ಕನ್ನಡ ಮಾತನಾಡೋಕೆ ಪ್ರಯತ್ನಿಸುತ್ತಿದ್ದೇನೆ, ದಯವಿಟ್ಟು ಅಡ್ಜಸ್ಟ್​ ಮಾಡಿಕೊಳ್ಳಿ: ರಾಜಮೌಳಿ | SS Rajamouli ask Karnataka Fans to Adjust his Kannada In Bengaluru


ಜ್ಯೂ. ಎನ್​ಟಿಆರ್ ಮತ್ತು ರಾಮ್ ಚರಣ್ ಮುಖ್ಯಭೂಮಿಕೆ ನಿಭಾಯಿಸಿರುವ ‘ಆರ್​ಆರ್​​ಆರ್’ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಆರ್​​ಆರ್​ಆರ್​’ ಚಿತ್ರದಲ್ಲಿ ನಾಯಕಿಯಾಗಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಅವರು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ಮತ್ತು ಪೋಸ್ಟರ್ಗಳು ಧೂಳೆಬ್ಬಿಸಿವೆ. ‘ದೋಸ್ತಿ’ ಮತ್ತು ‘ಹಳ್ಳಿ ನಾಟು’ ಹಾಡುಗಳು ಭರ್ಜರಿ ಸೌಂಡು ಮಾಡಿದ ಬಳಿಕ ‘ಜನನಿ..’ ಗೀತೆಯನ್ನು ಜನರ ಮುಂದೆ ಇಡಲಾಗಿದೆ. ‘ಆರ್​ಆರ್​ಆರ್​’ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಸ್ಟಾರ್​ ಕಲಾವಿದರ ಸಮಾಗಮ ಸಿನಿಮಾದಲ್ಲಿದೆ. ಈಗಾಗಲೇ ರಿಲೀಸ್​ ಆದ ಸಿನಿಮಾದ ಟೀಸರ್​ ಹಾಗೂ ಪೋಸ್ಟರ್​​ಗಳು ದೊಡ್ಡ ಮಟ್ಟದ ಹೈಪ್​ ಸೃಷ್ಟಿ ಮಾಡಿದೆ. ಈ ಸಿನಿಮಾದ ‘ಜನನಿ’ ಸಾಂಗ್​ ರಿಲೀಸ್​ ಮಾಡೋಕೆ ಚಿತ್ರದ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಸಾಂಗ್​ ರಿಲೀಸ್​ಗೂ ಮೊದಲು ರಾಜಮೌಳಿ ಅವರು ಮಾತನಾಡಿದರು. ಅಷ್ಟೇ ಅಲ್ಲ ಎರಡು ವಿಚಾರದಲ್ಲಿ ಅವರು ಕ್ಷಮೆ ಕೇಳಿ ಮಾತು ಆರಂಭಿಸಿದರು.

ಇದನ್ನೂ ಓದಿ: ಆರ್​ಆರ್​ಆರ್​ ಚಿತ್ರದ ಪ್ರಮೋಷನ್​ಗಾಗಿ ದೊಡ್ಡ ತ್ಯಾಗಕ್ಕೆ ಸಿದ್ಧರಾದ ಜ್ಯೂ.ಎನ್​ಟಿಆರ್​

TV9 Kannada


Leave a Reply

Your email address will not be published. Required fields are marked *