿವುಡ್ನಲ್ಲಿ ಹಾಗಲ್ಲ. ಅಲ್ಲಿ ಹೀರೋಯಿನ್ಗಳು ಮದುವೆಯ ನಂತರವೂ ಬಣ್ಣ ಹಚ್ಚುತ್ತಾರೆ. ಐಶ್ವರ್ಯ ರೈ, ರಾಣಿ ಮುಖರ್ಜಿ, ಕರಿನಾ ಕಪೂರ್, ವಿದ್ಯಾ ಬಾಲನ್…….ಹೀಗೆ ಹತ್ತಾರು ಹೀರೋಯಿನ್ಗಳು ಮದುವೆ ಆದ ಮೇಲೂ ಅಭಿನಯದಲ್ಲಿ ತೊಡಗಿದ್ದಾರೆ. ಆದ್ರೆ, ಕ್ಯಾಟ್ ಮದುವೆಯ ನಂತ್ರ ಅಭಿನಯದಿಂದ ದೂರ ಆಗ್ತಾರಾ? ಅನ್ನೋ ಪ್ರಶ್ನೆಯಿದೆ. ನಿಜಕ್ಕೂ ಆ ಪ್ರಶ್ನೆಗೆ ಈಗ ಉತ್ತರವಿಲ್ಲ.
ವಿಕ್ಕಿ-ಕತ್ರಿನಾ ಭಾರೀ ಭದ್ರತೆಯಲ್ಲಿ ವಿವಾಹವಾಗ್ತಾ ಇದ್ದಾರೆ. ಇಬ್ಬರೂ ಸ್ಟಾರ್ಗಳು ಆಗಿರೋದ್ರಿಂದ ಕುತೂಹಲ ಸಹಜ. ಹಾಗೇ ಟ್ರೋಲ್ಗಳು ಆಗುವುದು ಮಾಮೂಲಿ. ಈ ಜೋಡಿ ಟ್ರೋಲ್ಗಳ ಬಗ್ಗೆ ತಲೆಹಾಕದೇ ಸುಖ ಸಂಸಾರ ಮಾಡ್ಲಿ ಅಂತ ಶುಭ ಹಾರೈಸೋಣ.