
ದಿನೇಶ್ ಗುಂಡೂರಾವ್
ಸರ್ಕಾರ ಈ ಶತಮೂರ್ಖನಿಗೆ ಪಠ್ಯ ಪರಿಷ್ಕರಿಸುವ ಜವಾಬ್ದಾರಿ ನೀಡಿದೆ. ಇಂತಹ ವ್ಯಕ್ತಿ ಪಠ್ಯವನ್ನು ನಿರ್ಧರಿಸುವುದು ದುರಂತವಲ್ಲವೆ? ರೋಹಿತ್ ಚಕ್ರತೀರ್ಥ ಎಂಬ ಈ ವಿಕೃತ ಮನಸ್ಸಿನ ವ್ಯಕ್ತಿ 2017ರಲ್ಲಿ ನಾಡಗೀತೆಯನ್ನು ಅಪಹಾಸ್ಯ ಮಾಡಿ ಬರೆದಿದ್ದ. ನಮ್ಮ ಕನ್ನಡದ ಬಾವುಟವನ್ನು ಒಳ ಉಡುಪಿಗೆ ಹೋಲಿಸಿದ್ದ.
ಬೆಂಗಳೂರು: ರೋಹಿತ್ ಚಕ್ರತೀರ್ಥ ಎಂಬ ವಿಕೃತ ಮನಸ್ಸಿನ ವ್ಯಕ್ತಿ 2017ರಲ್ಲಿ ನಾಡಗೀತೆಯನ್ನು ಅಪಹಾಸ್ಯ ಮಾಡಿ ಬರೆದಿದ್ದ ಪದ್ಯವಿದು. ನಾಡಗೀತೆಗೆ ಅವಮಾನ ಮಾಡಿದ, ಕನ್ನಡ ಧ್ವಜವನ್ನು ಒಳ ಉಡುಪಿಗೆ ಹೋಲಿಸಿದ ರೋಹಿತ್ ಚಕ್ರತೀರ್ಥ ಎಂಬ ಮತಾಂಧ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ಎಂದು ಟ್ವಿಟರ್ನಲ್ಲಿ ಸರ್ಕಾರದ ವಿರುದ್ಧ ದಿನೇಶ್ ಗುಂಡೂರಾವ್ ಕಿಡಿ ಕಾಡಿದ್ದಾರೆ.
ಸರ್ಕಾರ ಈ ಶತಮೂರ್ಖನಿಗೆ ಪಠ್ಯ ಪರಿಷ್ಕರಿಸುವ ಜವಾಬ್ದಾರಿ ನೀಡಿದೆ. ಇಂತಹ ವ್ಯಕ್ತಿ ಪಠ್ಯವನ್ನು ನಿರ್ಧರಿಸುವುದು ದುರಂತವಲ್ಲವೆ? ರೋಹಿತ್ ಚಕ್ರತೀರ್ಥ ಎಂಬ ಈ ವಿಕೃತ ಮನಸ್ಸಿನ ವ್ಯಕ್ತಿ 2017ರಲ್ಲಿ ನಾಡಗೀತೆಯನ್ನು ಅಪಹಾಸ್ಯ ಮಾಡಿ ಬರೆದಿದ್ದ. ನಮ್ಮ ಕನ್ನಡದ ಬಾವುಟವನ್ನು ಒಳ ಉಡುಪಿಗೆ ಹೋಲಿಸಿದ್ದ. ನಾಡಗೀತೆಗೆ ಅಪಮಾನಿಸಿದ್ದ ಈ ಮತಾಂಧ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ. ಇಂಥವನನ್ನ ಅಧ್ಯಕ್ಷನನ್ನಾಗಿ ಮಾಡಿರುವುದು ನಾಚಿಕೆಗೇಡು. ಅಧ್ಯಯನ ಇಲ್ಲದ, ಅನುಭವ ಇಲ್ಲದ ರೋಹಿತ್ನಂಥವರು ವಿದ್ಯಾರ್ಥಿಗಳು ಏನ್ನು ಕಲಿಯಬೇಕು ಎಂದು ನಿರ್ಧರಿಸಬೇಕೆ? ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಲಿಕಾ ವಿಷಯವನ್ನು ಇಂತಹ ವ್ಯಕ್ತಿ ನಿರ್ಧರಿಸಲು ಹೊರಟಿರುವುದು ವಿಪರ್ಯಾಸ ಎಂದು ಆಕ್ರೋಶ ಹೊರ ಹಾಕಿದ್ದಾರೆ.
4
ಜೀವ ವಿರೋಧಿ ವ್ಯಕ್ತಿಯೊಬ್ಬ ಮುಗ್ಧ ವಿದ್ಯಾರ್ಥಿಗಳ ತಲೆಗೆ ತುಂಬುವುದು ಜೀವ ವಿರೋಧಿ ತತ್ವಗಳನ್ನೆ ಹೊರತು ಒಳ್ಳೆಯ ಅಂಶಗಳನಲ್ಲ.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಲಿಕಾ ವಿಷಯವನ್ನು ಜೀವನ ವಿರೋಧಿ ವ್ಯಕ್ತಿ ನಿರ್ಧರಿಸಲು ಹೊರಟಿರುವುದು ವಿಪರ್ಯಾಸ.
ನಾಡಿನ ಪ್ರಜ್ಞಾವಂತ ಸಮುದಾಯ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಿದೆ— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 23, 2022
ಕುವೆಂಪು ಅಥವಾ ಯಾರನ್ನೋ ಅವಮಾನಿಸಬೇಕೆಂಬ ಉದ್ದೇಶ ಪರಿಷ್ಕರಣಾ ಸಮಿತಿಗೆ ಇಲ್ಲ
ಹುಬ್ಬಳ್ಳಿ: ಕುವೆಂಪು ಅಥವಾ ಯಾರನ್ನೋ ಅವಮಾನಿಸಬೇಕೆಂಬ ಉದ್ದೇಶ ಪರಿಷ್ಕರಣಾ ಸಮಿತಿಗೆ ಇಲ್ಲ. ಒಳ್ಳೆಯ ವಿಚಾರಧಾರೆ ಹಾಕಬೇಕೆನ್ನೋದಿದೆ ಎಂದು ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಈ ವಿಚಾರವನ್ನು ವಿವಾದ ಮಾಡ್ತಿರೋರು ಕಮ್ಯುನಿಷ್ಟರು ಹಾಗೂ ಕಾಂಗ್ರೆಸ್ಸಿಗರು. ಮುಸ್ಲಿಂ, ಕ್ರಿಶ್ಚಿಯನ್ ವಿಚಾರಧಾರೆ ಇರೋರು ಇದನ್ನ ವಿರೋಧಿಸಿ ವಿವಾದ ಮಾಡ್ತಿದ್ದಾರೆ ಎಂದು ಮುತಾಲಿಕ್ ಆಕ್ರೋಶ ಹೊರ ಹಾಕಿದ್ದಾರೆ.