ಕನ್ನಡ ನಾಮಫಲಕ ಬದಲಾವಣೆಗೆ ಮುಂದಾದರೆ ಸಹಿಸಲು ಸಾಧ್ಯವಿಲ್ಲ-ಯು.ಟಿ. ಖಾದರ್

ಕನ್ನಡ ನಾಮಫಲಕ ಬದಲಾವಣೆಗೆ ಮುಂದಾದರೆ ಸಹಿಸಲು ಸಾಧ್ಯವಿಲ್ಲ-ಯು.ಟಿ. ಖಾದರ್

ಮಂಗಳೂರು: ಕೇರಳ ಗಡಿಭಾಗದ ಊರುಗಳ ನಾಮಫಲಕ ಮಲಯಾಳಂ ಭಾಷೆಗೆ ಬದಲಾಯಿಸಲು ಕೇರಳ ಸರ್ಕಾರ ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಯು.ಟಿ. ಖಾದರ್.. ಈ ರೀತಿಯ ಪ್ರಯತ್ನಗಳು ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಆದರೆ ಕನ್ನಡ ನಾಮಫಲಕ ಬದಲಾವಣೆಗೆ ಮುಂದಾದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಗಡಿನಾಡಲ್ಲಿ ಕನ್ನಡಕ್ಕೆ ಧಕ್ಕೆ ತರುವ ಕೆಲಸ ಕೇರಳ ಸರಕಾರ ಮಾಡಬಾರದು. ಕೇರಳ ಸರಕಾರ ಕನ್ನಡತನಕ್ಕೆ ಧಕ್ಕೆ ಮಾಡುವುದಿಲ್ಲ ಎಂಬ ವಿಶ್ವಾಸವಿದೆ. ಕರ್ನಾಟಕ -ಕೇರಳ ಗಡಿಭಾಗ ಸರ್ವೇಯಲ್ಲಿ ಮಾತ್ರ ಬೇರೆ ಬೇರೆ. ಗಡಿಪ್ರದೇಶಗಳು ಎರಡು ರಾಜ್ಯಗಳ ನಡುವಿನ ಕೊಂಡಿಗಳಂತೆ ಇವೆ. ಗಡಿನಾಡ ಪ್ರದೇಶದ ಜನರಿಗೆ ಯಾವುದೇ ಕಾರಣಕ್ಕೂ ಧಕ್ಕೆ ಮಾಡಬಾರದು. ನಾವು ಯಾವುದೇ ಕಾರಣಕ್ಕೂ ಅಂತ ಕೆಲಸವನ್ನ ಒಪ್ಪುವುದಿಲ್ಲ.

ಕೇರಳದ ಮಂಜೆಶ್ವರ ಶಾಸಕರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಗಡಿನಾಡ ಕನ್ನಡಿಗರಿಗೆ ಗೌರವ ಸಲ್ಲಿಸಿದ್ದರು. ಕನ್ನಡ ನಾಮಫಲಕ ಬದಲಿಸುವಂತಹ ಕೆಲಸಕ್ಕೆ ಅಲ್ಲಿಯ ಶಾಸಕರು ಕೂಡ ಒಪ್ಪುವುದಿಲ್ಲ. ಯಾವುದೇ ಊರಿನ ಹೆಸರು ಬದಲಾವಣೆ ಮಾಡುವುದು ಸರಿಯಲ್ಲ. ಗಡಿನಾಡ ಪ್ರದೇಶದ ಜನರು ಅತ್ಯಂತ ಸೌಹಾರ್ದತೆಯಿಂದ ಇದ್ದಾರೆ ಎಂದಿದ್ದಾರೆ.

The post ಕನ್ನಡ ನಾಮಫಲಕ ಬದಲಾವಣೆಗೆ ಮುಂದಾದರೆ ಸಹಿಸಲು ಸಾಧ್ಯವಿಲ್ಲ-ಯು.ಟಿ. ಖಾದರ್ appeared first on News First Kannada.

Source: newsfirstlive.com

Source link