ಬೆಂಗಳೂರು: ಖ್ಯಾತ ಚಿತ್ರ ಸಾಹಿತಿ ಶ್ರೀರಂಗ(86) ಅವರು ವಯೋಸಹಜ ಕಾಯಿಲೆಯಿಂದಾಗಿ ಇಂದು ಕೊನೆಯುಸಿರೆಳೆದಿದ್ದಾರೆ.

ಶ್ರೀರಂಗ ಅವರು ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಚಿತ್ರಗೀತೆಗಳನ್ನು ರಚಿಸಿದ್ದರು. ಅವರು ನಂಜುಂಡಿ ಕಲ್ಯಾಣ ಚಿತ್ರಕ್ಕಾಗಿ ಬರೆದ ‘ಒಳಗೆ ಸೇರಿದರೆ ಗುಂಡು‘ ಹಾಡು ದೊಡ್ಡ ಮಟ್ಟದ ಖ್ಯಾತಿ ಗಳಿಸಿತ್ತು. ಬೆಂಗಳೂರಿನ ನಾಗರಭಾವಿಯ ಸ್ವಗೃಹದಲ್ಲಿ ಶ್ರೀರಂಗ ಅವರು ಕೊನೆಯುಸಿರೆಳೆದಿದ್ದಾರೆ. ನಾಳೆ ಬೆಳಗ್ಗೆ ಕೆಂಗೇರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

The post ಕನ್ನಡದ ಖ್ಯಾತ ಚಿತ್ರಸಾಹಿತಿ ಶ್ರೀರಂಗ ವಿಧಿವಶ appeared first on News First Kannada.

Source: newsfirstlive.com

Source link