ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಇಂದು ಕನ್ನಡದ ವಿಚಾರವಾಗಿ ದೊಡ್ಡಮಟ್ಟದ ಚರ್ಚೆ ಶುರುವಾಗಿತ್ತು. ಅದೇನಂದ್ರೆ ಗೂಗಲ್ ಸರ್ಚ್ ಎಂಜಿನ್​ನಲ್ಲಿ ಭಾರತದ ಅತೀ ಕುರೂಪಿ ಭಾಷೆ ಯಾವುದು ಎಂದು ಸರ್ಚ್ ಮಾಡಿದ್ರೆ ಅದಕ್ಕೆ ಉತ್ತರವಾಗಿ ಕನ್ನಡ ಎಂದು ಗೂಗಲ್ ತೋರಿಸುತ್ತಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವಾಗಿ ಗೂಗಲ್ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಕನ್ನಡಿಗರು ಗೂಗಲ್​ನಲ್ಲಿ ರಿಪೋರ್ಟ್ ಮಾಡುವ ಮೂಲಕ ಗೂಗಲ್​ಗೆ ಬುದ್ಧಿವಾದ ಹೇಳಿದ್ದಾರೆ. ಕೊನೆಗೂ ದೈತ್ಯ ಸಂಸ್ಥೆ ಗೂಗಲ್ ತನ್ನ ತಪ್ಪನ್ನ ತಿದ್ದಿಕೊಂಡಿದೆ. ಮೊದಲಿಗೆ ತೋರಿಸ್ತಿದ್ದ ರಿಸಲ್ಟ್​ನ್ನು ತೆಗೆದುಹಾಕಿದೆ. ಇದರಿಂದ ಕನ್ನಡಿಗರಿಗೆ ದೊಡ್ಡಮಟ್ಟದ ಗೆಲುವು ಸಿಕ್ಕಂತಾಗಿದೆ.

The post ಕನ್ನಡಿಗರ ಹೋರಾಟಕ್ಕೆ ಕೊನೆಗೂ ಸಿಕ್ತು ಗೆಲುವು.. ತಪ್ಪು ತಿದ್ದಿಕೊಂಡ ಗೂಗಲ್ appeared first on News First Kannada.

Source: newsfirstlive.com

Source link