ಬೆಂಗಳೂರು: ಕನ್ನಡ ಅತ್ಯಂತ ಕೆಟ್ಟ ಭಾಷೆ ಅಂತ ಗೂಗಲ್​ನಲ್ಲಿ ಹಾಕಿದ ಹಿನ್ನೆಲೆ, ಕರವೇ ಬಣದಿಂದ ಗೂಗಲೆ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ನಗರದ, ಬೆನ್ನಿಗಾನಹಳ್ಳಿ ಬಳಿ ಇರುವ ಗೂಗಲ್ ಕಚೇರಿಗೆ ಕರವೇ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರೆಲ್ಲಾ ಮುತ್ತಿಗೆ ಹಾಕಿ, ಗೂಗಲ್ ಈ ಕೂಡಲೇ ಕನ್ನಡ ಭಾಷೆಯ ಬಗ್ಗೆ ಹಾಕಿರೋದನ್ನ  ಡಿಲೀಟ್ ಮಾಡುವಂತೆ ಅಗ್ರಹಿಸಿದ್ರು. ಅಲ್ಲದೇ, ಯಾವೊದೋ ವೆಬ್ ಸೈಟ್ ನಲ್ಲಿ ಬಂದದ್ದನ್ನ ಹಾಕಿದ್ದಕ್ಕೆ ಆಕ್ರೋಶ ಕೂಡ ಹೊರಹಾಕಿದ್ದಾರೆ.

The post ಕನ್ನಡದ ಬಗ್ಗೆ ಸರ್ಚ್​ ಕೇಸ್; ಕರವೇ ಕಾರ್ಯಕರ್ತರಿಂದ ಮುತ್ತಿಗೆ appeared first on News First Kannada.

Source: newsfirstlive.com

Source link