ಕನ್ನಡದ ಬ್ಯುಸಿ ನಟಿ ಅದಿತಿ ಕೈಯಲ್ಲಿ ಡಜನ್ ಸಿನಿಮಾ

ಸಾಮಾನ್ಯವಾಗಿ ಹೀರೋಯಿನ್‌ ಅಂದ್ರೆ, ಕೇವಲ ಗ್ಲಾಮರಸ್‌ ಪಾತ್ರಗಳಿಗಷ್ಟೇ ಸೀಮಿತವಾಗಿರುತ್ತಾರೆ. ಅಥವಾ ಸಿನಿಮಾದಲ್ಲಿ ಹೀರೋ ಜೊತೆಗೆ ಒಂದೆರಡು ಡ್ಯುಯೆಟ್‌ ಸಾಂಗ್ಸ್‌ಗೆ ಹೆಜ್ಜೆ ಹಾಕುವಷ್ಟು ಮಾತ್ರ ಅವರಿಗೆ ಸ್ಕ್ರೀನ್‌ ಸ್ಪೇಸ್‌ ಇರುತ್ತದೆ ಅನ್ನೋದು ಅನೇಕ ಪ್ರೇಕ್ಷಕರ ಅಭಿಪ್ರಾಯ. ಆದರೆ ಕೆಲವು ಹೀರೋಯಿನ್ಸ್‌ ಮಾತ್ರ ಪ್ರೇಕ್ಷಕರ ಈ ಅಭಿಪ್ರಾಯವನ್ನು ಆಗಾಗ್ಗೆ ಸುಳ್ಳು ಎಂದು ನಿರೂಪಿಸುತ್ತಲೇ ಬರುತ್ತಾರೆ. ಅಂಥ ಹೀರೋಯಿನ್ಸ್‌ ಪೈಕಿ ಅದಿತಿ ಪ್ರಭುದೇವ ಕೂಡ ಒಬ್ಬರು.

ಕೇವಲ ಗ್ಲಾಮರಸ್‌ ಲುಕ್‌, ಮರಸುತ್ತವ ಪಾತ್ರಗಳಿಗಷ್ಟೇ ಸೀಮಿತವಾಗಿರದೆ ಹೊಸಥರದ ಪಾತ್ರಗಳಿಗೆ ತನ್ನನ್ನು ತೆರೆದುಕೊಳ್ಳುವ ಇಂದಿನ ನಾಯಕ ನಟಿಯರ ಸಾಲಿನಲ್ಲಿ, ಅದಿತಿ ಪ್ರಭುದೇವ ಕೂಡ ಒಬ್ಬರಾಗಿ ನಿಲ್ಲುತ್ತಾರೆ. ಸದ್ಯ ಅದಿತಿ ಪ್ರಭುದೇವ ನಾಯಕಿಯಾಗಿ ಅಭಿನಯಿಸುತ್ತಿರುವ ಮುಂಬರುವ  ಸಿನಿಮಾಗಳು ಮತ್ತು ಅವುಗಳ ಪಾತ್ರಗಳು ಈ ಮಾತಿಗೆ ಒಂದಷ್ಟು ಪುಷ್ಟಿ ನೀಡುತ್ತದೆ

ಸದ್ಯ ಅದಿತಿ ಪ್ರಭುದೇವ ಕನ್ನಡದಲ್ಲಿ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅದರಲ್ಲಿ ಈಗಾಗಲೇ “ಒಂಬತ್ತನೇ ದಿಕ್ಕು’, “ದಿಲ್‌ಮಾರ್‌’, “ತೋತಾಪುರಿ’ ಭಾಗ-1, “ತೋತಾಪುರಿ’ ಭಾಗ-2, “ಓಲ್ಡ್‌ ಮಾಂಕ್‌’, “ಆ ನ ’ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಇನ್ನು “ಗಜಾನನ ಆ್ಯಂಡ್‌ ಗ್ಯಾಂಗ್‌’, “ತ್ರಿಬಲ್‌ ರೈಡಿಂಗ್‌’ ಸಿನಿಮಾಗಳ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿವೆ. ಉಳಿದಂತೆ “ಅಂದೊದಿತ್ತು ಕಾಲ’, “5ಡಿ’, “ಚಾಂಪಿಯನ್‌’, “ಭಗವಾನ್‌ ಶ್ರೀಕೃಷ್ಣ ಪರಮಾತ್ಮ’ ಸಿನಿಮಾಗಳು ಇನ್ನೂ ಚಿತ್ರೀಕರಣದ ಹಂತದಲ್ಲಿವೆ. ಇದಲ್ಲದೆ ಇನ್ನೂ ಎರಡೂ – ಮೂರು ಸಿನಿಮಾಗಳಲ್ಲಿ ಅದಿತಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರಗಳು ಇನ್ನೂ ಮಾತುಕಥೆಯ ಹಂತದಲ್ಲಿರುವುದರಿಂದ, ಸಿನಿಮಾಗಳ ಟೈಟಲ್‌ ಮತ್ತು ಪಾತ್ರಗಳ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

ಅದಿತಿ ಅವರೇ ಹೇಳುವಂತೆ, ಸದ್ಯ ಅವರ ಕೈಯಲ್ಲಿರುವ ಪ್ರತಿ ಸಿನಿಮಾದಲ್ಲೂ ಅವರಿಗೊಂದು ವಿಭಿನ್ನ ಪಾತ್ರ ಇದೆಯಂತೆ. “ಒಂಬತ್ತನೇ ದಿಕ್ಕು’ ಚಿತ್ರದಲ್ಲಿ ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡರೆ, “ತೋತಾಪುರಿ’ ಚಿತ್ರದಲ್ಲಿ ಶಕೀಲಾ ಬಾನು ಎನ್ನುವ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

“ಓಲ್ಡ್‌ ಮಾಂಕ್‌’ನಲ್ಲಿ ಶೋಶಿಯಲ್‌ ಸರ್ಮೀಸ್‌ ಮಾಡುವಂಥ ಹುಡುಗಿಯ ಪಾತ್ರ. ಹೀಗೆ ಒಂದೊಂದು ಸಿನಿಮಾದಲ್ಲೂ ಒಂದೊಂದು ವಿಭಿನ್ನ ಪಾತ್ರ ಸಿಕ್ಕಿದೆ. ಈ ಪಾತ್ರಗಳು ತನಗೆಖುಷಿಕೊಟ್ಟಿದ್ದು, ನೋಡುಗರಿಗೂ ಅಷ್ಟೇ ಖುಷಿಕೊಡಲಿದೆ ಅನ್ನೋ ವಿಶ್ವಾಸ ವ್ಯಕ್ತಪಡಿಸುತ್ತಾರೆ ಅದಿತಿ.

ಸಿನೆಮಾ – Udayavani – ಉದಯವಾಣಿ
Read More