ಕನ್ನಡಿಗ ಸುಹಾಸ್, ಧವನ್​ ಸೇರಿ 35 ಮಂದಿಗೆ ಅರ್ಜುನ ಪ್ರಶಸ್ತಿ -ಇಲ್ಲಿದೆ ಅವಾರ್ಡ್​ ವಿನ್ನರ್ಸ್ ಲಿಸ್ಟ್‌


ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಈ ಬಾರಿ ಖೇಲ್​ ರತ್ನ ಪ್ರಶಸ್ತಿಯನ್ನ ಒಟ್ಟು 12 ಸಾಧಕರಿಗೆ ನೀಡಲಾಗಿದೆ. ಇದರಲ್ಲಿ  ಟೋಕಿಯೊ ಒಲಿಂಪಿಕ್ಸ್​​​ನಲ್ಲಿ ಪದಕ ಗೆದ್ದ ಸಾಧಕರೂ ಇದ್ದಾರೆ.

ದ್ರೋಣಾಚಾರ್ಯ ಪ್ರಶಸ್ತಿ: ಟಿಪಿ ಔಸೆಫ್, ಸರ್ಕಾರ್ ತಲ್ವಾರ್, ಸರ್ಪಾಲ್ ಸಿಂಗ್, ಅಶನ್ ಕುಮಾರ್ ಮತ್ತು ತಪನ್ ಕುಮಾರ್ ಪಾಣಿಗ್ರಾಹಿ ಅವರಿಗೆ ಸಂದಿದೆ. ನಿಯಮಿತ ವಿಭಾಗದಲ್ಲಿ ರಾಧಾಕೃಷ್ಣನ್ ನಾಯರ್ ಪಿ, ಸಂಧ್ಯಾ ಗುರುಂಗ್, ಪ್ರೀತಮ್ ಸಿವಾಚ್, ಜೈ ಪ್ರಕಾಶ್ ನೌಟಿಯಾಲ್ ಮತ್ತು ಸುಬ್ರಮಣಿಯನ್ ರಾಮನ್ ಅವರಿಗೆ ನೀಡಲಾಯಿತು.

ಜೀವಮಾನ ಸಾಧನೆ: ಅಭಿಜೀತ್ ಕುಂಟೆ,  ಲೇಖಾ ಕೆಸಿ, ದವೀಂದರ್ ಸಿಂಗ್ ಗಾರ್ಚಾ, ವಿಕಾಸ್ ಕುಮಾರ್ ಮತ್ತು ಸಜ್ಜನ್ ಸಿಂಗ್ ಅವರಿಗೆ ಜೀವಮಾನದ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯ್ತು.

ಅರ್ಜುನ ಪ್ರಶಸ್ತಿ: ಶಿಖರ್ ಧವನ್, ಭವಾನಿ ದೇವಿ, ಮೋನಿಕಾ, ಭಾವಿನಾ ಪಟೇಲ್, ಅರ್ಪಿಂದರ್ ಸಿಂಗ್, ಮಂದೀಪ್ ಸಿಂಗ್, ನೀಲಕಂಠ ಶರ್ಮಾ,  ಶರದ್ ಕುಮಾರ್, ಹಾರ್ದಿಕ್ ಸಿಂಗ್, ಸಿಮ್ರಂಜಿತ್ ಕೌರ್, ವಂದನಾ ಕಟಾರಿಯಾ, ಸಂದೀಪ್ ನರ್ವಾಲ್, ಸಿಂಗ್ರಾಜ್ ಅಧಾನ, ಸುಹಾಸ್ ಯತಿರಾಜ್, ಹಿಮಾನಿ ಉತ್ತಮ್ ಪರಬ್, ಅಭಿಷೇಕ್ ವರ್ಮಾ, ಯೋಗೇಶ್ ಕಥುನಿಯಾ, ಪ್ರವೀಣ್ ಕುಮಾರ್, ಅಂಕಿತಾ ರೈನಾ, ದೀಪಕ್ ಪುನಿಯಾ, ದಿಲ್‌ಪ್ರೀತ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಹರ್ವಿಂದರ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ಬೀರೇಂದ್ರ ಲಾಕ್ರಾ, ಸುಮಿತ್, ನೀಲಕಂಠ ಶರ್ಮಾ, ನಿಶಾದ್ ಕುಮಾರ್, ವಿವೇಕ್ ಸಾಗರ್ ಪ್ರಸಾದ್, ಗುರ್ಜಂತ್ ಸಿಂಗ್, ಮಂದೀಪ್ ಸಿಂಗ್, ಶಂಶೇರ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ವರುಣ್ ಕುಮಾರ್, ಸಿಮ್ರಂಜೀತ್ ಸಿಂಗ್.

ಖೇಲ್​ ರತ್ನ ಪ್ರಶಸ್ತಿ: ನೀರಜ್​ ಚೋಪ್ರಾ (ಜಾವೆಲಿನ್ ಎಸೆತದಲ್ಲಿ ಸ್ವರ್ಣ ಪದಕ), ಅವನಿ ಲೆಖರಾ (ಪ್ಯಾರಾ ಶೂಟಿಂಗ್), ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್), ರವಿ ಕುಮಾರ್ (ಕುಸ್ತಿಪಟು), ಶ್ರೀಜೇಶ್ ಪಿಆರ್, ಮನ್‌ಪ್ರೀತ್ ಸಿಂಗ್ (ಹಾಕಿ), ಕೃಷ್ಣ ನಗರ, ಪ್ರಮೋದ್ ಭಗತ್ (ಪ್ಯಾರಾ ಬ್ಯಾಡ್ಮಿಂಟನ್), ಸುಮಿತ್ ಆಂಟಿಲ್ (ಪ್ಯಾರಾ-ಅಥ್ಲೆಟಿಕ್ಸ್), ಮನೀಶ್ ನರ್ವಾಲ್ (ಪ್ಯಾರಾ ಶೂಟಿಂಗ್), ಮಿಥಾಲಿ ರಾಜ್ (ಕ್ರಿಕೆಟ್), ಸುನಿಲ್ ಛೆಟ್ರಿ (ಫುಟ್‌ಬಾಲ್).

News First Live Kannada


Leave a Reply

Your email address will not be published. Required fields are marked *