ಕನ್ನಡ ರಾಜ್ಯೋತ್ಸವ: ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ – Kannada Rajyotsava: Heavy police deployment across Chamarapet’s Eidgah Maidan to prevent any untoward incidentರಜಾ ದಿನವಾಗಿದ್ದರಿಂದ ಮೈದಾನಕ್ಕೆ ಆಡಲು ಬಂದಿದ್ದ ಮಕ್ಕಳು ಮತ್ತು ಯುವಕರು ಮಾತ್ರ ತೀವ್ರ ನಿರಾಶರಾಗಿ ಮೈದಾನದಿಂದ ಹೊರನಡೆಯಬೇಕಾಯಿತು.

TV9kannada Web Team


| Edited By: Arun Belly

Nov 01, 2022 | 10:56 AM
ಬೆಂಗಳೂರು: ರಾಜ್ಯದೆಲ್ಲೆಡೆ ಹೆಮ್ಮೆ, ಅಭಿಮಾನ ಮತ್ತು ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು (Kannada Rajyotsava:) ಆಚರಿಸಲಾಗುತ್ತ್ತಿದೆ. ಆದರೆ, ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ (Chamarajapet) ಈದ್ಗಾ ಮೈದಾನದಲ್ಲಿ ರಾಜ್ಯೋತ್ಸವ ಆಚರಿಸಲು ಸರ್ಕಾರ ಅನುಮತಿ ನೀಡಿಲ್ಲ. ಯಾವುದೇ ಸಂಘಟನೆ ಸರ್ಕಾರದ ಆದೇಶ ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿ ಅಹಿತಕರ ಸನ್ನಿವೇಶ ಸೃಷ್ಟಿಸಬಾರದೆನ್ನುವ ಕಾರಣಕ್ಕೆ ಮೈದಾನದ ಸುತ್ತ ಪೊಲೀಸ್ (ಕೆ ಎಸ್ ಆರ್ ಪಿ) ಬಂದೋಬಸ್ತ್ ನಿಯೋಜಿಸಲಾಗಿದೆ (police deployment). ಆದರೆ ರಜಾ ದಿನವಾಗಿದ್ದರಿಂದ ಮೈದಾನಕ್ಕೆ ಆಡಲು ಬಂದಿದ್ದ ಮಕ್ಕಳು ಮತ್ತು ಯುವಕರು ಮಾತ್ರ ತೀವ್ರ ನಿರಾಶರಾಗಿ ಅಲ್ಲಿಂದ ಹೊರನಡೆಯಬೇಕಾಯಿತು.

TV9 Kannada


Leave a Reply

Your email address will not be published.