ಕನ್ನಡತಿ ಅನುಷ್ಕಾಗೆ ಕಾಲುಂಗುರ ತೊಡಿಸಲು ಸಜ್ಜಾದ್ರಾ ಬಾಹುಬಲಿ ಪ್ರಭಾಸ್​?

ಬಾಹುಬಲಿ ಬಳಿಕ ಅನುಷ್ಕಾ ಶೆಟ್ಟಿ ಮದುವೆ ವಿಚಾರ ಸೌಥ್​ ಸಿನಿ ದುನಿಯಾದಲ್ಲಿ ಸಾಕಷ್ಟು ಚರ್ಚೆಯಲ್ಲಿದೆ. ಮೊದಲು ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಇಬ್ಬರೂ ಬಾಹುಬಲಿ ಬಿಡುಗಡೆ ಬಳಿಕ ಮದುವೆ ಆಗ್ತಾರೆ ಎಂಬ ಗುಮಾನಿಯಿತ್ತು. ಆದ್ರೆ ಎಲ್ಲ ಗಾಸಿಪ್​ಗಳಿಗೆ ಮೌನ ಮುರಿದಿದ್ದ ಸ್ಟಾರ್ಸ್​ ನಾವಿಬ್ಬರು ಸ್ನೇಹಿತರು ಅಂತ ಹೇಳಿ ಗಾಸಿಪ್​ ಗಲ್ಲಾಪೆಟ್ಟಿಗೆ ಬಾಯಿ ಮುಚ್ಚಿಸಿದ್ರು.

ಅಲ್ಲಿಂದ ಸ್ವಲ್ಪ ದಿನ ಈ ಗಾಸಿಪ್ ಸೈಲೆಂಟ್ ಆಗಿತ್ತು. ಈಗ ಮತ್ತೆ ಅನುಷ್ಕಾ ಶೆಟ್ಟಿ ವಿವಾಹದ ಬಗ್ಗೆ ಚರ್ಚೆಯೋಮದು ಅಭಿಮಾನಿಗಳ ಅಂಗಳದಲ್ಲಿ ಬಂದು ನಿಂತಿದೆ. ತಮ್ಮನ ನೆಚ್ಚಿನ ನಟ ನಟಿಯರು ವಿವಾಹವಾದ್ರೆ ಎಂದ ಇರುತ್ತೆ ಎಂದು ಸೋಷಿಯಲ್​ ಸಮುದ್ರದಲ್ಲಿ ಮಾತನಾಡುತ್ತಿದ್ದಾರೆ . ಆದರೆ ಈ ಹೊತ್ತಲ್ಲಿ ಅನುಷ್ಕಾ ದುಬೈ ಮೂಲದ ಉದ್ಯಮಿಯನ್ನ ವಿವಾಹವಾಗ್ತಾರೆ ಅನ್ನೋ ಮಾತುಗಳು ಅಷ್ಟೇ ಬಲವಾಗಿ ಕೇಳಿ ಬರ್ತಿದ್ದು ಅಭಿಮಾನಿಗಳ ನಿರಾಸೆಯನ್ನುಂಟು ಮಾಡಿದೆ ಎನ್ನಲಾಗ್ತಿದೆ.

ಈ ಮದುವೆಗೆ  ಈಗಾಗ್ಲೇ ಎರಡೂ ಮನೆಯವರೂ ಒಪ್ಪಿಗೆ ಸೂಚಿಸಿದ್ದಾರೆ ಅನ್ನೋ ವಿಷಯ ಹರಿದಾಡ್ತಿದೆ. ಇದ್ರೊಂದಿಗೆ ಆ ಉದ್ಯಮಿ ಅನುಷ್ಕಾ ಶೆಟ್ಟಿಗಿಂತ ವಯಸ್ಸಿನಲ್ಲಿ ಚಿಕ್ಕವರು ಎನ್ನಲಾಗುತ್ತಿದೆ. ಪ್ರತಿ ಬಾರಿಯೂ ಇಂತಹ ಮದುವೆ ವಿಚಾರಗಳು ಎದ್ದಾಗ್ಲೂ ಅನುಷ್ಕಾ ಸೈಲೆಂಟ್ ಆಗುತ್ತಾರೆ. ಌಂಡ್​ ಒನ್ಸ್​ ಅಗೇನ್​ ಅನುಷ್ಕ ಸೇಮ್​ ಸೈಲೆಂಟ್​ ಮೂಡಿಗೆ ಜಾರಿದ್ದಾರೆ.

ಇದೆಲ್ಲದರ ನಡುವೆ ಅನುಷ್ಕಾ ಮದುವೆ ಟಾಲಿವುಡ್​ಗೆ ಹಾಗೂ ಸಿನಿಪ್ರೇಮಿಗಳಿಗೆ ಇನ್ನೂ ಗೊಂದಲದ ಪ್ರಶ್ನೆಯಾಗೇ ಉಳಿದೆ. ಯಾಕಂದ್ರೆ, 40ರ ಆಸುಪಾಸಿನಲ್ಲಿರೋ ಅನುಷ್ಕಾ ಶೆಟ್ಟಿ ಯಾವಾಗ ಮದುವೆ ಆಗ್ತಾರೆ? ಯಾರನ್ನ ಮದುವೆ ಆಗ್ತಾರೋ ಅನ್ನೋ ಕುತೂಹಲ ಕಡಲೆ ಅಭಿಮಾನಿ ಕುಲಕ್ಕೆ ಕಬ್ಬಿಣದ ಕಡೆಯಾಗಿ ಪರಿಣಮಿಸಿದೆ.

The post ಕನ್ನಡತಿ ಅನುಷ್ಕಾಗೆ ಕಾಲುಂಗುರ ತೊಡಿಸಲು ಸಜ್ಜಾದ್ರಾ ಬಾಹುಬಲಿ ಪ್ರಭಾಸ್​? appeared first on News First Kannada.

News First Live Kannada

Leave a comment

Your email address will not be published. Required fields are marked *