ಕೊರೊನಾ ಎರಡನೇ ಅಲೆ ದೇಶದಲ್ಲಿ ಸಿಕ್ಕಾಪಟ್ಟೆ ಬೆಳೆದು ನಿಂತಿದೆ. ದಿನಕ್ಕೆ ಮೂರು ಲಕ್ಷದಷ್ಟು ಕೊರೊನಾ ಪ್ರಕರಣಗಳು ಭಾರತದಲ್ಲಿ ಕಂಡು ಬರ್ತಿದೆ. ಈಗಾಗಲೇ ಈ ಹೆಮ್ಮಾರಿಗೆ ಸ್ಯಾಂಡಲ್​ವುಡ್​ನ ಅನೇಕ ತಂತ್ರಜ್ಞರು, ನಟರು ಪ್ರಾಣ ತೆತ್ತಿದ್ದು, ಇದೀಗ ಈ ಸಾಲಿಗೆ ಯುವ ನಿರ್ದೇಶಕರೊಬ್ಬರು ಸೇರಿದ್ದಾರೆ.

ಹೌದು.. ಕನ್ನಡದಲ್ಲಿ ಒನ್​ ಡೇ ಅನ್ನೋ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದ ನವೀನ್​​, ಕೊರೊನಾ ಕಾರಣ ಕೊನೆಯುಸಿರೆಳೆದಿದ್ದಾರೆ. ಮಂಡ್ಯ ಮೂಲದ ನವೀನ್​ ತಮ್ಮ 34ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ. ನವೀನ್​ ನಿರ್ದೇಶನದ ಒನ್​ ಡೇ ಸಿನಿಮಾದಲ್ಲಿ ಅಪ್ಪು ವೆಂಕಟೇಶ್​ ಹಾಗೂ ರೇವಣ್ಣ ನಟಿಸಿದ್ದರು.

The post ಕನಸು ಹೊತ್ತು ಮಂಡ್ಯದಿಂದ ಬಂದಿದ್ದ ಯುವ ನಿರ್ದೇಶಕನನ್ನ ಬಲಿ ಪಡೆದ ಕೊರೊನಾ appeared first on News First Kannada.

Source: newsfirstlive.com

Source link