ಆಸ್ಟ್ರೇಲಿಯಾ ಕಂಡ ಹೊಡಿ ಬಡಿ ಕ್ರಿಕೆಟರ್​ಗಳಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್​ ಸದ್ಯ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದ್ದಾರೆ. ಈ ಬಾರಿ ಭರ್ಜರಿ ಫಾರ್ಮ್​ನಲ್ಲಿರೋ ಮ್ಯಾಕ್ಸಿ, ತಮ್ಮ ಆಟದಿಂದ ಆರ್​ಸಿಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನು, ಮೈದಾನದಲ್ಲಿ ಮಾತ್ರವಲ್ಲದೇ, ಆಫ್​ ದಿ ಫೀಲ್ಡ್​​ ಕೂಡ ಮ್ಯಾಕ್ಸಿ ಸಿಕ್ಕಾಪಟ್ಟೆ ಫಾರ್ಮ್​ನಲ್ಲಿದ್ದಾರೆ ಅಂದ್ರೂ ತಪ್ಪಾಗಲ್ಲ. ಹೌದು.. ಕನ್ನಡ ಮಾತನಾಡುವ ಮೂಲಕ, ಹಾಗೇ ಕನ್ನಡ ಸಿನಿಮಾದ ಹಾಡೊಂದನ್ನ ಹಾಡುವ ಮೂಲಕ ಇದೀಗ ಅಭಿಮಾನಿಗಳು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ.

ಕಳೆದ ಆರು ಐಪಿಎಲ್​ ಸೀಸನ್​ಗಳಿಂದ ಆರ್​ಸಿಬಿ ತಂಡದ ಮನರಂಜನೆಗಾಗಿ ಆರ್​ಸಿಬಿ ಇನ್​ಸೈಡರ್​ ಶೋ ನಡೆಯುತ್ತಿದೆ. ಇದೇ ಶೋನಲ್ಲಿ ಭಾಗಿಯಾದ ಗ್ಲೆನ್​ ಮ್ಯಾಕ್ಸ್​ವೆಲ್​, ಕನ್ನಡ ಮಾತನಾಡುವ ಮೂಲಕ ಶಾಕ್​ ನೀಡಿದ್ದಾರೆ. ಕನ್ನಡದಲ್ಲಿ ಏನಾದರೂ ಕಲ್ತಿದ್ದೀರಾ ಅಂದಾಗ, ಅದ್ಯಾರ ಸಹಾಯವೂ ಇಲ್ಲದೇ ‘ಏನ್​ ಗುರು..ಏನ್​ ಸಮಾಚಾರ?’ ಅಂದ್ರು ಗ್ಲೆನ್​ ಮ್ಯಾಕ್ಸ್​ವೆಲ್​.
ಇಷ್ಟೇ ಅಲ್ಲ, ಡಾ.ಶಿವರಾಜ್​ಕುಮಾರ್​ ಅಭಿನಯದ ‘ಜೋಗಿ’ ಸಿನಿಮಾ ಹಾಡನ್ನೂ ಮ್ಯಾಕ್ಸಿ ಇದೇ ಶೋನಲ್ಲಿ ಹಾಡಿದ್ದಾರೆ. ನಿರೂಪಕ ಹೇಳಿಕೊಟ್ಟ ಹಾಡನ್ನ ರಿಪೀಟ್​ ಮಾಡಿರುವ ಗ್ಲೆನ್​, ಅನಂತರ ಈ ಹಾಡು ಯಾವ ಸಿನಿಮಾದು..ಯಾರ ಹಾಡು ಅಂತ ಕೇಳಿದಾಗ, ಸ್ವಲ್ಪವೂ ಸಮಯಾವಕಾಶ ತೆಗೆದುಕೊಳ್ಳದೇ ‘ಅಫ್ಕೋರ್ಸ್​ ಶಿವಣ್ಣ’ ಅಂದಿದ್ದಾರೆ. ಸೋ..ಕನ್ನಡದ ತಂಡಕ್ಕೆ ಆಡೋದು ಮಾತ್ರವಲ್ಲದೇ ಕನ್ನಡ ಭಾಷೆಯನ್ನ ಕಲಿಯುವ ಹುಮ್ಮಸ್ಸು, ಕನ್ನಡಿಗರ ಬಗ್ಗೆ ತಿಳಿಯುವ ಆಸಕ್ತಿಯೂ ಗ್ಲೆನ್​ ಮ್ಯಾಕ್ಸ್​ವೆಲ್​ಗಿದೆ ಅನ್ನೋದು ತಿಳಿಯುತ್ತೆ.

ಆರ್​ಸಿಬಿ ತಂಡಕ್ಕೆ ಆಡಿದ ಅರ್ಧ ಸೀಸನ್​ಗೆ ಕಲಿಯುವ ಆಸಕ್ತಿ ತೋರಿಸಿದ್ದಾರೆ ಅಂದ್ರೆ, ಬರುವ ವರ್ಷಗಳಲ್ಲಿ ಕನ್ನಡಿಗರಲ್ಲೇ ಒಬ್ಬರಾದ್ರೂ ಅಚ್ಚರಿಯಿಲ್ಲ. ಅಂದ್ಹಾಗೇ ಗ್ಲೆನ್​ ಮ್ಯಾಕ್ಸ್​​ವೆಲ್​ ಭಾವೀ ಪತ್ನಿ ವಿನಿ ರಮಣ್​ ಭಾರತ ಮೂಲದವರೇ ಆಗಿದ್ದಾರೆ. ಬಹಳ ವರ್ಷಗಳಿಂದ ಪ್ರೀತಿಸುತ್ತಿರುವ ಇಬ್ಬರು, ಇತ್ತೀಚೆಗೆ ಭಾರತೀಯ ಸಂಪ್ರದಾಯದಂತೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ.

ವಿಶೇಷ ಬರಹ: ರಕ್ಷಿತಾ.ರೈ- ಫಿಲ್ಮ್​​/ಸ್ಪೋರ್ಟ್ಸ್​ ಬ್ಯೂರೋ

The post ಕನ್ನಡದಲ್ಲಿ ಮ್ಯಾಕ್ಸ್​ವೆಲ್ ಮಾತು; ‘ಹೊಡಿ ಮಗ’ ಶಿವಣ್ಣನ ಸಾಂಗ್ ಅಂದ್ರು ಹೊಡಿ-ಬಡಿ ಸ್ಪೆಷಲಿಸ್ಟ್ appeared first on News First Kannada.

Source: newsfirstlive.com

Source link