ನವದೆಹಲಿ: ಭಾರತೀಯ ಮಾದರಿಯ B.1.617 ಅಥವಾ ಡಬಲ್ ಮ್ಯೂಟಂಟ್ ಕೊರೊನಾ ವೈರಸ್ ಕನಿಷ್ಟ 17 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

B.1.617, SARS-CoV2ನ ವೇರಿಯಂಟ್ ಆಗಿದೆ. ಇದೇ ವೇರಿಯಂಟ್​ನಿಂದ ಭಾರತದಲ್ಲಿ ಅತಿಹೆಚ್ಚು ಸೋಂಕು ಪ್ರಕರಣಗಳಿಗೆ ಕಾರಣವಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತು ತನ್ನ ಪ್ರಬಂಧವೊಂದರಲ್ಲಿ ಉಲ್ಲೇಖಿಸಿದೆ.

ಏಪ್ರಿಲ್ 27 ರಂದು ಒಟ್ಟು 17 ದೇಶಗಳಿಂದ B.1.617 ವೇರಿಯಂಟ್​ನ 1,200 ಸೀಕ್ವೆನ್ಸ್​ಗಳು ಅಪ್ಲೋಡ್ ಆಗಿವೆ. ಅದ್ರಲ್ಲಿ ಅತಿಹೆಚ್ಚು ಸೀಕ್ವೆನ್ಸ್​ಗಳು ಭಾರತ, ಯುನೈಟೆಡ್ ಕಿಂಗ್​ಡಮ್ ಮತ್ತು ಯುಎಸ್​ಎನಿಂದ ಅಪ್ಲೋಡ್ ಆಗಿವೆ . ಬೇರೆಲ್ಲ ವೇರಿಯಂಟ್ಸ್​ಗಳಿಗಿಂತಲೂ ಭಾರತದ ವೇರಿಯಂಟ್ B.1.617 ಹೆಚ್ಚಿನ ಹರಡುವ ಸಾಮರ್ಥ್ಯ ಹೊಂದಿದೆ ಎಂದು WHO ಹೇಳಿದೆ.

The post ಕನಿಷ್ಠ 17 ದೇಶಗಳಲ್ಲಿ ಭಾರತೀಯ ವೇರಿಯಂಟ್ ಕೊರೊನಾ ವೈರಸ್ ಪತ್ತೆ- WHO ಆತಂಕ appeared first on News First Kannada.

Source: newsfirstlive.com

Source link