ಕತ್ರಿನಾ-ವಿಕ್ಕಿ ವಿವಾಹ: ವೈರಲ್​ ಆಗಿದ್ದ ಸಲ್ಮಾನ್​-ಕತ್ರಿನಾ ಮದುವೆ ವಿಡಿಯೋದ ಅಸಲಿಯತ್ತೇನು? | Katrina Kaif Vicky Kaushal wedding: What is the truth behind Salman Khan Katrina Kaif marriage video


ಕತ್ರಿನಾ-ವಿಕ್ಕಿ ವಿವಾಹ: ವೈರಲ್​ ಆಗಿದ್ದ ಸಲ್ಮಾನ್​-ಕತ್ರಿನಾ ಮದುವೆ ವಿಡಿಯೋದ ಅಸಲಿಯತ್ತೇನು?

ವೈರಲ್​ ಆಗಿದ್ದ ಸಲ್ಮಾನ್​-ಕತ್ರಿನಾ ವಿಡಿಯೋ, ಕತ್ರಿನಾ-ವಿಕ್ಕಿ ಕೌಶಲ್​

ಕತ್ರಿನಾ ಕೈಫ್ (Katrina Kaif)​ ಮತ್ತು ವಿಕ್ಕಿ ಕೌಶಲ್​ (Vicky Kaushal) ಮದುವೆ ಆಗಲು ಸಜ್ಜಾಗಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಭಾರಿ ಯಶಸ್ಸು ಕಂಡಿರುವ ಕತ್ರಿನಾ ಕೈಫ್​ ಅವರು ವೈಯಕ್ತಿಕ ಬದುಕಿನಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ಪ್ರೀತಿ ವಿಚಾರದಲ್ಲಿ ಅವರು ಮೋಸ ಹೋಗಿದ್ದರು. ರಣಬೀರ್​ ಕಪೂರ್​ ಜೊತೆ ಅವರಿಗೆ ಪ್ರೀತಿ ಚಿಗುರಿತ್ತು. ಅವರಿಬ್ಬರು ಜೊತೆಜೊತೆಯಾಗಿ ದೇಶ-ವಿದೇಶ ಸುತ್ತಿದ್ದರು. ಕಡೆಗೂ ಆ ಸಂಬಂಧ ಬ್ರೇಕಪ್​ನಲ್ಲಿ ಅಂತ್ಯವಾಗಿತ್ತು. ಬಳಿಕ ಕತ್ರಿನಾ ಕೈಫ್​ ಅವರು ಸಲ್ಮಾನ್​ ಖಾನ್​ (Salman Khan) ಬಳಗದಲ್ಲಿ ಹೆಚ್ಚು ಗುರುತಿಸಿಕೊಂಡರು. ಅಲ್ಲದೇ, ಸಲ್ಲು ಜೊತೆ ಅವರು ಡೇಟಿಂಗ್​ ನಡೆಸುತ್ತಿದ್ದಾರೆ ಎಂಬುದು ಕೂಡ ಸಾಬೀತಾಗಿತ್ತು. ಅಷ್ಟೇ ಅಲ್ಲ, ಏಕಾಏಕಿ ಸಲ್ಮಾನ್​ ಖಾನ್​-ಕತ್ರಿನಾ ಕೈಫ್​ ಮದುವೆ ವಿಡಿಯೋ ಕೂಡ ಒಮ್ಮೆ ವೈರಲ್​ ಆಗಿತ್ತು. ಅದನ್ನು ಕಂಡು ಎಲ್ಲರಿಗೂ ಅಚ್ಚರಿ ಆಗಿತ್ತು. ಆ ವಿಡಿಯೋದ ಅಸಲಿತ್ತೇನು? ಇಲ್ಲಿದೆ ಉತ್ತರ..

ಮದುವೆ ದಿರಿಸಿನಲ್ಲಿ ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ಸಜ್ಜಾಗಿದ್ದರು. ಇಡೀ ವಾತಾವರಣವನ್ನು ಹೂವು, ತೋರಣಗಳಿಂದ ಅಲಂಕರಿಸಲಾಗಿತ್ತು. ಸಾಕಷ್ಟು ಅತಿಥಿಗಳೂ ಬಂದಿದ್ದರು. ನಟ ಸುನಿಲ್​ ಗ್ರೋವರ್​ ಅವರು ಭಾಗಿ ಆಗಿದ್ದರು. ಎಲ್ಲರ ಸಮ್ಮುಖದಲ್ಲಿ ಕತ್ರಿನಾ ಮತ್ತು ಸಲ್ಲು ಹಾರ ಬದಲಾಯಿಸಿಕೊಳ್ಳುತ್ತಿರುವ ದೃಶ್ಯ ಆ ವಿಡಿಯೋದಲ್ಲಿತ್ತು! ಕೆಲವೇ ನಿಮಿಷಗಳಲ್ಲಿ ಅದು ವೈರಲ್​ ಆಗಿತ್ತು. ಎಲ್ಲರ ಮೊಬೈಲ್​ಗಳಲ್ಲೂ ಹರಿದಾಡಿತ್ತು. ಸಲ್ಲು-ಕತ್ರಿನಾ ಮದುವೆ ಆಗಿಯೇ ಬಿಟ್ಟರು ಎಂದು ಎಲ್ಲರೂ ಅಂದುಕೊಂಡರು. ಆದರೆ ಅಸಲಿಯತ್ತು ಅದಾಗಿರಲಿಲ್ಲ.

ಹೌದು, ಅದು ನಿಜವಾದ ಮದುವೆಯ ವಿಡಿಯೋ ಅಲ್ಲ ಎಂಬುದು ಗೊತ್ತಾಗಲು ಕೆಲವು ನಿಮಿಷಗಳೇ ಹಿಡಿದಿದ್ದವು. ಅಸಲಿ ವಿಷಯ ಏನೆಂದರೆ, ‘ಭಾರತ್​’ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಮತ್ತು ಕತ್ರಿನಾ ಕೈಫ್​ ಮದುವೆ ಆಗುವ ದೃಶ್ಯ ಇದೆ. ಅದರ ಶೂಟಿಂಗ್​ ಸಂದರ್ಭದ ವಿಡಿಯೋ ಲೀಕ್​ ಆಗಿತ್ತು. ತಕ್ಷಣಕ್ಕೆ ಅದನ್ನು ನೋಡಿದ ಅನೇಕರು ಇದು ನಿಜವಾದ ಮದುವೆ ಎಂದೇ ಭಾವಿಸಿದ್ದರು. ಆದರೆ ಅದು ಶೂಟಿಂಗ್​ ಶಾದಿ ಎಂಬುದು ನಂತರ ಗೊತ್ತಾಯಿತು.

ಅದೇನೇ ಇರಲಿ, ಸಲ್ಮಾನ್​ ಖಾನ್​ ಜೊತೆಗಿನ ಕತ್ರಿನಾ ಅವರ ಪ್ರೀತಿ-ಪ್ರೇಮ ಹೆಚ್ಚು ದಿನ ಬಾಳಿಕೆ ಬರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ವಿಕ್ಕಿ ಕೌಶಲ್​ ಕಡೆಗೆ ಕತ್ರಿನಾ ಆಕರ್ಷಿತರಾದರು. ಈಗ ಅವರು ಮದುವೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ. ಡಿಸೆಂಬರ್​ 7ರಿಂದ 9ರವರೆಗೆ ಜೈಪುರದ ಖಾಸಗಿ ಹೋಟೆಲ್​ನಲ್ಲಿ ಅವರ ಮದುವೆ ನಡೆಯಲಿದೆ ಎಂದು ವರದಿ ಆಗಿದೆ. ಆದರೆ ಈ ವಿಚಾರವನ್ನು ವಿಕ್ಕಿ ಕೌಶಲ್​ ಅವರಾಗಲಿ, ಕತ್ರಿನಾ ಅವರಾಗಲಿ ಅಧಿಕೃತವಾಗಿ ಹೇಳಿಕೊಂಡಿಲ್ಲ. ಮದುವೆಗೆ ಆಹ್ವಾನಿತರ ಪಟ್ಟಿ ಕೂಡ ತಯಾರಾಗಿದೆ ಎಂಬ ಸುದ್ದಿ ಕೇಳಿಬಂದಿದೆ.

ಇದನ್ನೂ ಓದಿ:

ಜೋರಾಗಿದೆ ಕತ್ರಿನಾ-ವಿಕ್ಕಿ ಮದುವೆ ತಯಾರಿ; ಇತರೆ ಸೆಲೆಬ್ರಿಟಿಗಳಿಗೆ ಕಿರಿಕಿರಿ: ಕಾರಣ ಏನು?

ಕತ್ರಿನಾ ಮದುವೆಯಾಗುತ್ತಿರುವ ಹೋಟೆಲ್​ನಲ್ಲಿ ಒಂದು ರಾತ್ರಿ ಕಳೆಯಲು ಐದು ಲಕ್ಷ ಪಾವತಿಸಬೇಕು

TV9 Kannada


Leave a Reply

Your email address will not be published. Required fields are marked *