‘ಕನ್ನಡತಿ’ ಧಾರಾವಾಹಿ: ಮದುವೆಗೂ ಮುನ್ನ ಹರ್ಷನ ಬಳಿ ಮಾಡಿದ್ದ 30 ಲಕ್ಷ ರೂಪಾಯಿ ಸಾಲ ತೀರಿಸಿದ ಭುವಿ | Kannadathi Serial Bhuvi Ranjani Raghavan Repay 30 lakh Debt to Harsha Kiran raj


‘ಕನ್ನಡತಿ’ ಧಾರಾವಾಹಿ: ಮದುವೆಗೂ ಮುನ್ನ ಹರ್ಷನ ಬಳಿ ಮಾಡಿದ್ದ 30 ಲಕ್ಷ ರೂಪಾಯಿ ಸಾಲ ತೀರಿಸಿದ ಭುವಿ

ಭುವಿ-ಹರ್ಷ

ರತ್ನಮಾಲಾಗೆ ಅನಾರೋಗ್ಯ ಕಾಡಿದೆ. ತೀವ್ರ ಅನಾರೋಗ್ಯದಿಂದ ಸಾವು-ಬದುಕಿನ ಮಧ್ಯೆ ಅವಳು ಹೋರಾಡುತ್ತಿದ್ದಾಳೆ. ಹಾಸಿಗೆ ಹಿಡಿದ ರತ್ನಮಾಲಾ ಮೃತಪಟ್ಟರೆ ಹರ್ಷ ಹಾಗೂ ಭುವಿ ಮದುವೆ ನಿಲ್ಲಬಹುದು.

ಹಲವು ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದ್ದ ‘ಕನ್ನಡತಿ’ ಧಾರಾವಾಹಿ (Kannadathi Serial) ಪ್ರಮುಖ ಘಟ್ಟ ತಲುಪಿದೆ. ಹರ್ಷ ಹಾಗೂ ಭುವಿ ಇಬ್ಬರೂ ಮದುವೆ ಆಗುತ್ತಿದ್ದಾರೆ. ಈಗಾಗಲೇ ನಾಂದಿಶಾಸ್ತ್ರ ಪೂರ್ಣಗೊಂಡಿದ್ದು ಮದುವೆಗೆ ಕ್ಷಣಗಣನೆ ಆರಂಭವಾಗಿದೆ. ಈ ಮಧ್ಯೆ ಮದುವೆಗೆ ಇದ್ದ ಒಂದು ಅಡ್ಡಿ ನಿವಾರಣೆ ಆಗಿದೆ. ಆದರೆ, ಮತ್ತೊಂದು ದೊಡ್ಡ ಆತಂಕ ಎದುರಾಗಿದೆ. ಇದರಿಂದ ಹರ್ಷನ (Harsha) ಮದುವೆ ನಿಲ್ಲುವ ಸೂಚನೆ ಸಿಕ್ಕಿದೆ. ಮುಂದೇನಾಗುತ್ತದೆ ಅನ್ನೋದು ಸದ್ಯದ ಕುತೂಹಲ.

ಭುವಿಯ ತಂದೆಯ ಮನೆ ಬೇರೆಯವರ ಕೈಯಲ್ಲಿ ಇತ್ತು. ಇದನ್ನು ದುಡ್ಡು ಕೊಟ್ಟು ಬಿಡಿಸಿಕೊಳ್ಳಬೇಕು ಎಂಬುದು ಭುವಿಯ ಕನಸಾಗಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಹರ್ಷ ಹಸಿರುಪೇಟೆಗೆ ಹೋದಾಗ 32 ಲಕ್ಷ ರೂಪಾಯಿ ಚೆಕ್ ನೀಡಿ ಈ ಮನೆಯನ್ನು ಮರಳಿ ಭುವಿಗೆ ಕೊಡಿಸಿದ್ದ. ಭುವಿ ಮೊದಲಿನಿಂದಲೂ ಸ್ವಾವಲಂಬಿ ಜೀವನ ನಡೆಸುತ್ತಾ ಬಂದವಳು. ಅವಳಿಗೆ ಮದುವೆ ಆಗುವ ಮೊದಲು ಈ ಹಣವನ್ನು ಹರ್ಷನಿಗೆ ಹಿಂದಿರುಗಿಸಬೇಕು ಎಂಬ ಕನಸು ಇತ್ತು. ಅದನ್ನು ಮಾಡಿದ್ದಾಳೆ.

ಹರ್ಷನ ಬಳಿ ಮಾಡಿದ ಸಾಲವನ್ನು ತೀರಿಸಲು ಭುವಿಗೆ ವರುಧಿನಿ 30 ಲಕ್ಷ ರೂಪಾಯಿ ಹಣವನ್ನು ನೀಡಿದ್ದಾಳೆ. ಈ ಹಣವನ್ನು ಹರ್ಷನಿಗೆ ನೀಡಿದ್ದಾಳೆ ಭುವಿ. ಆ ಮೂಲಕ ಹರ್ಷನ ಬಳಿ ಮಾಡಿದ್ದ ಸಾಲವನ್ನು ತೀರಿಸಿದ್ದಾಳೆ. ಇದರಿಂದ ಭುವಿಗೆ ರಿಲೀಫ್ ಫೀಲ್ ಸಿಕ್ಕಿದೆ. ಮದುವೆಗೂ ಮೊದಲು ಒಂದು ದೊಡ್ಡ ಭಾರ ಇಳಿದ ಭಾವನೆಯಲ್ಲಿ ಅವಳಿದ್ದಾಳೆ.

ಮತ್ತೊಂದು ಕಡೆಯಲ್ಲಿ ರತ್ನಮಾಲಾಗೆ ಅನಾರೋಗ್ಯ ಕಾಡಿದೆ. ತೀವ್ರ ಅನಾರೋಗ್ಯದಿಂದ ಸಾವು-ಬದುಕಿನ ಮಧ್ಯೆ ಅವಳು ಹೋರಾಡುತ್ತಿದ್ದಾಳೆ. ಹಾಸಿಗೆ ಹಿಡಿದ ರತ್ನಮಾಲಾ ಮೃತಪಟ್ಟರೆ ಹರ್ಷ ಹಾಗೂ ಭುವಿ ಮದುವೆ ನಿಲ್ಲಬಹುದು. ಹೀಗಾಗಿ, ಈ ಬಗ್ಗೆಯೂ ಸಾಕಷ್ಟು ಕುತೂಹಲ ಇದೆ. ಒಂದೊಮ್ಮೆ ರತ್ನಮಾಲಾ ಮೃತಪಟ್ಟರೆ ಎಲ್ಲಾ ಭಾರವೂ ಭುವಿಯ ಹೆಗಲು ಏರಲಿದೆ. ಆಕೆ ರತ್ನಮಾಲಾ ನಿಭಾಯಿಸುತ್ತಿದ್ದ ಕಂಪೆನಿಯನ್ನು ಹೇಗೆ ನಿಭಾಯಿಸಿಕೊಂಡು ಹೋಗುತ್ತಾಳೆ ಅನ್ನೋದನ್ನು ಕಾದು ನೋಡಬೇಕಿದೆ.

TV9 Kannada


Leave a Reply

Your email address will not be published.