ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಬಹುದಿನಗಳ ಕನಸು ಇಂದು ನೆರವೇರಿದೆ..

ನಂದಗೋಕುಲ ಧಾರಾವಾಹಿಯಿಂದ ಜೊತೆ ಜೊತೆಯಾಗಿಯೇ ಸಿನಿಮಾ ರಂಗದಲ್ಲಿ ಸಪ್ತಪದಿ ತುಳಿದವರು ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್​​ .. ಈ ಮೊಗ್ಗಿನ ಮನಸಿನ ಪ್ರೇಮ ಪಕ್ಷಿಗಳಿಗೆ ಆರ್ತಿಗೊಬ್ಬ ಕೀರ್ತಿಗೊಬ್ಬ ಎಂಬುವಂತೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.. ಅಪಾರ ಸ್ನೇಹಿತರು , ಸಾಗರದಷ್ಟು ಅಭಿಮಾನಿಗಳನ್ನ ಸಂಪಾದಿಸಿರುವ ಈ ರಾಕಿಂಗ್ ಜೋಡಿಗೆ ಬಹುದಿನಗಳಿಂದ ಒಂದು ಕನಸಿತ್ತು.. ಆ ಕಸನು ಇಂದು ನೆರವೇರಿದೆ.. ಹಾಗಾದ್ರೆ ಯಾವ ಕನಸು ಅದು ಅನ್ನೋದಕ್ಕೆ ಉತ್ತರ.. ನೂತನ ಮನೆ..

ಅದ್ಯಾರೇ ಹೊಸ ಜೋಡಿಗಳಾಗಿರಲಿ.. ಸ್ವಂತಕ್ಕೆ ಒಂದು ಮನೆ ಇರಬೇಕು ಅನ್ನೋ ಕನಸು ಇದ್ದೇ ಇರುತ್ತೆ.. ಯಶ್ ಮತ್ತು ರಾಧಿಕಾ ಜೋಡಿಯಲ್ಲ ಅದಿತ್ತು.. ಆ ನೂತನ ಮನೆಯ ಕನಸು ಈಡೇರಿದೆ.. ಬೆಂಗಳೂರಿನ ವಿಡ್ಸನ್ ಮ್ಯಾನರ್ ಬಳಿ ಇರೋ ಪ್ರಸ್ಟೀಜ್ ಅಪಾರ್ಟ್ಮೆಂಟ್ ನಲ್ಲಿ ಮನೆ ಖರಿಸಿದ್ದಾರೆ ಯಶ್ ಮತ್ತು ರಾಧಿಕಾ..

ಕೋವಿಡ್ ನಿಂಬಂಧನೆಗಳು ಇರೋ ಕಾರಣ ಸರಳವಾಗಿ ಗೃಹ ಪ್ರವೇಶವಾಗಿದೆ.. ನೂತನ ಮನೆ ಗೃಹ ಪ್ರವೇಶಕ್ಕೆ ಯಶ್-ಮತ್ತು ರಾಧಿಕಾ ತನ್ನ ಆತ್ಮೀಯ ಬಳಗ ಹಾಗೂ ಕುಟುಂಬದವರು ಮಾತ್ರ ಸಾಕ್ಷಿಯಾಗಿದ್ದಾರೆ..

The post ಕನಸು ನನಸಾದ ಖುಷಿಯಲ್ಲಿ ಯಶ್ ದಂಪತಿ.. ರಾಕಿ ಬಾಯ್ ನೂತನ ಮನೆಯ ಝಲಕ್ ಇಲ್ಲಿದೆ appeared first on News First Kannada.

Source: newsfirstlive.com

Source link