ಕನ್ನಡಿಗರನ್ನು ತಡವಿಕೊಂಡರೆ ಉಗ್ರಕ್ರಮ ಎದುರಿಸಬೇಕಾಗುತ್ತದೆ ಅಂತ ಎಮ್ ಈ ಎಸ್ ಸದಸ್ಯರಿಗೆ ಬೊಮ್ಮಾಯಿ ಎಚ್ಚರಿಕೆ ನೀಡಿದರು! | Government will initi ate tougher measures if MES members trouble Kannadigas warns CM Bommai ARBಪುಂಡರಿಗೆ ನಾನೊಂದು ಸ್ಪಷ್ಟ ಎಚ್ಚರಿಕೆಯನ್ನು ನೀಡುತ್ತೇನೆ. ಕಾನೂನು ಕೈಗೆತ್ತಿಕೊಳ್ಳುವ ಕೃತ್ಯಗಳನ್ನು ಅವರು ನಡೆಸಿದರೆ ಸಹಿಸಲಾಗಲ್ಲ, ಕನ್ನಡಿಗರಿಗೆ ತೊಂದರೆ ನೀಡಿದರೆ ಉಗ್ರಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು.

TV9kannada Web Team


| Edited By: Arun Belly

May 28, 2022 | 5:28 PM
Bengaluru: ಕರ್ನಾಟಕದಲ್ಲಿ ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ, ಅದರೆ ವಿಷಾದಕರ ಸಂಗತಿಯೆಂದರೆ ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) (ಎಮ್ ಈ ಎಸ್) ಪುಂಡಾಟಿಕೆಯನ್ನು (goondaism) ನಿಲ್ಲಿಸುವುದು ಮಾತ್ರ ಯಾವ ಸರ್ಕಾರಕ್ಕೂ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಆಡಳಿತ ನಡೆಸುವಾಗ ಎಮ್ ಈ ಎಸ್ ಅನ್ನು ಬಹಿಷ್ಕರಿಸಬೇಕು ಅಂತ ಬಿಜೆಪಿ ಹೇಳುತ್ತದೆ ಹಾಗೆಯೇ ಬಿಜೆಪಿ ಅಧಿಕಾರದಲ್ಲಿದ್ದರೆ, ಕಾಂಗ್ರೆಸ್ ಹಾಗೆ ಹೇಳುತ್ತದೆ. ಆದರೆ ಅದನ್ನು ಮಾಡುವ ಎದೆಗಾರಿಕೆ ಮಾತ್ರ ಯಾವ ಸರ್ಕಾರಕ್ಕೂ ಇಲ್ಲ. ಶುಕ್ರವಾರ ಮದುವೆ ಮನೆಯೊಂದರಲ್ಲಿ ಎಮ್ ಈ ಎಸ್ ಪುಂಡರು ಗಲಾಟೆ ನಡೆಸಿದ್ದಾರೆ. ಈಗಷ್ಟೇ ದಾವೋಸ್ ನಿಂದ ಬೆಂಗಳೂರಿಗೆ ವಾಪಸ್ಸು ಬಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಏನಾದರೂ ಕ್ರಮ ತೆಗದೆಕೊಳ್ಳುತ್ತೀರಾ ಅಂತ ಮಾಧ್ಯಮದವರು ಕೇಳಿದರು.

ಅದಕ್ಕೆ ಉತ್ತರವಾಗಿ ಬೊಮ್ಮಾಯಿ ಅವರು ಎಮ್ ಈ ಎಸ್ ಪುಂಡಾಟಿಕೆಯನ್ನು ನಾವು ಖಂಡಿಸುತ್ತೇವೆ, ಮದುವೆ ಮನೆಯಲ್ಲಿ ದೊಂಬಿ ಸೃಷ್ಟಿಸಿದ ಪುಂಡರ ವಿರುದ್ಧ ಪೊಲೀಸರು ಈಗಾಗಲೇ ಕ್ರಮ ತೆಗೆದುಕೊಂಡಿದ್ದಾರೆ. ಪುಂಡರಿಗೆ ನಾನೊಂದು ಸ್ಪಷ್ಟ ಎಚ್ಚರಿಕೆಯನ್ನು ನೀಡುತ್ತೇನೆ. ಕಾನೂನು ಕೈಗೆತ್ತಿಕೊಳ್ಳುವ ಕೃತ್ಯಗಳನ್ನು ಅವರು ನಡೆಸಿದರೆ ಸಹಿಸಲಾಗಲ್ಲ, ಕನ್ನಡಿಗರಿಗೆ ತೊಂದರೆ ನೀಡಿದರೆ ಉಗ್ರಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಎಲ್ಲ ಸರ್ಕಾರಗಳು ಮತ್ತು ಮುಖ್ಯಮಂತ್ರಿಗಳು ಹೀಗೆ ಬರೀ ಮಾತಿನ ಎಚ್ಚರಿಕೆ ನೀಡಿದ್ದರಿಂದಲೇ ಎಮ್ ಈ ಎಸ್ ಕಾರ್ಯಕರ್ತರು ಬೆಳಗಾವಿಯಲ್ಲಿ ಬಲಿತು ಕೂತಿದ್ದಾರೆ. ಮುಖ್ಯಮಂತ್ರಿಗಳು ಆಡುವ ಮಾತಿನ ವರಸೆ ನೋಡಿದರೆ, ಬೆಳಗಾವಿಯಲ್ಲಿ ಕನ್ನಡಿಗರು ಅಲ್ಪಸಂಖ್ಯಾತರು ಮತ್ತು ಎಮ್ ಈ ಎಸ್ ಸಂಘಟನೆಯ ಮರಾಠಿಗರೇ ಬಹುಸಂಖ್ಯಾತರು, ಬಲಾಢ್ಯರು ಅನ್ನುವಂತಿದೆ. ಹಾಗಾಗಿ ಅಲ್ಲಿನ ಕನ್ನಡಿಗರಿಗೆ ಅವರ ಉಪಟಳ ಮುಂದುವರಿಯಲಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published. Required fields are marked *