ಸ್ಯಾಂಡಲ್ವುಡ್ ಕಣ್ಣು ಕನ್ನಡ ಟಿವಿಲೋಕದ ಮೇಲೇ ಬಿದ್ದಿದ್ಯಾ? ಹೀಗೊಂದು ಸಂದೇಹ ಬರಲು ಕಾರಣ ಇತ್ತೀಚಿಗಷ್ಟೇ ನಡೆದಿರೋ ಸಿನಿಮಾ ಬೆಳವಣಿಗೆಗಳು. ಯಾಕಂದ್ರೆ, ಕನ್ನಡ ಕಿರುತೆರೆಯಲ್ಲಿ ನಿಮ್ಮಿಂದ ಆಶೀರ್ವಾದ ಪಡೆದಿರೋ ನಟ-ನಟಿಯರನ್ನ ಸ್ಯಾಂಡಲ್ವುಡ್ ರೆಡ್ ಕಾರ್ಪೆಟ್ ವೆಲ್ಕಮ್ ಮಾಡಿದೆ. ಪಾಪ್ಯುಲರ್ ಸ್ಟಾರ್ಸ್ ಈಗ ಸ್ಯಾಂಡಲ್ವುಡ್ಗೆ ಗ್ರ್ಯಾಂಡ್ ಎಂಟ್ರಿಕೊಡ್ತಿದ್ದಾರೆ.
ಮೊದಲಿಗೆ ಸ್ಯಾಂಡಲ್ವುಡ್ನಲ್ಲಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಕೆ.ಆರ್ ಅಂದ್ರೆ ಕಿರಣ್ರಾಜ್.
ಇಲ್ಲಿಯವರೆಗೂ ಕಿರಣ್ರಾಜ್ ನಾಯಕನಟನಾಗಿ ಅಭಿನಯಿಸಿರೋ ಒಂದು ಸಿನಿಮಾವೂ ರಿಲೀಸ್ ಆಗಿಲ್ಲ. ಆದ್ರೆ, ಅದಾಗಲೇ ಅವ್ರು 4 ಕ್ಕೂ ಹೆಚ್ಚು ಸಿನಿಮಾಗಳಿಗೆ ಹೀರೋ ಆಗಿದ್ದಾರೆ. ಸ್ವಾಗತ ಅನ್ನೋ ಸಿನಿಮಾ ಕಂಪ್ಲೀಟ್ ಆಗಿದೆ, ಬಡ್ಡೀಸ್ ಕೂಡ ಶೂಟಿಂಗ್ ಮುಗಿಸಿದೆ. ಸದ್ಯ ಬಹದ್ದೂರ್ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿರೋ ನಟ ಕಿರಣ್ರಾಜ್ರ ಹೊಸ ಚಿತ್ರ ಮಿಸ್ಟರ್ ಆರ್ಕೆಯ ಮೋಷನ್ ಪೋಸ್ಟರ್ ಕೆಲ ದಿನಗಳ ಹಿಂದೆ ರಿಲೀಸ್ ಆಯ್ತು.
ಈ ಸಿನಿಮಾದ ಮೂಲಕ ಕೆ.ಆರ್. ರಾಯಲ್ ಸ್ಟಾರ್ ಕಿರಣ್ರಾಜ್ ಆಗಿದ್ದಾರೆ. ಕೆ.ಆರ್. ಟೀಮ್ ಕಿರಣ್ರಾಜ್ಗೆ ರಾಯಲ್ ಸ್ಟಾರ್ ಅನ್ನೋ ಬಿರುದು ಕೊಟ್ಟಿದೆ. ಈ ಕನ್ನಡತಿ ಹರ್ಷ ಕೇವಲ ಕನ್ನಡ ಮಾತ್ರವಲ್ಲ, ಎರಡು ತೆಲುಗು ಚಿತ್ರದಲ್ಲೂ ಬ್ಯುಸಿಯಾಗಿದ್ದಾರೆ.
ವಿಶೇಷ ಅಂದ್ರೆ, ಕೆಲ ದಿನಗಳ ಹಿಂದೆ ತೆಲುಗು ಟಿವಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಅಂಕಿತಾ ಅಮರ್, ಈಗ ಅಫಿಶಿಯಲೀ ಸ್ಯಾಂಡಲ್ವುಡ್ಗೆ ಪ್ರವೇಶ ಮಾಡಿದ್ದಾರೆ. ಆರ್ಜೆ ಮಯೂರ್ ರಾಘವೇಂದ್ರ ನಿರ್ದೇಶನ ಮಾಡ್ತಿರೋ ಅಬ ಜಬ ದಬ ಚಿತ್ರದ ಮೂಲಕ ಅಂಕಿತಾ ಅಮರ್ ನಾಯಕಿ ನಟಿಯಾಗಿದ್ದಾರೆ. ಈ ಚಿತ್ರದ ನಾಯಕ ನಟನಾಗಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಆಯ್ಕೆಯಾಗಿದ್ದಾರೆ.
ಇದು ಕೆಲ ದಿನಗಳ ಹಿಂದೆ ಅನೌನ್ಸ್ ಮಾಡಿರೋ ಚಿತ್ರಗಳಲ್ಲಿ ಈ ಮೂವರು ಲೀಡ್ ರೋಲ್ನಲ್ಲಿದ್ದಾರೆ. ಇವರಷ್ಟೇ ಅಲ್ಲ, ಕನ್ನಡತಿಯ ರಂಜನಿ ರಾಘವನ್ ಕೂಡ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಕನ್ನಡದ ಕಿರುತೆರೆಯ ನಾಯಕ- ನಾಯಕಿಗೆ ಡಿಮ್ಯಾಂಡ್ ಅಂತೂ ಇದೆ. ಅದಕ್ಕೆ ನಾವ್ ಹೇಳ್ತಿರೋದು, ಸ್ಯಾಂಡಲ್ವುಡ್ ಕಣ್ಣು ಕನ್ನಡ ಟಿವಿ ಲೋಕದ ಮೇಲೆ ಅಂತಾ.