ಬೆಂಗಳೂರು: ಜಗತ್ತಿನ ದೈತ್ಯ ಸರ್ಚ್ ಎಂಜಿನ್ ಆದ ಗೂಗಲ್ ಕನ್ನಡ ಭಾಷೆಯೆಂಬಂತೆ ತೋರಿಸುತ್ತಿದೆ. ಈ ವಿಚಾರವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಈಗಾಗ್ಲೇ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆ ಗೂಗಲ್ ಸಂಸ್ಥೆಗೆ ನೋಟಿಸ್ ಕೊಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದೆ.

ಗೂಗಲ್ ಸಂಸ್ಥೆಗೆ ನೋಟಿಸ್ ಕೊಡುವ ಕುರಿತು ನ್ಯೂಸ್​ಫಸ್ಟ್​​ಗೆ ಪ್ರತಿಕ್ರಿಯೆ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಗೂಗಲ್​ ನಡೆಯನ್ನು ಖಂಡಿಸಿದ್ದಾರೆ. ತನ್ನ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಇಂದು ಗೂಗಲ್​ಗೆ ನೋಟಿಸ್​ ನೀಡಲಾಗುವುದು ಎಂದು ನಾಗಾಭರಣ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸುಂದರ ಕನ್ನಡವನ್ನು ಅತಿ ಕೊಳಕು ಭಾಷೆ ಅಂತಿದೆ ಗೂಗಲ್; ಇದನ್ನ ಸರಿಪಡಿಸೋದು ಹೇಗೆ ಗೊತ್ತಾ?!

The post ಕನ್ನಡವನ್ನ ಕೊಳಕು ಭಾಷೆ ಎಂದ ಗೂಗಲ್​ಗೆ ನೋಟಿಸ್ ಕೊಡಲಿದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ appeared first on News First Kannada.

Source: newsfirstlive.com

Source link