ಬೆಂಗಳೂರು: ಕೋವಿಡ್-19 2ನೇ ಅಲೆಯಿಂದಾಗಿ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿರುವ ಭಾರತಕ್ಕೆ ಅಮೆರಿಕ ಸಕಲ ನೆರವು ನೀಡಲು ಸಿದ್ಧ ಎಂದು ಹೇಳಿದೆ. ಈ ನಡುವೆಯೇ ಅಮೆರಿಕ ರಾಯಭಾರ ಕಚೇರಿ ಕನ್ನಡದಲ್ಲಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.

ದಕ್ಷಿಣ ಭಾರತದ ಮೂರು ಭಾಷೆಗಳಲ್ಲಿ ಚೆನ್ನೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಟ್ವೀಟ್ ಮಾಡಿದ್ದು, ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಎಮರ್ಜೆನ್ಸಿ ಅಪಾಯಿಂಟ್ಮೆಂಟ್​​ ಸೇವೆಗಳು ಮುಂದುವರಿಯುತ್ತವೆ. ಆ ಅವಧಿಯಲ್ಲಿ ನೀವು ಗೊತ್ತುಪಡಿಸಿದ ಎಮರ್ಜೆನ್ಸಿ ಅಪಾಯಿಂಟ್ಮೆಂಟ್​​ಅನ್ನು ಮಾನ್ಯ ಮಾಡುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ. ಚೆನ್ನೈ ವಿಎಸಿನಲ್ಲಿ ತುರ್ತು ಬಯೋಮೆಟ್ರಿಕ್​ ಅಪಾಯಿಂಟ್ಮೆಂಟ್​​ಗಳಿಗೆ ಮಾತ್ರ ಅವಕಾಶ ಇರುತ್ತದೆ ಎಂದು ತಿಳಿಸಿದೆ.

ಇದಕ್ಕೂ ಮುನ್ನ ಅಮೆರಿಕ ರಾಯಭಾರ ಕಚೇರಿ ಮಾಡಿದ್ದ ಟ್ವೀಟ್​​ನಲ್ಲಿ, ತೀವ್ರವಾಗಿ ಹೆಚ್ಚುತ್ತಿರುವ ಕೋವಿಡ್ 19 ಪ್ರಕರಣಗಳ ನಡುವೆ ಶ್ರಮ ಪಡುತ್ತಿರುವ ಭಾರತೀಯ ನಾಗರಿಕರ ಬಗ್ಗೆ ನಮಗೆ ಸಹಾನುಭೂತಿ ಇದೆ. ಕೋವಿಡ್​​​ 19 ನಿಯಂತ್ರಣಕ್ಕೆ ಪ್ರಯತ್ನಿಸುತ್ತಿರುವ ಭಾರತ ಸರ್ಕಾರದೊಡನೆ ಕೈ ಜೋಡಿಸಿ ನಿಕಟ ಬೆಂಬಲ ನೀಡುತ್ತಿದ್ದೇವೆ. ಭಾರತೀಯರಿಗೆ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವ ಸಾಹಸಿಗಳಿಗೆ ಹೆಚ್ಚುವರಿ ಬೆಂಬಲವನ್ನು ನಮ್ಮ ಕಡೆಯಿಂದ ಕ್ಷಿಪ್ರವಾಗಿ ನಿಯೋಜಿಸುತ್ತೇವೆ ಎಂದು ಕಾರ್ಯದರ್ಶಿ ಆಂಟನಿ ಬ್ಲಿಂಕೆನ್​ ಹೇಳಿದ್ದರು.

ಭಾರತದಲ್ಲಿ ತೀವ್ರವಾಗಿರುವ ಕೋವಿಡ್​ ದಿಢೀರ್​ ಸ್ಫೋಟಕ್ಕೆ ಅಮೆರಿಕ ತೀವ್ರ ಕಾಳಜಿ ವ್ಯಕ್ತಪಡಿಸುತ್ತದೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಧೈರ್ಯದಿಂದ ಹೋರಾಡುವಾಗ ಭಾರತದ ನಮ್ಮ ಸ್ನೇಹಿತರು ಮತ್ತು ಸಹಭಾಗಿಗಳಿಗೆ ಹೆಚ್ಚಿನ ಸಾಮಗ್ರಿಗಳ ಸರಬರಾಜು ಮತ್ತು ಉತ್ತಮ ಬೆಂಬಲ ನಿಯೋಜಿಸಲು ಸತತ ಶ್ರಮ ವಹಸಿ ಕೆಲಸ ಮಾಡುತ್ತಿದ್ದೇವೆ ಎಂದು ಜೋಕ್​ ಸಲ್ಲಿವಾನ್​ ಹೇಳಿದ್ದರು.

The post ಕನ್ನಡಿಗರೇ ಇಲ್ನೋಡಿ; ಕನ್ನಡದಲ್ಲೇ ವೀಸಾ, ವ್ಯಾಕ್ಸಿನ್ ಎಲ್ಲ ಮಾಹಿತಿ ನೀಡ್ತಿದೆ ಅಮೆರಿಕಾ appeared first on News First Kannada.

Source: News First Kannada
Read More