ಕನ್ನಡಿಗ ಪ್ರಸಿದ್ಧ್ ಕೃಷ್ಣನ ಬಗ್ಗೆ ಹರ್ಭಜನ್ ಸಿಂಗ್ ಕಂಡ ಕನಸು ಏನು ಗೊತ್ತಾ..?


ಟಿ-20 ವಿಶ್ವಕಪ್ ಟೂರ್ನಿಯ ಟೀಮ್ ಇಂಡಿಯಾದಲ್ಲಿ ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನ ನೋಡಲು ಇಚ್ಛಿಸುತ್ತೇನೆ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೇಳಿದ್ದಾರೆ.

ವಿಂಡೀಸ್​ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕರ್ನಾಟಕದ ವೇಗಿ ಪ್ರಸಿದ್ಧ್​ 10 ಓವರ್​ಗಳಲ್ಲಿ ಕೇವಲ 12 ರನ್ ನೀಡಿ 4 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಪ್ರಸಿದ್ಧ್​ ತಮ್ಮ ಕರಿಯರ್ ದಿ ಬೆಸ್ಟ್​ ಫರ್ಫಾಮೆನ್ಸ್ ನೀಡಿದ ಬೆನ್ನಲ್ಲೇ ಭಜ್ಜಿ ಪ್ರಸಿದ್ಧ್​ ಬೌಲಿಂಗ್​ನ ಹಾಡಿ ಹೊಗಳಿದ್ದಾರೆ.

ಕೃಷ್ಣ ಏಕದಿನ ಮಾದರಿಯಲ್ಲಿ ತಮ್ಮ ಸಾಮರ್ಥ್ಯವನ್ನ ನಿರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಟೆಸ್ಟ್ ತಂಡದಲ್ಲೂ ಪ್ರಸಿದ್ಧ್ ಸ್ಥಾನ ಪಡೆಯುವ ಭರವಸೆ ನನಗಿದೆ. ಆಸ್ಟ್ರೇಲಿಯಾದಲ್ಲಿನ ಕ್ರಿಕೆಟ್​ ಗ್ರೌಂಡ್ಸ್ ಅತ್ಯಂತ ದೊಡ್ಡದಾಗಿವೆ. ಅಂತಹ ಗ್ರೌಂಡ್​​ಗಳಲ್ಲಿ ಪ್ರಸಿದ್ಧ್​ ಕೃಷ್ಣರ ಎಕ್ಸ್​ಟ್ರಾ ಬೌನ್ಸ್ ಹಾಗೂ ಪೇಸ್​ ತಂಡಕ್ಕೆ ನೆರವಾಗಲಿದೆ. ಸದ್ಯ ಟೀಮ್ ಇಂಡಿಯಾದಲ್ಲಿರೋ ಎಲ್ಲಾ ಬೌಲರ್​ಗಳಿಗಿಂತ ಪ್ರಸಿದ್ಧ್​ ಕೃಷ್ಣ ತಮ್ಮ ಬೌಲಿಂಗ್​ನಲ್ಲಿ ಹೆಚ್ಚಿನ ಬೌನ್ಸ್ ಹಾಗೂ ಪೇಸ್ ಹೊಂದಿದ್ದಾರೆ ಎಂದು ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಹೇಳಿದ್ದಾರೆ.

The post ಕನ್ನಡಿಗ ಪ್ರಸಿದ್ಧ್ ಕೃಷ್ಣನ ಬಗ್ಗೆ ಹರ್ಭಜನ್ ಸಿಂಗ್ ಕಂಡ ಕನಸು ಏನು ಗೊತ್ತಾ..? appeared first on News First Kannada.

News First Live Kannada


Leave a Reply

Your email address will not be published.