ಪಟ್ನಾ: ತನ್ನ ಕನಸಿನಲ್ಲಿ ಬಂದು ಮಾಂತ್ರೀಕನೊಬ್ಬ ರೇಪ್​ ಮಾಡುತ್ತಿದ್ದಾನೆ ಎಂದು ಮಹಿಳೆಯೊಬ್ಬರು ದೂರು ದಾಖಲಿಸಿದ ವಿಲಕ್ಷಣ ಘಟನೆ ಬಿಹಾರದ ಔರಂಗಬಾದ್​​​ನಲ್ಲಿ ನಡೆದಿದೆ.

ಜೂನ್ 23ರ ಬುಧವಾರ ಔರಂಗಬಾದ್ ಪೊಲೀಸ್ ಠಾಣೆಗೆ ಬಂದು ಮಹಿಳೆ ದೂರು ದಾಖಲಿಸಿದ್ದು, ಮಾಂತ್ರೀಕನೊಬ್ಬ ತನ್ನ ಕನಸಿನಲ್ಲಿ ಬಂದು ಪದೇ ಪದೇ ರೇಪ್​ ಮಾಡುತ್ತಿದ್ದಾನೆ ಎಂದು ದೂರು ನೀಡಿ ಆತನ ವಿರುದ್ಧ ಕ್ರಮಕೈಗೊವಂತೆ ತಿಳಿಸಿದ್ದಾರೆ.

ಔರಂಗಬಾದ್​ ಪೊಲೀಸ್​ ಠಾಣೆಯ ಎಸ್​ಎಚ್​​ಒ ಅವರಿಗೆ ಘಟನೆ ಬಗ್ಗೆ ಮಹಿಳೆ ನೀಡಿದ್ದು, ತನ್ನ ಮಗನಿಗೆ ಅನಾರೋಗ್ಯ ಕಾಡುತ್ತಿದ್ದ ಕಾರಣ ಜನವರಿಯಲ್ಲಿ ಅಂಜನಿ ಕುಮಾರ್ ಎಂಬಾತನನ್ನು ಕಾಳಿ ಬರಿ ದೇವನಸ್ಥಾನದಲ್ಲಿ ಭೇಟಿಯಾಗಿದ್ದೆ. ಮಗನ ಆರೋಗ್ಯದಲ್ಲಿ ಚೇತರಿಕೆಯಾಗುವಂತೆ ಆತ ಹೇಳಿದ ಪೂಜೆಗಳನ್ನು ಮಾಡಿಸಿದ್ದೆ. ಆದರೆ ಆದಾದ 15 ದಿನಗಳ ಬಳಿಕ ಸಾವನ್ನಪ್ಪಿದ. ಆ ಬಳಿಕ ಆತ ನನ್ನ ಕನಸ್ಸಿನಲ್ಲಿ ಬಂದು ಕಿರುಕುಳ ಕೊಡಲು ಆರಂಭ ಮಾಡಿದ್ದ. ಹಲವು ಸಂದರ್ಭಗಳಲ್ಲಿ ನನ್ನ ರೇಪ್​ ಮಾಡಿದ್ದಾನೆ ಎಂದು ವಿವರಿಸಿದ್ದಾಳೆ.

ಇನ್ನು ಮಹಿಳೆಯ ದೂರಿನ ಮೇರೆಗೆ ಪೊಲೀಸರು ವ್ಯಕ್ತಿಗೆ ನೋಟಿಸ್​ ನೀಡಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದು, ಆತ ಕೂಡ ಮಹಿಳೆಯನ್ನು ದೇವಸ್ಥಾನದಲ್ಲಿ ಭೇಟಿಯಾಗಿದನ್ನು ಒಪ್ಪಿಕೊಂಡಿದ್ದಾನೆ. ಆದರೆ ಆ ಬಳಿಕ ಮಹಿಳೆಗೆ ಏನಾಯ್ತು ಗೊತ್ತಿಲ್ಲ. ಅಲ್ಲದೇ ಮಗನನ್ನು ಕಳೆದುಕೊಂಡು ಬಳಿಕ ಅವರು ಮಾನಸಿಕವಾಗಿ ನೊಂದಿದ್ದಾರೆ ಎಂದು ತಿಳಿಸಿದ್ದಾನೆ.

ಮಹಿಳೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ ಕಾರಣ ಆತನ ವಿಚಾರಣೆ ನಡೆಸಿದ್ದೇವೆ. ಆದರೆ ಆಕೆ ಮಾನಸಿಕವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಕಾಣುತ್ತಿದೆ. ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿ ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸಲು ತಿಳಿಸಿದ್ದೇವೆ ಎಂದು ಔರಂಗಬಾದ್​ ಡಿಎಸ್​​ಪಿ ಲಲಿತ್​​ ನಾರಾಯಣ್​ ಪಾಂಡೆ ತಿಳಿಸಿದ್ದಾರೆ.

The post ‘ಕನಸಿನಲ್ಲಿ ಬಂದು ಪದೇ ಪದೇ ರೇಪ್​ ಮಾಡಿದ್ದಾನೆ’ ಪೊಲೀಸ್​ ದೂರು ದಾಖಲಿಸಿದ ಮಹಿಳೆ appeared first on News First Kannada.

Source: newsfirstlive.com

Source link