‘ಕನ್ನಡತಿ’ ಧಾರಾವಾಹಿ: ಹರ್ಷ-ಭುವಿ ಮದುವೆ ಮುರಿಯಲು ಸಾನಿಯಾ ಮಾಡಿದ ಹೊಸ ಪ್ಲ್ಯಾನ್​ ಯಶಸ್ವಿ ಆಗೋದು ಪಕ್ಕಾ? | Kannadathi Serial Update Saniya Preparing plans to cancel Bhuvi and Harsha Marriage


‘ಕನ್ನಡತಿ’ ಧಾರಾವಾಹಿ: ಹರ್ಷ-ಭುವಿ ಮದುವೆ ಮುರಿಯಲು ಸಾನಿಯಾ ಮಾಡಿದ ಹೊಸ ಪ್ಲ್ಯಾನ್​ ಯಶಸ್ವಿ ಆಗೋದು ಪಕ್ಕಾ?

ಹರ್ಷ-ಭುವಿ

‘ಕನ್ನಡತಿ’ ಧಾರಾವಾಹಿ (Kannadathi Serial) ಈಗ ಹೊಸಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಹರ್ಷ ಮತ್ತು ಭುವಿ ಇಬ್ಬರೂ ಈಗ ಪ್ರೇಮ ಲೋಕದಲ್ಲಿ (Harsha And Bhuvi Lovestory)  ಕಳೆದು ಹೋಗಿದ್ದಾರೆ. ಭುವಿಯನ್ನು ಒಲಿಸಿಕೊಳ್ಳುವಲ್ಲಿ ಹರ್ಷ ಯಶಸ್ವಿಯಾಗಿದ್ದಾನೆ. ಹರ್ಷನ ತಾಯಿ ರತ್ನಮಾಲಾಳಿಗೂ ಭುವಿ ಸೊಸೆ ಆಗಿ ಬರುತ್ತಿರುವ ವಿಚಾರ ಖುಷಿ ನೀಡಿದೆ. ಹರ್ಷ ಮತ್ತು ಭುವಿ ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಸಾನಿಯಾಗೆ ನೇರವಾಗಿ ಯಾರೂ ಹೇಳಿಲ್ಲ. ಆದರೆ, ಅವಳು ತನ್ನ ಕಳ್ಳಬುದ್ಧಿ ಉಪಯೋಗಿಸಿ ಇದನ್ನು ಪತ್ತೆ ಹಚ್ಚಿದ್ದಾಳೆ. ಇದರಿಂದ ಹರ್ಷ ಮತ್ತು ಭುವಿಗೆ ಸಂಕಷ್ಟ ಹೆಚ್ಚುವ ಸಾಧ್ಯತೆ ಅಧಿಕವಾಗಿದೆ. ಈ ಮಧ್ಯೆ ಇವರ ಮದುವೆ ಮುರಿಯೋಕೆ ಸಾನಿಯಾ ಮಾಸ್ಟರ್​ ಪ್ಲ್ಯಾನ್​ ಒಂದನ್ನು ರೂಪಿಸುತ್ತಿದ್ದಾಳೆ. ಇದು ಯಶಸ್ಸು ಕಾಣುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಭುವಿಯ ಮನೆಯನ್ನು ಕೆದಕಿ ನೋಡಿದಾಗ ಹರ್ಷನ ಜತೆಗಿನ ಪ್ರೀತಿ ವಿಚಾರ ಸಾನಿಯಾಗೆ ತಿಳಿದಿದೆ. ರತ್ನಮಾಲಾ ಸೊಸೆಯಾಗಿ ಬಂದರೆ ಭುವಿಗೆ ಅಧಿಕಾರ ಹಸ್ತಾಂತರ ಆಗೋದು ಬಹುತೇಕ ಖಚಿತ ಎಂಬುದು ಸಾನಿಯಾಗೂ ತಿಳಿದಿದೆ. ಹೀಗಾಗಿ, ಈ ಮದುವೆಯನ್ನು ಮುಂದೂಡಲು ಎಲ್ಲಿಲ್ಲದ ಪ್ಲ್ಯಾನ್ ರೂಪಿಸುತ್ತಿದ್ದಾಳೆ ಸಾನಿಯಾ. ಮದುವೆ ಮುಂದೂಡಿದರೆ ನಂತರ ಒಂದಷ್ಟು ಸಮಯ ಸಿಗುತ್ತದೆ. ಆ ಸಂದರ್ಭದಲ್ಲಿ ಬೇರೆ ಪ್ಲ್ಯಾನ್​ ರೂಪಿಸಬಹುದು ಎಂಬುದು ಅವಳ ಆಲೋಚನೆ.

ಹರ್ಷನ ತಂಗಿ ಸುಚಿಯ ಮದುವೆ ಮಾಡಲು ಪ್ಲ್ಯಾನ್​ ನಡೆದಿದೆ. ಆದರೆ, ಸುಚಿ ಈಗತಾನೇ ಕಾಲೇಜು ಓದುತ್ತಿದ್ದಾಳೆ. ಈಗ ಮದುವೆ ಬೇಡ ಎಂಬುದು ಅವಳ ಹಠ. ಆದರೆ, ಸಾನಿಯಾ ತಲೆಯಲ್ಲಿ ಓಡುತ್ತಿರುವ ಪ್ಲ್ಯಾನ್​ ಬೇರೆ. ಅವಳು ಸುಚಿ ಮದುವೆ ಮಾಡಲು ಯೋಜನೆ ರೂಪಿಸಿದ್ದಾರೆ. ಅದಕ್ಕೂ ಒಂದು ಕಾರಣವಿದೆ.

ಒಂದೊಮ್ಮೆ ಸುಚಿ ಮದುವೆ ಆದರೆ, ಹರ್ಷ ಮದುವೆ ಆಗುವುದು ವಿಳಂಬವಾಗುತ್ತದೆ. ಹೀಗಾದಲ್ಲಿ ಸಾನಿಯಾ ಒಂದು ಹಂತದಲ್ಲಿ ಗೆದ್ದಂತೆ. ಇದಿಷ್ಟೇ ಸಮಯದಲ್ಲಿ ಹರ್ಷನನ್ನು ಮಟ್ಟ ಹಾಕಲು ಅವಳು ಮತ್ತೊಂದು ಪ್ಲ್ಯಾನ್​ ರೂಪಿಸಬಹುದು. ಈ ಕಾರಣಕ್ಕೆ ಹರ್ಷನ ಮದುವೆ ಮುಂದೂಡಲು ಏನೆಲ್ಲ ಬೇಕೋ ಅದೆಲ್ಲವನ್ನೂ ಸಾನಿಯಾ ಮಾಡುತ್ತಿದ್ದಾಳೆ.

ಹರ್ಷನಿಗೆ ಸರ್​ಪ್ರೈಸ್​: 

ಸೋಮವಾರದ (ಜನವರಿ 31) ಎಪಿಸೋಡ್​ನಲ್ಲಿ ಹರ್ಷನಿಗೆ ಭುವಿ ಲವ್​ ಲೆಟರ್​ ಬರೆದಿದ್ದಾಳೆ. ಇದು ಆಕೆಯಿಂದ ಹರ್ಷನಿಗೆ ಬಂದ ಮೊದಲ ಪ್ರೇಮ ಬರಹ. ಈ ವಿಚಾರದಲ್ಲಿ ಆತ ಸಖತ್ ಖುಷಿಪಟ್ಟಿದ್ದಾನೆ. ಮುಂದಿನ ದಿನಗಳಲ್ಲಿ ಭುವಿ ಮತ್ತಷ್ಟು ಚೇಂಜ್​ ಆಗಲಿದ್ದಾಳೆ! ಈ ವಿಚಾರವನ್ನು ಸ್ವತಃ ಭುವಿ ಪಾತ್ರ ಮಾಡಿರುವ ರಂಜನಿ ರಾಘವನ್​ ಹೇಳಿಕೊಂಡಿದ್ದರು.

‘ಪ್ರೀತಿ ಹೇಳಿಕೊಳ್ಳುವುದರಲ್ಲಿರಬಹುದು ಅಥವಾ ಎಲ್ಲಾದರೂ ಕರೆದುಕೊಂಡು ಹೋಗುವುದರಲ್ಲಿರಬಹುದು, ಹರ್ಷನೇ ತುಂಬಾ ಎಫರ್ಟ್​ ಹಾಕುತ್ತಿದ್ದ. ಆದರೆ, ಭುವಿ ತನ್ನ ವ್ಯಕ್ತಿತ್ವವನ್ನು ಬದಲಾವಣೆ ಮಾಡಿಕೊಂಡು, ಹರ್ಷನನ್ನು ಕರೆದುಕೊಂಡು ಒಂದಷ್ಟು ಪ್ಲ್ಯಾನಿಂಗ್​ ಮಾಡಿದ್ದಾಳೆ. ಅದೇನು ಎಂಬುದನ್ನು ಧಾರಾವಾಹಿಯಲ್ಲಿ ನೋಡಿ’ ಎಂದಿದ್ದರು ರಂಜನಿ ರಾಘವನ್​.

TV9 Kannada


Leave a Reply

Your email address will not be published.