ಕತ್ರೀನಾ ಕೈಫ್ ಕೆನ್ನೆಯಂತಹ ನುಣುಪಾದ ರಸ್ತೆ ನಿರ್ಮಿಸಬೇಕು; ವಿವಾದಾತ್ಮಕ ಹೇಳಿಕೆ ನೀಡಿದ ರಾಜಸ್ಥಾನ ಸಚಿವ  | Rajasthan new minister says roads should be made like Katrina Kaif cheeks watch video

ಕತ್ರೀನಾ ಕೈಫ್ ಕೆನ್ನೆಯಂತಹ ನುಣುಪಾದ ರಸ್ತೆ ನಿರ್ಮಿಸಬೇಕು; ವಿವಾದಾತ್ಮಕ ಹೇಳಿಕೆ ನೀಡಿದ ರಾಜಸ್ಥಾನ ಸಚಿವ 

ಸಚಿವ ರಾಜೇಂದ್ರ ಸಿಂಗ್, ಮಟಿ ಕತ್ರಿನಾ ಕೈಫ್ (ಸಾಂದರ್ಭಿಕ ಚಿತ್ರ)

ರಾಜಸ್ಥಾನ: 2005ರಲ್ಲಿ ಆಗಿನ ರೈಲ್ವೆ ಮಂತ್ರಿಯಾಗಿದ್ದ ಲಾಲು ಪ್ರಸಾದ್ ಯಾದವ್, ಬಿಹಾರದ ರಸ್ತೆಗಳು ಹೇಮಾ ಮಾಲಿನಿಯವರ ಕೆನ್ನೆಯಂತಾಗಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆ ಹೇಳಿಕೆ ದೇಶಾದ್ಯಂತ ತೀವ್ರ ವಿವಾದ ಹುಟ್ಟುಹಾಕಿತ್ತು. ಇದೇ ಮಾದರಿಯಲ್ಲಿ ಸೈನಿಕ ಕಲ್ಯಾಣ ಖಾತೆ ರಾಜ್ಯ ಸಚಿವ ರಾಜೇಂದ್ರ ಸಿಂಗ್ ಗುಢ ಇತ್ತೀಚೆಗೆ ಹೇಳಿಕೆ ನೀಡಿದ್ದು, ರಸ್ತೆಗಳು ಕತ್ರಿನಾ ಕೈಫ್ ಕೆನ್ನೆಯಂತಾಗಬೇಕು ಎಂದಿದ್ದಾರೆ. ಇದು ಎಲ್ಲೆಡೆ ವಿವಾದಕ್ಕೆ ಕಾರಣವಾಗಿದೆ. ಮಂಗಳವಾರದಂದು ಜುಂಜು ಜಿಲ್ಲೆಯ ಪಾಂಖ್ ಗ್ರಾಮದಲ್ಲಿ ಗ್ರಾಮ ಅಭಿಯಾನವಿತ್ತು. ಅದರಲ್ಲಿ ಪಿಡಬ್ಲ್ಯುಡಿ ಇಲಾಖೆಯ ಎನ್​ಕೆ ಜೋಶಿ ವಿವರಣೆ ನೀಡುತ್ತಿದ್ದರು. ಮಧ್ಯದಲ್ಲಿ ಅವರಿಂದ ಮೈಕ್ ತೆಗೆದುಕೊಂಡ ಸಚಿವ ರಾಜೇಂದ್ರ ಸಿಂಗ್, ‘‘ರಸ್ತೆಗಳನ್ನು ಹೇಮಾ ಮಾಲಿನಿಯ ಕೆನ್ನೆಯಂತೆ ಮಾಡಬೇಕು’’ ಎಂದು ಹೇಳಿದರು. ಆದರೆ ನಂತರ ಅವರು, ಇದೀಗ ಹೇಮಾ ಮಾಲಿನಿ ಅವರಿಗೆ ವಯಸ್ಸಾಗಿದೆ ಎಂದರು. ನೆರೆದಿದ್ದ ಸಭಿಕರಲ್ಲಿ, ಈಗಿನ ಖ್ಯಾತ ನಟಿ ಯಾರು ಎಂದು ಸಚಿವರು ಕೇಳಿದರು.

ಸಭಿಕರು, ಕತ್ರಿನಾ ಕೈಫ್ ಎಂದು ಉತ್ತರಿಸಿದಾಗ, ಸಚಿವ ರಾಜೇಂದ್ರ ಸಿಂಗ್ ‘‘ರಸ್ತೆಗಳನ್ನು ಕತ್ರಿನಾ ಕೈಫ್ ಕೆನ್ನೆಯಂತೆ ಮಾಡಬೇಕು’’ ಎಂದು ನಗುತ್ತಾ ನಿರ್ದೇಶಿಸಿದರು. ಇದು ಸಭೆಯಲ್ಲೂ ನಗು ಉಕ್ಕಲು ಕಾರಣವಾಗಿದೆ. ಆದರೆ ಇದು ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.

ಸಚಿವ ರಾಜೇಂದ್ರ ಸಿಂಗ್ ಮಾತನಾಡಿರುವ ವಿಡಿಯೋ ಇಲ್ಲಿದೆ:

‘ಹೇಮಾ ಮಾಲಿನಿಯವರ ಕೆನ್ನೆಯಂತೆ ರಸ್ತೆ ನಿರ್ಮಿಸಬೇಕು’; ಈ ಹೇಳಿಕೆ ಇದೇ ಮೊದಲೇನಲ್ಲ! ಮೊದಲು ಯಾರೆಲ್ಲಾ ಹೇಳಿದ್ದರು ಎಂಬ ವಿವರ ಇಲ್ಲಿದೆ:
2005 ರಲ್ಲಿ ಆಗಿನ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ರಸ್ತೆಗಳ ಬಗ್ಗೆ ಹೇಮಾ ಮಾಲಿನಿ ಅವರ ಕೆನ್ನೆಯಂತೆಯೇ ಇಲ್ಲಿನ ರಸ್ತೆಗಳು ಸುಗಮವಾಗಿರುತ್ತವೆ ಎಂದು ಹೇಳಿದ್ದರು. ಈ ವಿವಾದದ ನಂತರ 2013 ರಲ್ಲಿ ಆಗಿನ ಉತ್ತರ ಪ್ರದೇಶ ಸಚಿವ ರಾಜಾರಾಮ್ ಪಾಂಡೆ ಅವರು ಹೇಮಾ ಮಾಲಿನಿ ಅವರ ಕೆನ್ನೆಗಳನ್ನು ಉತ್ತಮ ರಸ್ತೆಗೆ ಹೋಲಿಸಿದ್ದರು. 2019 ರ ಅಕ್ಟೋಬರ್‌ನಲ್ಲಿ ಮಧ್ಯಪ್ರದೇಶದ ಆಗಿನ ಸಚಿವ ಪಿಸಿ ಶರ್ಮಾ ಅವರು ಇದೇ ರೀತಿಯ ಹೇಳಿಕೆ ನೀಡಿದ್ದರು. ಇದರ ನಂತರ, 2019ರ ನವೆಂಬರ್​ನಲ್ಲಿ ಛತ್ತೀಸ್‌ಗಢದ ಅಂದಿನ ಸಚಿವ ಖವಾಸಿ ಲಖ್ಮಾ ಕೂಡ ಹೇಮಾ ಮಾಲಿನಿಯ ಕೆನ್ನೆಯಂತಹ ರಸ್ತೆಗಳನ್ನು ನಿರ್ಮಿಸಲು ಹೇಳಿಕೆ ನೀಡಿದ್ದರು. ಇದೀಗ ಈ ಸಾಲಿಗೆ ರಾಜಸ್ಥಾನದ ಸಚಿವ ರಾಜೇಂದ್ರ ಸಿಂಗ್ ಕೂಡ ಸೇರ್ಪಡೆಯಾಗಿದ್ದು, ಅವರು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, ಕತ್ರಿನಾ ಕೈಫ್ ಕೆನ್ನೆಯನ್ನು ಉದಾಹರಿಸಿದ್ದಾರೆ.

ಹೇಮಾ ಮಾಲಿನಿ ಮಥುರಾದಿಂದ ಬಿಜೆಪಿಯ ಸಂಸದರಾಗಿ ಆಯ್ಕೆಗೊಂಡಿದ್ದರು. ಅಚ್ಚರಿಯ ವಿಚಾರವೆಂದರೆ ಇದುವರೆಗೆ ಹೇಮಾ ಮಾಲಿನಿ ಕೆನ್ನೆಯನ್ನು ರಸ್ತೆಗೆ ಹೋಲಿಸಿ ಹೇಳಿಕೆ ನೀಡಿರುವ ಎಲ್ಲಾ ಸಚಿವರೂ ಬಿಜೆಪಿಯ ವಿರೋಧ ಪಕ್ಷಗಳಿಂದ ಬಂದವರಾಗಿದ್ದಾರೆ!

ಇದನ್ನೂ ಓದಿ:

ಬಾತ್ ರೂಂ ಮತ್ತು ವಾಶ್ ಬೇಶನ್ ಪೈಪ್​ನಲ್ಲಿ ದುಡ್ಡಿನ ಕಂತೆ ಹಾಕಿದ್ದ ಪಿಡಬ್ಲೂಡಿ ಶಾಂತಗೌಡ; ವಿಡಿಯೋ ನೋಡಿ

Madhuri Dixit: ಮಾಧುರಿ ದೀಕ್ಷಿತ್ ನೃತ್ಯಕ್ಕೆ ಫಿದಾ ಆದ ಅಭಿಮಾನಿಗಳು; ವಿಡಿಯೋ ನೋಡಿ

TV9 Kannada

Leave a comment

Your email address will not be published. Required fields are marked *