ಬೆಂಗಳೂರು: ಕನ್ನಡದ ಅಸ್ಮಿತೆಗೆ ಅಗೌರವ ತೋರುವಂಥ ಬೆಳೆವಣಿಗೆಗಳು ಇತ್ತೀಚೆಗೆ ಕಂಡುಬರುತ್ತಿವೆ. ಕೆಲವು ದಿನಗಳ ಹಿಂದಷ್ಟೇ ಗೂಗಲ್​ನಲ್ಲಿ ಕನ್ನಡಕ್ಕೆ ಅವಮಾನವಾಗುವಂಥ ಘಟನೆ ನಡೆದಿತ್ತು. ಕನ್ನಡಿಗರು ಲಕ್ಷಾಂತರ ಸಂಖ್ಯೆಯಲ್ಲಿ ರಿಪೋರ್ಟ್ ಮಾಡಿದ ಹಿನ್ನೆಲೆ ತನ್ನ ತಪ್ಪನ್ನ ತಿದ್ದಿಕೊಂಡಿತ್ತು. ಇದಾದ ನಂತರ ಅಮೆಜಾನ್ ಆ್ಯಪ್​ನಲ್ಲಿ ಒಳ ಉಡುಪುಗಳ ಮೇಲೆ ಕನ್ನಡ ಲಾಂಛನವನ್ನ ಚಿತ್ರಿಸಿ ಮಾರಾಟಕ್ಕೆ ಇಡಲಾಗಿತ್ತು. ಅಮೆಜಾನ್ ಕೂಡ ನಂತರ ತನ್ನ ತಪ್ಪನ್ನ ತಿದ್ದಿಕೊಂಡಿತ್ತು. ಈ ಬಾರಿ ಗೂಗಲ್​ನಲ್ಲಿ ಮತ್ತೊಂದು ಅಚಾತುರ್ಯ ನಡೆದಿದೆ.

ನೀವು ಗೂಗಲ್​ ಸರ್ಚ್​ನಲ್ಲಿ ತಮಿಳಿನ ವಿಕ್ರಮ್ ವೇದ ಸಿನಿಮಾ ತಂಡದ ಬಗ್ಗೆ ಸರ್ಚ್ ಮಾಡಿದ್ರೆ ಅದ್ರಲ್ಲಿ ರಾಜ್​ ಕುಮಾರ್ ಅವರ ಫೋಟೋ ಕಾಣಿಸುತ್ತಿದೆ. ಫೋಟೋ ಹಾಕಿಕೊಂಡಿದ್ದರೂ ಪರವಾಗಿಲ್ಲ.. ಆದರೆ ಅವರು ಸಿನಿಮಾದಲ್ಲಿ ಅರೆಬೆಂದ(HALF BOIL) ಪಾತ್ರವೊಂದರಲ್ಲಿ ನಟಿಸಿದ್ದಾರೆ ಎಂಬಂತೆ ಮಾಹಿತಿ ತೋರಿಸುತ್ತಿದೆ.

ಕನ್ನಡಿಗರ ಆರಾಧ್ಯ ದೈವ ಎಂದೇ ಹೆಸರಾಗಿರುವ ಕನ್ನಡ ಸಿನಿಮಾ ರಂಗದ ದಂತಕಥೆ ಡಾ. ರಾಜ್​ಕುಮಾರ್ ಅವರ ಬಗ್ಗೆ ಇಷ್ಟು ಕೀಳು ಮಾಹಿತಿಯನ್ನ ತೋರಿಸುತ್ತಿರುವುದು ಅಕ್ಷಮ್ಯ ಅಪರಾಧವೇ ಸರಿ. ವಿಕ್ರಂ ವೇದ ಸಿನಿಮಾ ತಂಡದಿಂದಲೇ ಈ ಅಚಾತುರ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.. ಈ ತಪ್ಪಿಗೆ ವಿಕ್ರಂ ವೇದ ಚಿತ್ರತಂಡ ಮತ್ತು ಚಿತ್ರತಂಡದ ತಪ್ಪನ್ನ ತಿದ್ದದ ಗೂಗಲ್ ಕ್ಷಮೆ ಕೇಳಲೇಬೇಕಿದೆ ಎಂದು ರಾಜ್​ಕುಮಾರ್ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಹಾಗಾದ್ರೆ ಇದನ್ನ ರಿಪೋರ್ಟ್ ಮಾಡೋದು ಹೇಗೆ..?

ಗೂಗಲ್​ನಲ್ಲಿ ಇಂಥ ಅಚಾತುರ್ಯಗಳು ನಡೆದಿರುವುದಕ್ಕೆ ಏನೇ ಕಾರಣಗಳಿರಬಹುದು. ಆದ್ರೆ ಡಾ. ರಾಜ್​ಕುಮಾರ್ ಅವರನ್ನ ಅವಮಾನಿಸುವುದು ಕನ್ನಡವನ್ನ, ಕರ್ನಾಟಕವನ್ನ ಹಾಗೂ ಕನ್ನಡಿಗರನ್ನ ಅವಮಾನಿಸಿದಂತೆ.. ಗೂಗಲ್ ಇದನ್ನ ಸರಿಪಡಿಸಬೇಕಿದೆ.. ಹಾಗೆ ಸರಿಪಡಿಸಬೇಕಂದ್ರೆ ನಾವು ನೋವೆಲ್ಲರೂ ಗೂಗಲ್​ನಲ್ಲಿ ಈ ವಿಚಾರವನ್ನ ರಿಪೋರ್ಟ್ ಮಾಡಬೇಕು.

ಗೂಗಲ್​ನಲ್ಲಿ ಬರುವ ರಿಸಲ್ಟ್​ನ ಕೆಳಭಾಗದಲ್ಲಿ ಫೀಡ್​ಬ್ಯಾಕ್​ ಆಯ್ಕೆ ಇದೆ. ಅದನ್ನ ಕ್ಲಿಕ್ ಮಾಡಿ ಅದರಲ್ಲಿ ಮೂರನೇ ಆಯ್ಕೆಯನ್ನ ಸೆಲೆಕ್ಟ್ ಮಾಡಬೇಕು. ಸೆಲೆಕ್ಟ್ ಮಾಡಿದ ನಂತರ ಕೆಳಗೆ ನಿಮ್ಮ ಅಭಿಪ್ರಾಯವನ್ನ ದಾಖಲಿಸಿ ಸೆಂಡ್​ ಮಾಡಿದ್ರೆ ಮುಗಿಯಿತು. ಬೇಕಿದ್ದರೆ ಫೀಡ್​ಬ್ಯಾಕ್ ಕೂಡ ಟೈಪ್​ ಮಾಡಬಹುದು. ಸಾವಿರಾರು ಸಂಖ್ಯೆಯಲ್ಲಿ ರಿಪೋರ್ಟ್ ಮಾಡಿದ್ರೆ ಗೂಗಲ್​ನಲ್ಲಿ ಆಗಿರುವ ತಪ್ಪನ್ನ ಸಂಸ್ಥೆ ಸರಿಪಡಿಸಲಿದೆ.

The post ಕನ್ನಡಿಗರ ಕಣ್ಮಣಿ ಡಾ.ರಾಜ್​ ಕುಮಾರ್​ಗೆ ಗೂಗಲ್​ನಿಂದ ಅವಮಾನ? ಇದು ತಮಿಳು ಚಿತ್ರದ ಯಡವಟ್ಟಾ? appeared first on News First Kannada.

Source: newsfirstlive.com

Source link