ಕನ್ನಡಾಂಬೆ ಭುವನೇಶ್ವರಿ ದೇವಿಯ ಅಧಿಕೃತ ಚಿತ್ರ ಜಾರಿಗೆ ಸರ್ಕಾರ ಒಪ್ಪಿಗೆ – karnataka govt approved new kannadambe bhuvaneshwari devi official photo


ಕನ್ನಡಾಂಬೆಗೆ ನಿರ್ದಿಷ್ಟವಾದ ಚಿತ್ರ ಇಲ್ಲದನ್ನು ಗಮನಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಮಾತೆಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರವನ್ನು ಬಿಡುಗಡೆ ಮಾಡಲು ಒಪ್ಪಿದೆ.

ಕನ್ನಡಾಂಬೆ ಭುವನೇಶ್ವರಿ ದೇವಿಯ ಅಧಿಕೃತ ಚಿತ್ರ ಜಾರಿಗೆ ಸರ್ಕಾರ ಒಪ್ಪಿಗೆ

ಕನ್ನಡಾಂಬೆ ಭುವನೇಶ್ವರಿ ದೇವಿ

ಬೆಂಗಳೂರು: ಕರ್ನಾಟಕದಲ್ಲಿ ಅದ್ದೂರಿಯಾಗಿ ಆಚರಿಸುವ ಕನ್ನಡ ರಾಜ್ಯೋತ್ಸವ, ವಿವಿಧ ಕಾರ್ಯಕ್ರಮಗಳಲ್ಲಿ ಕನ್ನಡಾಂಬೆಯ ಚಿತ್ರದ ಬದಲಿಗೆ ಸರಸ್ವತಿ, ದುರ್ಗಾದೇವಿ ಸೇರಿದಂತೆ ಇತರೆ ದೇವರ ಚಿತ್ರಗಳನ್ನು ಇಟ್ಟು ಪೂಜಿಸಲಾಗುತ್ತಿತ್ತು. ಹಾಗೂ ನಾಡ ದೇವಿ ಭುವನೇಶ್ವರಿಯ ಚಿತ್ರವನ್ನು ವಿವಿಧ ರೀತಿಯಲ್ಲಿ ಬಳಸಲಾಗಿದೆ. ಕನ್ನಡಾಂಬೆಗೆ ನಿರ್ದಿಷ್ಟವಾದ ಚಿತ್ರ ಇಲ್ಲದನ್ನು ಗಮನಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಮಾತೆಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರವನ್ನು ಬಿಡುಗಡೆ ಮಾಡಲು ಒಪ್ಪಿದೆ.

ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ.ಮಹೇಂದ್ರ ನೇತೃತ್ವದ ಸಮಿತಿ ಈ ಬಗ್ಗೆ ಶಿಫಾರಸು ನೀಡಿತ್ತು. ಕಲಾವಿದರಾದ ಸೋಮಶೇಖರ್.ಕೆ ಅವರು ರಚಿಸಿರುವ ಚಿತ್ರವನ್ನು ಅಧಿಕೃತವಾಗಿ ಜಾರಿಗೆ ತರುವಂತೆ ಶಿಫಾರಸು ಸಲ್ಲಿಸಿತ್ತು. ಸಮಿತಿಯಲ್ಲಿ ಡಾ. ಚೂಡಾಮಣಿ ನಂದಗೋಪಾಲ್, ಎಚ್.ಎಚ್.‌ಮ್ಯಾದರ್, ಬಾಬು ನಡೋಣಿ, ವಿ.ಎಸ್. ಕಡೇಮನಿ ಸದಸ್ಯರಾಗಿದ್ದರು.

TV9 Kannada


Leave a Reply

Your email address will not be published.