ಬಿ.ಎಂ ಗಿರಿರಾಜ್​ ನಿರ್ದೇಶನದ ‘ಕನ್ನಡಿಗ’ ಸಿನಿಮಾದ ಸ್ಪೆಷಲ್​ ಟೀಸರ್​ ಇಂದು ಬಿಡುಗಡೆಯಾಗಿದೆ. ಕ್ರೇಜಿ ಸ್ಟಾರ್​ ರವಿಚಂದ್ರನ್​ 60ನೇ ಹುಟ್ಟುಹಬ್ಬದ ಪ್ರಯುಕ್ತ, ‘ಕನ್ನಡಿಗ’ನ ಬರ್ತ್​ಡೇ ಟೀಸರ್​ ಇದಾಗಿದೆ. ‘ಕನ್ನಡಿಗ’ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟ ರವಿಚಂದ್ರನ್​ ನಟಿಸುತ್ತಿದ್ದಾರೆ ಅಂತ ಹೇಳಲಾಗ್ತಿದ್ದು, ಇದರಲ್ಲಿ ಒಂದಾದ ಲಿಪಿಕಾರ ಗುಣಭದ್ರನ ಪಾತ್ರವನ್ನ ಈ ಟೀಸರ್​ ಮೂಲಕ ತೋರಿಸಲಾಗಿದೆ.

ಕೊರೊನಾ ಎರಡನೇ ಅಲೆಯ ಕಾರಣ ರಾಜ್ಯದಲ್ಲಿ ಲಾಕ್​ಡೌನ್​ ಹೇರಲಾಗಿದ್ದು, ಸತತ ಎರಡನೇ ವರ್ಷ ಕ್ರೇಜಿ ಸ್ಟಾರ್​ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸುವ ಅವಕಾಶ ತಪ್ಪಿ ಹೋಗಿದೆ. ಇದಕ್ಕಾಗಿಯೇ ವಿಶೇಷ ಟೀಸರ್​ ರಿಲೀಸ್​ ಮಾಡಿರುವ ‘ಕನ್ನಡಿಗ’ ತಂಡ, ಲಿಪಿಕಾರ ಗುಣಭದ್ರನ ಬಗ್ಗೆ ಸಣ್ಣ ಪರಿಚಯ ನೀಡಿದ್ದಾರೆ.

‘ಕಾವೇರಿಯಿಂದ ಗೋದಾವರಿಯವರೆಗೂ ಕರುನಾಡ ಹಿರಿಮೆಯನ್ನ ಬೆಳಗಿಸಿದ ಕನ್ನಡಿಗರು ಹಲವರು. ಅವರೆಲ್ಲರ ಅವಿರತ ಹೋರಾಟ, ಶ್ರಮ, ತ್ಯಾಗ ಬಲಿದಾನಗಳನ್ನ ನಾವು ಮೆರತಿದ್ದೇವೆ. ಇದು ಅಂತಹದ್ದೇ ಒಬ್ಬ ಲಿಪಿಕಾರನ ಕಥೆ’

ಕನ್ನಡಿಗ ಟೀಂ

ಬಿ.ಎಂ ಗಿರಿರಾಜ್​​ ಆ್ಯಕ್ಷನ್​ ಕಟ್​ ಹೇಳ್ತಿರುವ ‘ಕನ್ನಡಿಗ’ನ ಕಥೆಗೆ ಎನ್​.ಎಸ್​ ರಾಜ್​ಕುಮಾರ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಕ್ರೇಜಿ ಸ್ಟಾರ್​ಗೆ ನಟಿ ಪಾವನಾ ಗೌಡ ಜೋಡಿಯಾಗಿ ನಟಿಸಿದ್ದಾರೆ.

The post ಕನ್ನಡ ಲಿಪಿಕಾರನಾಗಿ ಕ್ರೇಜಿ ಸ್ಟಾರ್​; 60ನೇ ಬರ್ತ್​ಡೇಗೆ ರಿಲೀಸ್​ ಆಯ್ತು ‘ಕನ್ನಡಿಗ’ ಟೀಸರ್​ appeared first on News First Kannada.

Source: newsfirstlive.com

Source link