ಏನಾದ್ರು ಹೊಸದನ್ನ ಮಾಡಬೇಕು, ಹೊಸದನ್ನ ಸಿರಿಗನ್ನಡ ವೀಕ್ಷಕರಿಗೆ ನೀಡಬೇಕು ಅನ್ನೋ ಗುರಿಯಿಂದ ನಿಮ್ಮ ನ್ಯೂಸ್ ಫಸ್ಟ್ ಕನ್ನಡ ಬಳಗ ಸದಾ ಕಾರ್ಯಶೀಲವಾಗಿರುತ್ತದೆ. ಹೊಸದನ್ನ ಕನ್ನಡಿಗರಿಗೆ ಅರ್ಪಿಸುವ ಯೋಚನೆ ಯೋಜನೆಯಲ್ಲಿದ್ದಾಗಲೇ ಹೊಳೆದ್ದಿದ್ದು ‘‘ಸಖತ್’’ ಕೋರ್ಟ್ ಸೀನ್ ಕನ್ಸೆಪ್ಟ್.
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 39ನೇ ಸಿನಿಮಾ ಸಖತ್. ಚಮಕ್ ಸಿನಿಮಾ ಮಾಡಿ ಕನ್ನಡಿಗರ ಮನ ಗೆದ್ದಿದ್ದ ಗೋಲ್ಡನ್ ಗಣಿ ಆಂಡ್ ಸಿಂಪಲ್ ಸುನಿ ಸಖತ್ ಸಿನಿಮಾ ಮಾಡಿದೆ. ಅಕ್ಕಿ ಅನ್ನ ಆಗಿದಿಯೋ ಇಲ್ವೋ ಅನ್ನೋದನ್ನ ಒಂದು ಅಗಳು ಅನ್ನದಿಂದಲೇ ಕಂಡು ಹಿಡಿಯ ಬಹುದು. ಅದರಂತೆ ಈ ಸಿನಿಮಾ ಹೇಗಿದೆ ಅನ್ನೋದು ಟೀಸರ್ ಹಾಗೂ ಸಾಂಗ್ಸ್ಗಳಿಂದಲೇ ಸ್ಪಷ್ಟವಾಗಿ ಗೊತ್ತಾಗುತ್ತಿದೆ ಸಖತ್ ನಿಜಕ್ಕೂ ಸಖತ್ ಸಿನಿಮಾ ಅಂತ.
ಸ್ಯಾಂಡಲ್ವುಡ್ ರಂಗದ ನೂತನ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ಕೆ.ವಿ.ಎನ್ ಪ್ರೊಡಕ್ಷನ್ ನಿರ್ಮಾಣದ ಸಿನಿಮಾ ಸಖತ್. ಈ ಚಿತ್ರದಲ್ಲಿ ಕೋರ್ಟ್ ಡ್ರಾಮಾ ಸೋಗಸಾಗಿ ಮೂಡಿಬಂದಿದೆ. ಇದೇ ಪರಿಕಲ್ಪನೆಯಲ್ಲಿ ಒಂದು ಸಂದರ್ಶನ ಮಾಡಿದ್ರೆ ಹೆಂಗಿರುತ್ತೆ ಅನ್ನೋ ಒಂದು ಅಂದದ ಅಂದಾಜಿನೊಂದಿಗೆ ಶುರುವಾಗಿದ್ದು ‘ಸಕ್ಕತ್ತಾಗಿದೆ ಸಖತ್’ ಸಂದರ್ಶನದ ಕಾನ್ಸೆಪ್ಟ್.
‘ಸಕ್ಕತ್ತಾಗಿದೆ ಸಖತ್’ ಸಂದರ್ಶನಕ್ಕಾಗಿ ಕೋರ್ಟ್ ರೂಮ್ ಒಂದನ್ನ ಕಂಠೀರವ ಸ್ಟುಡಿಯೋದಲ್ಲಿ ಸೃಷ್ಟಿಸಲಾಗಿತ್ತು. ಒಂದು ನ್ಯೂಸ್ ಚಾನೆಲ್ ಸಂದರ್ಶನ ಒಂದಕ್ಕೆ ಸಿನಿಮಾ ರೇಂಜ್ಗೆ ಕ್ಯಾಮೆರಾ, ಸ್ಕ್ರೀಪ್ಟ್, ಲೈಟು, ಜನರೆಟರು , ಕ್ಯಾರೋ ವ್ಯಾನ್, ಆರ್ಟಿಸ್ಟ್, ಜೂನಿಯರ್ ಆರ್ಟಿಸ್ಟ್, ಟೆಕ್ನಿಶಿಯನ್ ಹೀಗೆ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುವರನೆಲ್ಲ ಸೇರಿಸಿ ಅದ್ದೂರಿಯಾಗಿ ಸಂದರ್ಶನವೊಂದನ್ನ ಮಾಡಿತ್ತು ನಿಮ್ಮ ‘ನ್ಯೂಸ್ ಫಸ್ಟ್ ಕನ್ನಡ’.
ಒಂದಷ್ಟು ತಾಲಿಮು, ಒಂದಷ್ಟು ಸಣ್ಣ ಪುಟ್ಟ ಎಡವಟ್ಟುಗಳೊಂದಿಗೆ ‘ಸಕ್ಕತ್ತಾಗಿದೆ ಸಖತ್’ ಸಂದರ್ಶನ ಶುರುವಾಯ್ತು. ನಮ್ಮ ಈ ಸಿಹಿ ಸಿನಿ ಪ್ರಯತ್ನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಅದ್ಭುತವಾಗಿ ಸ್ಪಂದಿಸಿದ್ರು. ದಿನಾಪೂರ್ತಿ ನಮ್ಮೊಂದಿಗೆಗಿದ್ದು ನಮ್ಮ ತಪ್ಪುಗಳನ್ನ ತಿದ್ದಿ, ಒಪ್ಪುಗಳನ್ನ ಅಪ್ಪಿ-ಒಪ್ಪಿ ನಗು ನಗುತ್ತಲೇ ಸ್ಪಂದಿಸಿದ್ರು. ಕೆಲವೊಂದು ಸೀನ್ಗಳನ್ನ ಅವರೇ ಡೈರೆಕ್ಷನ್ ಕೂಡ ಮಾಡಿದ್ದಾರೆ. ಒಂದೇ ಮಾತಿನಲ್ಲಿ ಗಣೇಶ್ ಮಾಡಿದ ಉಪಕಾರದ ಬಗ್ಗೆ ಹೇಳೋದಾದ್ರೆ ನಮ್ಮ ವಿಭಿನ್ನ ಸಂದರ್ಶನದ ಕಾಮಗಾರಿಯನ್ನ ಹೂವೆತ್ತಿದ್ದ ಹಾಗೆ ಸಲಿಸು ಮಾಡಿಕೊಟ್ಟರು.
ಗಣೇಶ್ ಅವರಂತೆ ಸಖತ್ ಸಿನಿಮಾದ ನಾಯಕಿ ನಿಶ್ವಿಕಾ ನಾಯ್ಡು , ಜಡ್ಜ್ ಪಾತ್ರವನ್ನ ವಹಿಸಿದ ನಿರ್ದೇಶಕ ಕಮ್ ನಟ ರಘುರಾಮ್ , ನಿರ್ದೇಶಕ ಸಿಂಪಲ್ ಸುನಿ , ಹಾಸ್ಯ ನಟ ಧರ್ಮಣ್ಣ ಮತ್ತು ಜೂನಿಯರ್ ಆರ್ಟಿಸ್ಟ್ ಹಾಗೂ ಮುಖ್ಯವಾಗಿ ಹೇಳಲೇ ಬೇಕಾಗಿರುವ ಕೆ.ವಿ.ಎನ್ ಪ್ರೊಡಕ್ಷನ್ನ ಹೃದಯವಂತರು ನಮ್ಮೊಂದಿಗೆ ಸಾಥ್ ನೀಡಿದ್ದು ವಿಶೇಷ. ಈ ಎಲ್ಲರ ಸಹಕಾರದಿಂದಲೇ ಈ ‘ಸಕ್ಕತ್ತಾಗಿದೆ ಸಖತ್’ ಸಿನಿಮಾ ಇಂಟರ್ವ್ಯೂ ಇಷ್ಟು ಸೊಗಸಾಗಿ ಮೂಡಿಬರಲು ಕಾರಣವಾಯ್ತು. ಸಖತ್ ಸಿನಿಮಾದ ಸಹಕಾರಕ್ಕೆ ನಾವೆಂದು ಚಿರಋಣಿ.
ಸತ್ಯವನ್ನೇ ಹೇಳುತ್ತೇನೆ….#26thnovember #sakkath pic.twitter.com/ouQhoTSIdB
— Ganesh (@Official_Ganesh) November 20, 2021