ಕನ್ನಡ, ತೆಲುಗು ಸೇರಿ ಭಾರತದ ಎಲ್ಲ ಭಾಷೆಗಳೂ ರಾಷ್ಟ್ರಭಾಷೆಗಳೇ-ವೆಂಕಯ್ಯ ನಾಯ್ಡು ಘೋಷಣೆ

ಭಾಷೆ ವಿಚಾರ ಬಂದಾಗಲೆಲ್ಲ.. ಹಲವರು ಜನರ ವಾದ ಹಿಂದಿ ರಾಷ್ಟ್ರ ಭಾಷೆ ಅನ್ನೋದೇ ಆಗಿರುತ್ತೆ.. ಆದ್ರೆ, ಸಂವಿಧಾನದಲ್ಲಾಗಲೀ ಅಥವಾ ಅಧಿಕೃತವಾಗಿಯಾಗಲೀ ಎಲ್ಲೂ ಹಿಂದಿ ರಾಷ್ಟ್ರ ಭಾಷೆ ಅನ್ನೋದು ಇಲ್ಲ.. ಭಾರತದ ಪ್ರತಿ ಭಾಷೆಗಳೂ ರಾಷ್ಟ್ರಭಾಷೆಗಳೇ.. ಅದ್ರಲ್ಲೂ ನೋಟಿನ ಮೇಲೆ ಇರುವ ಎಲ್ಲ ಭಾಷೆಗಳೂ ಆಡಳಿತದ ಭಾಷೆಗಳೇ ಆಗಿವೆ. ಹೀಗಿದ್ದೂ.. ಹಲವರ ವಾದ ಮಾತ್ರ ಬದಲಾಗಿಲ್ಲ.

ಇದೇ ಹಿನ್ನೆಲೆಯಲ್ಲಿ ಇಂದು ಚಿತ್ರರಂಗದ ಗಣ್ಯರಿಗೆ ರಾಷ್ಟ್ರ ಪ್ರಶಸ್ತಿ ವಿತರಿಸಿದ ಬಳಿಕ ಮಾತನಾಡಿದ ಭಾರತದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮೊದಲು ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಎಲ್ಲಿರಗೂ ವಂದಿಸಿದ್ರು. ಬಳಿಕ ತಮ್ಮ ಮಾತನ್ನು ಮುಂದುವರೆಸಿದ ವೆಂಕಯ್ಯ ನಾಯ್ಡು, ನಾನು ನನ್ನ ಸಹೋದ್ಯೋಗಿಗಳಿಗೆ ಪದೇ ಪದೆ ಹೇಳುತ್ತಿರುತ್ತೇನೆ.. ಭಾರತದ ಎಲ್ಲ ಭಾಷೆಗಳೂ ರಾಷ್ಟ್ರಭಾಷೆಗಳೇ.. ಅದು ಕನ್ನಡ ಇರಬಹುದು, ಹಿಂದಿ ಇರಬಹುದು, ತಮಿಳು ಇರಬಹುದು, ಮರಾಠಿ ಇರಬಹುದು ಭಾರತೀಯರು ಮಾತನಾಡುವ ಎಲ್ಲ ಭಾಷೆಗಳೂ ರಾಷ್ಟ್ರ ಭಾಷೆಗಳೇ ಆಗಿವೆ.. ಇದರ ಹೆಮ್ಮ ನಮ್ಮೆಲ್ಲರಿಗೂ ಇರಬೇಕು ಎಂದು ಅವರು ಹೇಳಿದ್ರು.. ಅಷ್ಟೇ ಅಲ್ಲ ಇಂದು ಜಗತ್ತು ಹಳ್ಳಿಯಂತೆ ಆಗುತ್ತಿದೆ. ಹೀಗಾಗಿ, ನಿಮಗೆ ಎಷ್ಟು ಸಾಧ್ಯವೋ ಅಷ್ಟು ಭಾಷೆಗಳನ್ನು ಕಲಿಯಿರಿ.. ಆದ್ರೆ ಮನೆಯಲ್ಲಿ ಮಾತೃ ಭಾಷೆಯನ್ನೇ ಮಾತಾಡಿ.. ಹೊರಗೂ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ನಿಮ್ಮ ಮಾತೃ ಭಾಷೆಯನ್ನೇ ಮಾತಾಡಿ.. ನಮ್ಮ ಮಾತೃ ಭಾಷೆ ಬಗ್ಗೆ ನಮಗೆ ಹೆಮ್ಮೆ ಇರಬೇಕು.. ನಮ್ಮ ಮಾತೃ ಭಾಷೆ ನಮ್ಮ ಕಣ್ಣಿನ ಬೆಳಕಿದ್ದಂತೆ.. ವಿದೇಶಿ ಭಾಷೆ ನಮ್ಮ ಕನ್ನಡಕ ಇದ್ದಂತೆ.. ನಮ್ಮ ಕಣ್ಣು ಕಾಣುತ್ತಿದ್ದರೆ ಮಾತ್ರ.. ಕನ್ನಡಕ ಸಹಾಯ ಮಾಡುತ್ತೆ.. ಆದ್ರೆ.. ಕಣ್ಣೇ ಕಾಣದಿದ್ದರೆ ರೇಬಾನ್ ಹಾಕಿಕೊಂಡ್ರು.. ನಾಲಿಗೆ ಚಲಿಸಲ್ಲ ಎಂದು ಅವರು ಹೇಳಿದ್ರು..

ಇದನ್ನೂ ಓದಿ: ರಜಿನಿಕಾಂತ್​​ಗೆ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ; ಈ ವೇಳೆ ಕನ್ನಡಿಗ ಸ್ನೇಹಿತನ ನೆನಪಿಸಿಕೊಂಡ ತಲೈವಾ

ಇನ್ನು ಇದಕ್ಕೂ ಮುನ್ನ ಸೂಪರ್​ ಸ್ಟಾರ್ ರಜಿನಿಕಾಂತ್​ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಉಪರಾಷ್ಟ್ರ ಪತಿಗಳು ನೀಡಿ ಪುರಸ್ಕರಿಸಿದ್ರು. ಜೊತೆಗೆ ಉತ್ತಮ ನಟ, ನಟಿ, ಚಿತ್ರ ಮುಂತಾದ ಪ್ರಶಸ್ತಿಗಳನ್ನೂ ಅವರು ವಿತರಿಸಿದ್ರು.

News First Live Kannada

Leave a comment

Your email address will not be published. Required fields are marked *