‘ಕತ್ರಿನಾ-ವಿಕ್ಕಿ ಮದುವೆ ನಡೆಯುತ್ತಿಲ್ಲ’; ಅಚ್ಚರಿಯ​ ವಿಚಾರ ತೆರೆದಿಟ್ಟ ವಿಕ್ಕಿ ಕೌಶಲ್​ ಸಂಬಂಧಿ | Vicky Kaushal Katrina Kaif marriage is not taking place now says cousin Upasana Vohra


‘ಕತ್ರಿನಾ-ವಿಕ್ಕಿ ಮದುವೆ ನಡೆಯುತ್ತಿಲ್ಲ’; ಅಚ್ಚರಿಯ​ ವಿಚಾರ ತೆರೆದಿಟ್ಟ ವಿಕ್ಕಿ ಕೌಶಲ್​ ಸಂಬಂಧಿ

ಕತ್ರಿನಾ ಕೈಫ್, ವಿಕ್ಕಿ ಕೌಶಲ್

ಬಾಲಿವುಡ್​ನ (Bollywood) ಕ್ಯೂಟ್​ ಕಪಲ್​ ಕತ್ರಿನಾ ಕೈಫ್ (Katrina Kaif)​ ಮತ್ತು ವಿಕ್ಕಿ ಕೌಶಲ್ (Vicky Kaushal)​ ಅವರು ಶೀಘ್ರದಲ್ಲೇ ಹಸೆ ಮಣೆ ಏರಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಎಲ್ಲ ಮಾಧ್ಯಮಗಳಲ್ಲೂ ಮದುವೆ (Vicky Kaushal Katrina Kaif Marriage) ಕುರಿತು ಬಗೆಬಗೆಯ ಮಾಹಿತಿ ಬಿತ್ತರ ಆಗುತ್ತಿದೆ. ವಿವಾಹ ನಡೆಯುವ ದಿನಾಂಕ ಮತ್ತು ಸ್ಥಳದ ಬಗ್ಗೆಯೂ ವರದಿ ಆಗಿದೆ. ಇಷ್ಟೆಲ್ಲ ನಡೆದಿದ್ದರೂ ಕೂಡ ವಿಕ್ಕಿ ಕೌಶಲ್​ ಆಗಲಿ, ಕತ್ರಿನಾ ಕೈಫ್​ ಆಗಲಿ ಈ ವಿಚಾರದ ಬಗ್ಗೆ ಮಾತನಾಡಿಲ್ಲ. ಅಧಿಕೃತವಾಗಿ ಯಾವ ಹೇಳಿಕೆಯನ್ನೂ ನೀಡಿಲ್ಲ. ಮೌನಂ ಸಮ್ಮತಿ ಲಕ್ಷಣಂ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಈ ಮದುವೆ ನಡೆಯುತ್ತಿಲ್ಲ ಎಂಬ ಮಾಹಿತಿ ವಿಕ್ಕಿ ಕೌಶಲ್​ ಸಂಬಂಧಿಯೊಬ್ಬರಿಂದ ಹೊರಬಿದ್ದಿದೆ. ಮಾಧ್ಯಮಗಳ ದಾರಿ ತಪ್ಪಿಸಲು ಅವರು ಈ ರೀತಿ ಹೇಳಿದ್ದಾರೋ ಅಥವಾ ನಿಜವಾಗಿಯೂ ಈ ಮದುವೆ ನಡೆಯುತ್ತಿಲ್ಲವೋ ಎಂಬ ಅನುಮಾನ ಈಗ ವ್ಯಕ್ತವಾಗಿದೆ.

ವಿಕ್ಕಿ ಕೌಶಲ್​ ಅವರ ಸಂಬಂಧಿ ಉಪಾಸನಾ ವೋಹ್ರಾ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ‘ಮದುವೆ ದಿನಾಂಕ, ಸ್ಥಳ, ತಯಾರಿ ಬಗ್ಗೆ ಇರುವ ವರದಿಗಳೆಲ್ಲವೂ ಬರೀ ವದಂತಿ. ಈ ಮದುವೆ ನಡೆಯುತ್ತಿಲ್ಲ. ಒಂದು ವೇಳೆ ಅವರಿಬ್ಬರು ಸಪ್ತಪದಿ ತುಳಿಯುವುದು ನಿಜವೇ ಆಗಿದ್ದರೆ ಮಾಹಿತಿ ನೀಡುತ್ತಿದ್ದರು. ಬಾಲಿವುಡ್​ನಲ್ಲಿ ಇಂಥ ಗಾಸಿಪ್​ ಹಬ್ಬುವುದು ಸಹಜ. ಈಗಷ್ಟೇ ನಾನು ವಿಕ್ಕಿ ಕೌಶಲ್​ ಜತೆ ಮಾತನಾಡಿದ್ದೇನೆ. ಮದುವೆ ಬಗ್ಗೆ ಯಾವುದೇ ಪ್ರಸ್ತಾಪ ಆಗಿಲ್ಲ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಸದ್ಯಕ್ಕಂತೂ ಅವರಿಬ್ಬರ ಮದುವೆ ನಡೆಯುತ್ತಿಲ್ಲ’ ಎಂದು ಉಪಾಸನಾ ಹೇಳಿದ್ದಾರೆ.

ಕತ್ರಿನಾ ಮದುವೆಗೆ 1 ಲಕ್ಷ ರೂ. ಬೆಲೆಯ ಮೆಹಂದಿ?

ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರು ಮದುವೆ ವಿಚಾರದಲ್ಲಿ ಮೌನ ವಹಿಸಿದ್ದರೂ ಕೂಡ ಬಗೆಬಗೆಯ ಗಾಸಿಪ್​ಗಳು ಕೇಳಿಬರುತ್ತಲೇ ಇವೆ. ಮದುವೆಗೆ ಕೋಟ್ಯಂತರ ರೂಪಾಯಿ ಮೀಸಲು ಇಡಲಾಗಿದೆ. ಮದುವೆಗೂ ಮುನ್ನ ನಡೆಯುವ ಮೆಹಂದಿ ಶಾಸ್ತ್ರಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಲಕ್ಷಾಂತರ ರೂ. ಬೆಲೆಯ ಮೆಹಂದಿ ತರಿಸಲಾಗುತ್ತಿರುವುದು ವಿಶೇಷ. ಸದ್ಯ ಈ ವಿಚಾರದ ಬಗ್ಗೆ ಗುಸುಗುಸು ಕೇಳಿಬರುತ್ತಿದೆ. ಬರೋಬ್ಬರಿ 1 ಲಕ್ಷ ರೂಪಾಯಿಯನ್ನು ಮೆಹಂದಿಗಾಗಿ ಖರ್ಚು ಮಾಡಲಾಗುತ್ತಿದೆ.

ವಿಕ್ಕಿ ಕೌಶಲ್​ ಹಿಂದು, ಕತ್ರಿನಾ ಕೈಫ್​ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಎರಡೂ ಧರ್ಮದ ಸಂಪ್ರದಾಯದ ಪ್ರಕಾರ ಮದುವೆ ನಡೆಯಲಿದೆ. ಇದಕ್ಕಾಗಿ ರಾಜಸ್ಥಾನದ ಐಷಾರಾಮಿ ಹೋಟೆಲ್​ ಬುಕ್​ ಆಗಿದೆ. ಜೋಧ್​ಪುರದ ಪಾಲಿ ಜಿಲ್ಲೆಯಿಂದ ವಿಶೇಷ ಮೆಹಂದಿಯನ್ನು ತರಿಸಲಾಗುತ್ತಿದೆ ಎಂದು ಸುದ್ದಿ ಆಗಿದೆ. ಈ ಮೆಹಂದಿ ಬೆಲೆ ಒಂದು ಲಕ್ಷ ರೂಪಾಯಿ ಎಂಬುದನ್ನು ತಿಳಿದು ಅಭಿಮಾನಿಗಳು ಕಣ್ಣರಳಿಸುತ್ತಿದ್ದಾರೆ.

ಇದನ್ನೂ ಓದಿ:

ಮದುವೆ ಬಳಿಕ KKK ಎಂದು ಬದಲಾಗುತ್ತೆ ಕತ್ರಿನಾ ಕೈಫ್​ ಹೆಸರು; ಏನಿದರ ಅರ್ಥ?

ಕತ್ರಿನಾ-ವಿಕ್ಕಿ ವಿವಾಹ: ವೈರಲ್​ ಆಗಿದ್ದ ಸಲ್ಮಾನ್​-ಕತ್ರಿನಾ ಮದುವೆ ವಿಡಿಯೋದ ಅಸಲಿಯತ್ತೇನು?

TV9 Kannada


Leave a Reply

Your email address will not be published. Required fields are marked *