ಕತ್ರಿನಾ ಮದುವೆಯಿಂದ ಸಲ್ಮಾನ್​ ಖಾನ್​​ಗೆ ಎದುರಾಯ್ತು ಸಂಕಷ್ಟ..!


ಸದ್ಯ ಎಲ್ಲಿ ನೋಡಿದರೂ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಮದುವೆಯ ವಿಚಾರದ್ದೇ ಸದ್ದು. ಇಷ್ಟು ದಿನ ಮದುವೆಗೆ ವಿಕ್ಕಿ ಮತ್ತು ಕ್ಯಾಟ್​ ಮಾಡಿರುವ ಭದ್ರತೆ ಬಗ್ಗೆ ಜಾಡಿಸುತ್ತಿದ್ದ ಟ್ರೋಲಿಗರು, ಈಗ ಕತ್ರಿನಾ ಕೈಫ್​ ಮಾಜಿ ಪ್ರಿಯಕರ ಬಾಲಿವುಡ್​ ಬ್ಯಾಡ್​ ಬಾಯ್​ ಸಲ್ಮಾನ್​ ಖಾನ್​ ಕಡೆಗೆ ತಿರುಗಿದ್ದಾರೆ.

ಹೌದು, ವಿಕ್ಕಿ ಮತ್ತು ಕ್ಯಾಟ್ ಮದುವೆಗೆ ಬರುವಂತೆ ಸಲ್ಮಾನ್​​​ಗೆ ಇಲ್ಲಿಯವರೆಗೆ ಆಮಂತ್ರಣವೇ ಹೋಗಿಲ್ಲವಂತೆ. ಇದೇ ವಿಚಾರವನ್ನು ಇಟ್ಟುಕೊಂಡು ಟ್ರೋಲಿಗರು ಸಲ್ಮಾನ್​ ಖಾನ್​ ಮೇಲೆ ದಾಳಿ ಮಾಡಲು ಶುರು ಮಾಡಿದ್ದಾರೆ. ಕತ್ರಿನಾ ತಮ್ಮ ಮದುವೆಗಾಗಿ ಇಷ್ಟು ಭದ್ರತೆ ಮಾಡಿಕೊಂಡಿದ್ದಾರೆ ಎಂದರೆ ಬಾಡಿಗಾರ್ಡ್​ ಆಗಿ ಸಲ್ಲುನೇ ಇರಲಿದ್ದಾರೆ ಎಂದು ಒಬ್ಬರು ಟ್ರೋಲ್​ ಮಾಡಿದ್ದಾರೆ.

ಮತ್ತೊಬ್ಬ ಇದು ಮದುವೆಯೋ ಸೀಕ್ರೇಟ್​ ಆಪರೇಷನ್ನೋ ಎಂದು ಕೇಳಿದ್ದಾರೆ. ಇನ್ನೊಬ್ಬ ಟ್ರೋಲರ್​ ಇದು ನಿಜವಾಗಲೂ ‘ಮಿಷನ್​ ಇಂಪಾಸಿಬಲ್’​ ಎಂದು ಕಾಮೆಂಟ್​ ಮಾಡಿದ್ದಾರೆ. ಕತ್ರಿನಾ ನೋಡಲು ಸಲ್ಲು ಭಾಯ್​ ವೇಟರ್ ವೇಷದಲ್ಲಿ ಬಂದೇ ಬರುತ್ತಾರೆ. ಹೀಹೆ ತರಹೇವಾರಿ ಟ್ರೋಲಿಗರು ಟ್ರೋಲ್​ ಮಾಡ್ತಿದ್ದು ಒಟ್ಟಿನಲ್ಲಿ ಕತ್ರಿನಾ ಮದುವೆಯಿಂದ ಸಲ್ಲುಗೆ ತಲೆ ನೋವು ಬಂದಿರೋದು ಮಾತ್ರ ಗ್ಯಾರಂಟಿ ಎನ್ನಲಾಗ್ತಿದೆ.

News First Live Kannada


Leave a Reply

Your email address will not be published. Required fields are marked *