ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15ರ ಸಿದ್ದತೆಗಳು ಶುರುವಾಗಿವೆ. ಈ ಬೆನ್ನಲ್ಲೇ ಯಾವ ತಂಡ ಯಾರನ್ನು ಉಳಿಸಿಕೊಳ್ಳಲಿದೆ ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ. 2 ಹೊಸ ತಂಡಗಳು ಸೇರ್ಪಡೆಯಿಂದಾಗಿ ಆಟಗಾರರ ಬೇಡಿಕೆ ಕೂಡ ಹೆಚ್ಚಾಗಿದೆ. ಈಗಾಗಲೇ ಕೆಲ ಸ್ಟಾರ್ ಆಟಗಾರರು ಹಳೇ ಫ್ರಾಂಚೈಸಿಯಿಂದ ಹೊರಬರುವುದು ಬಹುತೇಕ ಖಚಿತವಾಗಿದೆ.
ಕೆಲ ತಂಡಗಳು ಹೊಸ ನಾಯಕನ ಹುಡುಕಾಟದಲ್ಲಿದೆ. ಈ ನಡುವೆ ಕೆಲ ಫ್ರಾಂಚೈಸಿಗಳು ಮನೀಶ್ ಪಾಂಡೆಯನ್ನ ತಂಡಕ್ಕೆ ಸೇರಿಸಿಕೊಳ್ಳಲು ಉತ್ಸುಕತೆ ತೋರಿವೆ ಎನ್ನಲಾಗ್ತಿದೆ. ಕಳೆದ ಸೀಸನ್ನಲ್ಲಿ ಫಾರ್ಮ್ ಕಳೆದುಕೊಂಡಿದ್ದ ಮನೀಶ್ ಪಾಂಡೆಯನ್ನ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಉಳಿಸಿಕೊಳ್ಳುವುದು ಅನುಮಾನವಾಗಿದೆ.
ಐಪಿಎಲ್ನಲ್ಲಿ ಉಪನಾಯಕನಾಗಿ, ನಾಯಕನ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ಅಲ್ಲದೇ ಕರ್ನಾಟಕ ತಂಡದ ನಾಯಕನಾಗಿ ಕೆಲ ವರ್ಷಗಳಿಂದ ಯಶಸ್ಸು ಕಂಡಿದ್ದಾರೆ. ಹೀಗಾಗಿ ಮನೀಶ್ ಪಾಂಡೆಯನ್ನ ತಂಡಕ್ಕೆ ಸೇರಿಸಿಕೊಂಡು ನಾಯಕತ್ವ ನೀಡಲು ಕೆಲ ಫ್ರಾಂಚೈಸಿಗಳು ಚಿಂತಿಸುತ್ತಿವೆ ಎನ್ನಲಾಗ್ತಿದೆ. ಈ ಪೈಕಿ ಆರ್ಸಿಯೂ ಒಂದು ಎಂದು ಹೇಳಲಾಗ್ತಿದೆ.