ಆ ಇಬ್ಬರು ಆಟಗಾರರದ್ದು, ಒಂದೇ ಪರಿಸ್ಥಿತಿ.. ಒಂದೇ ಸಲ ಜೊತೆಯಾಗಿ ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿದ್ದ ಆ ಇಬ್ಬರು, ಈಗ ಗೆಸ್ಟ್​ ಅಪಿರೆನ್ಸ್ ಪ್ಲೇಯರ್ಸ್. ಹೌದು, ಇಬ್ಬರೂ ಮೋಸ್ಟ್​ ಟ್ಯಾಲೆಂಟೆಡ್ ಕ್ರಿಕೆಟರ್ಸ್. ಆದರೆ ಸಿಕ್ಕಿದ್ದು ಅಲ್ಲೊಂದು ಇಲ್ಲೊಂದು ಅವಕಾಶ. ಅದೇ ರೀತಿ ಟೀಮ್ ಇಂಡಿಯಾದಿಂದ ಒಂದೇ ಸಲ ಗೇಟ್​​ಪಾಸ್ ಪಡೆದಿದ್ದರು, ಆದ್ರೀಗ ಜೊತೆಯಾಗೇ ಕಮ್​​​​ಬ್ಯಾಕ್ ಮಾಡಿದ್ದಾರೆ.

ಜುಲೈನಲ್ಲಿ ಆರಂಭವಾಗಲಿರುವ ಲಂಕಾ ಪ್ರವಾಸಕ್ಕೆ ಯುವ ಪಡೆಯನ್ನೇ ಪ್ರಕಟಿಸಲಾಗಿದೆ. ಮೊದಲ ಬಾರಿಗೆ ಧವನ್​ ಸಾರಥ್ಯದಲ್ಲಿ ಲಂಕಾ ದಹನಕ್ಕೆ ಹೊರಟಿರುವ ಯಂಗ್​ ಟೀಮ್​​ನಲ್ಲಿ, ಆರು ಹೊಸ ಮುಖಗಳಿಗೆ ಬಿಸಿಸಿಐ ಮಣೆ ಹಾಕಿದೆ. ಈ ಹಿಂದೆ ತಂಡದಿಂದ ಕೈಬಿಡಲಾಗಿದ್ದ ತ್ರಿಮೂರ್ತಿ ಆಟಗಾರರಿಗೆ, ಚಾನ್ಸ್​ ನೀಡಲಾಗಿದೆ. ಆ ಮೂವರಲ್ಲಿ ಕನ್ನಡಿಗ ಮನೀಶ್​ ಪಾಂಡೆ ಮತ್ತು ಸಂಜು ಸ್ಯಾಮ್ಸನ್​ ಪ್ರಮುಖರು.

ಸದ್ಯ ಲಂಕಾ ಪ್ರವಾಸಕ್ಕೆ ಆಯ್ಕೆ ಆಗಿರುವ ಮನೀಶ್, ಸಂಜು, ಆಸ್ಟ್ರೇಲಿಯಾ ಪ್ರವಾಸದ ಬಳಿಕ ಒಮ್ಮೆಲೆ ತಂಡದಿಂದ ಕೈಬಿಡಲಾಗಿತ್ತು. ಆಯ್ಕೆಗಾರರ ಅವಕೃಪೆಗೆ ಒಳಗಾಗಿದ್ದ ಈ ಇಬ್ಬರು, ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕೊಕ್ ನೀಡಲಾಗಿತ್ತು. ಈಗ ಈ ಆಟಗಾರರ ಮೇಲೆ ಕೃಪೆ ತೋರಿರುವ ಆಯ್ಕೆ ಸಮಿತಿ, ಫೈನಲ್ ಚಾನ್ಸ್​ ನೀಡಿದೆ.

ಗುತ್ತಿಗೆ ಒಪ್ಪಂದಿಂದ ಔಟ್​ ಆಗಿದ್ದ ಮನೀಶ್​ಗೆ ಲಾಸ್ಟ್​ ಚಾನ್ಸ್..!
ಆಸ್ಟ್ರೇಲಿಯಾ ಟಿ-20 ಸರಣಿಯಲ್ಲಿ ಕಾಣಿಸಿಕೊಂಡಿದ್ದ ಮನೀಶ್​, ಇಂಜುರಿ ಕಾರಣದಿಂದ ತಂಡದಿಂದ ಕೈಬಿಡಲಾಗಿತ್ತು. ನಂತರ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಂಪೂರ್ಣ ಚೇತರಿಸಿಕೊಂಡಿದ್ದ ಮನೀಶ್​​​ಗೆ, ಚಾನ್ಸ್​ ನೀಡದೆ ಶಾಕ್ ನೀಡಲಾಗಿತ್ತು. ನಂತರ ವಾರ್ಷಿಕ ಗುತ್ತಿಗೆ ಒಪ್ಪಂದದಿಂದಲೂ ಕೈಬಿಟ್ಟ ಬಿಸಿಸಿಐ, ಟೀಮ್ ಇಂಡಿಯಾ ಬಾಗಿಲು ಮುಚ್ಚಿದೆ ಎಂಬ ಪರೋಕ್ಷ ಸಂದೇಶ ಕೂಡ ನೀಡಿತ್ತು.

ಈ ಎಲ್ಲಾ ಬೆಳವಣಿಗೆಗಳ ನಡುವೆ ತಂಡಕ್ಕೆ ಎಂಟ್ರಿಕೊಟ್ಟಿದ್ದ ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್ ಅಬ್ಬರದಾಟ, ಮತ್ತೊಂದೆಡೆ ಐಪಿಎಲ್​ನಲ್ಲಿ ಮನೀಶ್​ ಸ್ಲೋ ಇನ್ನಿಂಗ್ಸ್,​ ಕೆರಿಯರ್​ಗೆ ಫುಲ್​​ಸ್ಟಾಪ್​ ಆಗಿತ್ತು. ಆದ್ರೆ ಹಿರಿಯರ ಅಲಭ್ಯತೆ, ಕನ್ನಡಿಗ ಮನೀಶ್​ ಪಾಂಡೆಗೆ, ಚಾನ್ಸ್​ ಗಿಟ್ಟಿಸುವಂತೆ ಮಾಡಿದೆ. ಇದು ಪಾಂಡೆ ಪಾಲಿನ ಲಾಸ್ಟ್ ಚಾನ್ಸ್ ಕೂಡ ಹೌದು.

ಮನೀಶ್​ ಅಳಿವು, ಉಳಿವಿನ ಪ್ರಶ್ನೆಗೆ ಲಂಕಾ ಸರಣಿಯೇ ಉತ್ತರ
ಮನೀಶ್​ ಪಾಂಡೆಗೆ, ಲಂಕಾ ಪ್ರವಾಸ ನಿಜಕ್ಕೂ ಡು ಆರ್ ಡೈ ಸಿರೀಸ್​ ಆಗಿದೆ.. ಇದುವರೆಗೆ ಆಗೊಂದು ಈಗೊಂದು ಪಂದ್ಯದಲ್ಲಿ ಆಡಿ, ಬೆಂಚ್​ಗೆ ಮೀಸಲಾಗಿದ್ದ ಮನೀಶ್​, ಮಿಂಚಿನಾಟ ಪ್ರದರ್ಶಿಸಲು ಲಂಕಾ ಟೂರ್ ಮಹತ್ವದ ವೇದಿಕೆಯಾಗಿದೆ. ಅಷ್ಟೇ ಅಲ್ಲ..! ಈಗ ಅಂತತ್ರಕ್ಕೆ ಸಿಲುಕಿರುವ ಮನೀಶ್​, ಅಳಿವಿನ ಅಂಚಿಗೆ ಸಿಲುಕಿರುವ ತನ್ನ ಸ್ಥಾನ ಉಳಿಸಿಕೊಳ್ಳಲು ಶ್ರೀಲಂಕಾ ಪ್ರವಾಸವೇ ಉತ್ತರವಾಗಿದೆ.

ಹಾಗಾಗಿ ಅದೃಷ್ಟವಾಗಿ ಸಿಕ್ಕ ಈ ಅವಕಾಶದಲ್ಲಿ ಮನೀಶ್​ ಪಾಂಡೆ, ವೀರಾವೇಶ ತೋರಿಸಬೇಕಿದೆ. ಸಾಮರ್ಥ್ಯಕ್ಕಿಂತ ಮಿಗಿಲಾದ ಆಟವಾಡುವುದರೊಂದಿಗೆ ಕಡೆಗಣಿಸಿದವರಿಗೆ, ತಕ್ಕ ಪ್ರತ್ಯುತ್ತರ ನೀಡಿದರೆ ಮಾತ್ರವೇ ಉಳಿಗಾಲ ಎಂಬುವುದನ್ನ ಅರಿತು ಬ್ಯಾಟ್​ ಬೀಸಬೇಕಿದೆ.. ಅಕಸ್ಮಾತ್ ಈ ಅವಕಾಶ ಕೈಚೆಲ್ಲಿದರೆ ಮನೀಶ್ ಪಾಂಡೆಗೆ ತಂಡದಿಂದ ಗೇಟ್​ಪಾಸ್ ಗ್ಯಾರೆಂಟಿ.

ಯುವಕರೊಂದಿಗಿನ ಸೆಣಸಾಟದಲ್ಲಿ ಸಿಗುತ್ತಾ ಸ್ಥಾನ..?
ಒಂದು ಕಡೆ ಡು ಆರ್​ ಡೈ ಪರಿಸ್ಥಿತಿಯಲ್ಲಿ ಕಮಾಲ್ ಮಾಡಬೇಕಿರುವ ಮನೀಶ್​, ಮತ್ತೊಂದೆಡೆ ತಂಡದ ಪ್ಲೇಯಿಂಗ್ ಇಲೆವೆನ್​​ನಲ್ಲಿ ಸ್ಥಾನ ಗಿಟ್ಟಿಸಲು ಯುವ ಆಟಗಾರರೊಂದಿಗೆ ಸೆಣಸಾಡಬೇಕಿದೆ. ಅದ್ರಲ್ಲೂ ಮನೀಶ್​ ಪಾಂಡೆ ಫೇವರಿಟ್ ಸ್ಲಾಟ್​​ನಲ್ಲಿ, ಭಾರೀ ಪೈಪೋಟಿಯೇ ಇದೆ. ಒಂದೆಡೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಬಲ್ಲ ಇಶಾನ್ ಕಿಶಾನ್ ಕಾದುಕುಳಿತರೆ, ಮತ್ತೊಂದೆಡೆ ಸಂಜು ಸ್ಯಾಮ್ಸನ್ ಕೂಡ ನಾಲ್ಕರ ಸ್ಲಾಟ್​​ನ, ಸ್ಪರ್ಧಿಯಾಗಿದ್ದಾರೆ. ಅಷ್ಟೇ ಅಲ್ಲ..! ಅದ್ರಲ್ಲೂ ದೇಶಿ ಕ್ರಿಕೆಟ್​​ನಲ್ಲಿ ರನ್​​ ಹೊಳೆಯನ್ನೇ ಹರಿಸಿರುವ ಯುವಕರ ಪೈಪೋಟಿ ನಡುವೆ, 4ನೇ ಕ್ರಮಾಂಕಕ್ಕೆ ಮನೀಶ್​ ಬೆಸ್ಟ್ ಚಾಯ್ಸ್​ ಅನ್ನೋದನ್ನ ಮರೆಯುವಂತಿಲ್ಲ.

ವಿಕೆಟ್ ಕೀಪರ್ ಸಂಜುಗೂ ನಿರ್ಣಾಯಕ ಸರಣಿ
ಒಂದು ಕಡೆ ಮನೀಶ್​ ಪಾಂಡೆಗೆ ಅಳಿವು, ಉಳಿವಿನ ಪ್ರಶ್ನೆಯಾಗಿದ್ರೆ, ಮತ್ತೊಂದೆಡೆ ಸಂಜು ಸ್ಯಾಮ್ಸನ್​​ಗೂ ಲಂಕಾ ಪ್ರವಾಸ ನಿರ್ಣಾಯಕವೇ ಆಗಿದೆ. ಮನೀಶ್​ ಪಾಂಡೆಯಂತೆ ಆಸಿಸ್ ಸರಣಿ ಬಳಿಕ ತಂಡದಿಂದ ಗೇಟ್​ಪಾಸ್ ಪಡೆದಿದ್ದ ಸಂಜು, ಇಂಗ್ಲೆಂಡ್ ವಿರುದ್ಧದ ಚುಟಕು ಸರಣಿಯಿಂದ ಕಡೆಗಣಿಸಲ್ಪಟ್ಟಿದರು. ಅದ್ರೆ ಐಪಿಎಲ್​​ನಲ್ಲಿ ನಾಯಕನಾಗಿ ಮಿಂಚಿದ ಸಂಜು, ಈಗ ಲಂಕಾ ಪ್ರವಾಸದಲ್ಲಿ ಗೇಮ್ ಚೇಂಜರ್​​​ ಆಟ ಆಡಬೇಕಿದೆ. ಅದ್ರಲ್ಲೂ ಸಂಜು ಸ್ಯಾಮ್ಸನ್​ಗೆ ಪ್ರತಿಸ್ಪರ್ಧಿ ಅಂತಾ ಗುರುತಿಸಿಕೊಂಡಿರುವ ಇಶಾನ್ ಕಿಶಾನ್​ಗೂ, ಮಿಗಿಲಾದ ಪರ್ಫಾಮೆನ್ಸ್ ಸಂಜು ಬ್ಯಾಟ್​ನಿಂದ ಬರಬೇಕಿದೆ.

ಸ್ಲೋ ಟ್ರ್ಯಾಕ್​​ನಲ್ಲಿ ಪಾಂಡೆ ಪರಿಣಾಮಕಾರಿ ಆಟ
ಸದ್ಯ ತಂಡದಲ್ಲಿರುವ ಆಟಗಾರರಿಗೆ ಹೋಲಿಸಿದ್ರೆ, ಶ್ರೀಲಂಕಾದಲ್ಲಿ ಮನೀಶ್​ ಪಾಂಡೆ ಹೆಚ್ಚು ಪರಿಣಾಮಕಾರಿ ಆಟಗಾರ. ಕಷ್ಟಕರ ಎನಿಸುವ ಸ್ಲೋ ಟ್ರ್ಯಾಕ್​​ನಲ್ಲಿ ಮನೀಶ್ ಮೆಚ್ಯುರಿಟಿ ಬ್ಯಾಟಿಂಗ್, ತಂಡಕ್ಕೆ ಹೆಚ್ಚು ನೆರವಾಗಲಿದೆ. ಪಿಚ್​​ಗೆ ಅನುಗುಣವಾಗಿ ಬ್ಯಾಟ್​ಬೀಸಬಲ್ಲ ಪಾಂಡೆ, ಲಂಕಾ ಸರಣಿಯಲ್ಲಿ ಎಕ್ಸ್​ಫ್ಯಾಕ್ಟರ್ ಪ್ಲೇಯರ್​ ಆಗೋದ್ರಲ್ಲಿ, ಅನುಮಾನ ಇಲ್ಲ.

ಹಾಗಾಗಿ ಲಂಕಾದ ಸ್ಲೋ ಟ್ರ್ಯಾಕ್​​ನಲ್ಲಿ ಮನೀಶ್​, ಮ್ಯಾಚ್​ ವಿನ್ನಿಂಗ್ ಪರ್ಫಾಮೆನ್ಸ್​ ನೀಡಿದ್ರೇನೇ, ಟಿ20 ವಿಶ್ವಕಪ್​ ಟಿಕೆಟ್ ರೇಸ್​​ನಲ್ಲಿ ನಿಲ್ಲಲಿದ್ದಾರೆ. ಅಕಸ್ಮಾತ್ ಅವಕಾಶ ಕೈಚೆಲ್ಲಿದರೆ, ಟೀಮ್ ಇಂಡಿಯಾದಿಂದ ಸಂಪೂರ್ಣ ಗೇಟ್​​ಪಾಸ್ ಗ್ಯಾರಂಟಿ! ಒಟ್ನಲ್ಲಿ ಅದೇನೇ ಆಗಲಿ, ಅದೃಷ್ಟವಾಗಿ ಸಿಕ್ಕ ಈ ಅವಕಾಶವನ್ನ ಮನೀಶ್ ಪಾಂಡೆ ಬಳಸಿಕೊಂಡು ಮಿಂಚಲಿ, ಅನ್ನೋದೇ ಅಭಿಮಾನಿಗಳ ಆಶಯ.

The post ಕನ್ನಡಿಗ ಮನೀಶ್​ಗೆ ಲಾಸ್ಟ್​ ಚಾನ್ಸ್ -ಅಳಿವು, ಉಳಿವಿನ ಪ್ರಶ್ನೆಗೆ ಲಂಕಾ ಸರಣಿಯೇ ಉತ್ತರ appeared first on News First Kannada.

Source: newsfirstlive.com

Source link