ಬೆಂಗಳೂರು: ಇತ್ತೀಚಿಗಷ್ಟೇ ಗೂಗಲ್​ ಕನ್ನಡದ ಬಗ್ಗೆ ಹವಹೇಳನಾಕಾರಿ ಪೋಸ್ಟ್​ವೊಂದನ್ನ ಮಾಡಿತ್ತು.  ಭಾರತದಲ್ಲಿ ಅತ್ಯಂತ ಕುರೂಪಿ ಭಾಷೆ ಯಾವುದು ಅಂತ ಕೇಳಿದಾಗ ಅದು ಕನ್ನಡ ಅಂತ ಪೋಸ್ಟ್​ ಮಡಿದ್ದ ಗೂಗಲ್​ ಕಂಪನಿಗೆ ಇದೀಗ ಪೊಲೀಸ್ರು ನೋಟೀಸ್​ನ್ನ ಜಾರಿ ಮಾಡಿದ್ದಾರೆ.

ಈ ಬಗ್ಗೆ ಪ್ರತಿಭಟನೆ ನಡೆಸಿದ್ದ ಕರವೇ ಪ್ರವೀಣ್ ಶೆಟ್ಟಿ, ಬೆನ್ನಿಗಾನಹಳ್ಳಿ ಬಳಿಯಿರುವ ಗೂಗಲ್ ಕಚೇರಿಗೆ ಮುತ್ತಿಗೆ ಹಾಕಿ, ಬೈಯ್ಯಪ್ಪನಹಳ್ಳಿ ಠಾಣೆಗೂ ದೂರು ನೀಡಿದ್ದರು. ಅಲ್ಲದೇ, ಕೂಡಲೇ ಗೂಗಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು‌ ಅಷ್ಟೇ ಅಲ್ಲ, ಕಮಿಷನರ್ ಕಮಲ್ ಪಂತ್ ರನ್ನೂ ಭೇಟಿಯಾಗಿದ್ದ ಪ್ರವೀಣ್ ಶೆಟ್ಟಿ ಅವರ ಬಳಿಯೂ ಗೂಗಲ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಹೀಗಾಗಿ, ಈ ವಿಚಾರವನ್ನ ಪರಿಗಣಿಸಿದ ಪೊಲೀಸ್​ ಆಯುಕ್ತ ಕಮಲ್​ಪಂತ್​ ಬೈಯ್ಯಪ್ಪನಹಳ್ಳಿ ಪೊಲೀಸರಿಗೆ ನೋಟಿಸ್ ನೀಡಲು ತಿಳಿಸಿದ್ದರು. ಇದೇ ಕಾರಣಕ್ಕೆ, ಬೈಯ್ಯಪ್ಪನಹಳ್ಳಿ ಪೊಲೀಸ್ರು ಗೂಗಲ್​ಗೆ ನೋಟಿಸ್ ನೀಡಿ ಸ್ಪಷ್ಟೀಕರಣವನ್ನ ಕೇಳಿದ್ದಾರೆ.

ಇದನ್ನೂ ಓದಿ: ‘ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಯಾಚಿಸುತ್ತಿದ್ದೇವೆ -ಕನ್ನಡದಲ್ಲೇ ಕ್ಷಮೆ ಕೇಳಿದ ಗೂಗಲ್

 

The post ಕನ್ನಡದ ಬಗ್ಗೆ ಅವಹೇಳನಾಕಾರಿ ಪೋಸ್ಟ್​; ಗೂಗಲ್​ಗೆ​ ಪೊಲೀಸ್ರಿಂದ ನೋಟಿಸ್ appeared first on News First Kannada.

Source: newsfirstlive.com

Source link