ಕನ್ನಡಾಂಬೆ ಭುವನೇಶ್ವರಿ ದೇವಸ್ಥಾನ ಹೇಗಿದೆ? ವಿಶೇಷ ವಿಡಿಯೋ ಮಾಡಿ ಪರಿಚಯಿಸಿದ ನಟಿ ರಂಜನಿ ರಾಘವನ್ | Kannadathi Serial Shooting at Bhuvanagiri Temple Ranjani Raghavan Show temple


ಕನ್ನಡಾಂಬೆ ಭುವನೇಶ್ವರಿ ದೇವಸ್ಥಾನ ಹೇಗಿದೆ? ವಿಶೇಷ ವಿಡಿಯೋ ಮಾಡಿ ಪರಿಚಯಿಸಿದ ನಟಿ ರಂಜನಿ ರಾಘವನ್

ರಂಜನಿ ರಾಘವನ್

ನಟಿ ರಂಜನಿ ರಾಘವನ್ ಅವರು ಭುವನಗಿರಿ ಕನ್ನಡಾಂಬೆಯ ದೇವಸ್ಥಾನದ ಪರಿಚಯ ಮಾಡಿದ್ದಾರೆ. ಶೂಟಿಂಗ್ ಮಧ್ಯೆ ಬಿಡುವು ಮಾಡಿಕೊಂಡು ಅವರು ರೀಲ್ಸ್​ ಮಾಡಿದ್ದಾರೆ.

‘ಕನ್ನಡತಿ’ ಧಾರವಾಹಿ (Kannadathi Serial) ಪ್ರಮುಖ ಘಟ್ಟ ತಲುಪಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಾದ ಹರ್ಷ ಹಾಗೂ ಭುವಿಯ ಮದುವೆಗೆ ಸಕಲ ಸಿದ್ಧತೆ ನಡೆದಿದೆ. ಹರ್ಷ ಹಾಗೂ ಭುವಿ ಮದುವೆಗೆ ಹಲವು ವಿಘ್ನಗಳು ಎದುರಾದವು. ಭುವಿಯನ್ನು ಕೊಲ್ಲಲು ಪ್ರಯತ್ನ ಕೂಡ ನಡೆಯಿತು. ಅದೃಷ್ಟವಶಾತ್ ಭುವಿ ಬದುಕಿದ್ದಾಳೆ. ಗಾಯಗಳಿಂದ ಚೇತರಿಸಿಕೊಂಡಿದ್ದಾಳೆ. ಈಗ ಈ ಧಾರಾವಾಹಿ ಹೊಸ ತಿರುವು ಪಡೆದುಕೊಂಡು ಸಾಗುತ್ತಿದೆ. ಹರ್ಷ ಹಾಗೂ ಭುವಿ ಶೀಘ್ರವೇ ಮದುವೆ ಆಗಲಿದ್ದಾರೆ. ಇವರ ಮದುವೆ ನಡೆಯುತ್ತಿರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿರುವ ಭುವನೇಶ್ವರಿ ದೇವರ (Bhuvanagiri Temple ) ಸನ್ನಿಧಿಯಲ್ಲಿ ಅನ್ನೋದು ವಿಶೇಷ.

ಭುವನಗಿರಿಯ ಕನ್ನಡಾಂಬೆ ದೇವಸ್ಥಾನ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇದು ಕರ್ನಾಟಕದಲ್ಲಿರುವ ಏಕೈಕ ಕನ್ನಡಾಂಬೆ ದೇವಸ್ಥಾನ ಎಂದು ರಂಜನಿ ರಾಘವನ್ ಮಾಹಿತಿ ನೀಡಿದ್ದಾರೆ. ಕಳೆದ ಕೆಲ ದಿನಗಳ ಕಾಲ ಈ ಧಾರಾವಾಹಿ ಶೂಟಿಂಗ್ ಇಲ್ಲಿ ನಡೆದಿದೆ. ಸದ್ಯ, ‘ಕನ್ನಡತಿ’ಯಲ್ಲಿ ಈ ಎಪಿಸೋಡ್ ಪ್ರಸಾರವಾಗುತ್ತಿದೆ.

ನಟಿ ರಂಜನಿ ರಾಘವನ್ ಅವರು ಭುವನಗಿರಿ ಕನ್ನಡಾಂಬೆಯ ದೇವಸ್ಥಾನದ ಪರಿಚಯ ಮಾಡಿದ್ದಾರೆ. ಶೂಟಿಂಗ್ ಮಧ್ಯೆ ಬಿಡುವು ಮಾಡಿಕೊಂಡು ಅವರು ರೀಲ್ಸ್​ ಮಾಡಿದ್ದಾರೆ. ಇದನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಈ ವಿಡಿಯೋದಲ್ಲಿ ರಂಜನಿ ಅವರು ದೇವಸ್ಥಾನದ ಬಗ್ಗೆ ಮಾಹಿತಿ ನೀಡಿದ್ದಾರೆ.

ಹೊರ ಭಾಗದಲ್ಲಿ ನಿಂತು ದೇವಸ್ಥಾನದ ಬಗ್ಗೆ ರಂಜನಿ ರಾಘವನ್ ಮಾಹಿತಿ ಹಂಚಿಕೊಂಡಿದ್ದಾರೆ. ಆ ಬಳಿಕ ಅವರು ನೇರವಾಗಿ ದೇವಸ್ಥಾನದ ಒಳಗೆ ತೆರಳಿದ್ದಾರೆ. ಫ್ಯಾನ್ಸ್​ಗೆ ಅವರು ದೇವರ ದರ್ಶನ ಮಾಡಿಸಿದ್ದಾರೆ. ಈ ವಿಡಿಯೋದಲ್ಲಿ ದೇವಸ್ಥಾನದ ಒಳಭಾಗದಲ್ಲಿ ಶೂಟಿಂಗ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದ ಕಂಡು ಬಂದಿದೆ.

TV9 Kannada


Leave a Reply

Your email address will not be published. Required fields are marked *