ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಾಯಕ ನಟನಾಗಿ ನಟಿಸಿದ್ದ ಅಪ್ಪು ಇಂದ ಯುವರತ್ನ ವರೆಗೂ 29 ಸಿನಿಮಾ ರಿಲೀಸ್ ಆಗಿದೆ. ಈ 29 ಸಿನಿಮಾಗಳು ಬೇರೆ ಯಾವ ಸಿನಿಮಾಗಳೂ ಮಾಡದಂತಹ ದಾಖಲೆಗಳನ್ನ ಮಾಡಿದೆ. ಅದು ಅಪ್ಪುವಿನಲ್ಲಿದ್ದ ನಟನೆಯ ಕಲೆ, ಹಾಗು ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದ ಸಿನಿಮಾಗಳ ಕಥೆ. ಹಾಗಾದ್ರೆ 29 ಸಿನಿಮಾಗಳಲ್ಲಿ ಯಾವೆಲ್ಲ ದಾಖಲೆ ಬರೆದಿದೆ ಗೊತ್ತಾ?
ಇಂಥಾ ಅದೆಷ್ಟೋ ಅಪ್ಪು ಡೈಲಾಗ್ಗಳು ಇಂದಿಗೂ ಅಚ್ಚಳಿಯದೆ ಉಳಿದುಕೊಂಡಿದೆ. ಈ ಡೈಲಾಗ್ ಅನ್ನ ಕೇಳ್ತಾಯಿದ್ದರೆ ಇಲ್ಲೇ ಎಲ್ಲೋ ಅಪ್ಪು ಡೈಲಾಗ್ ಹೊಡೆದುಕೊಂಡು ಶೂಟಿಂಗ್ನಲ್ಲಿ ಬ್ಯೂಸಿಯಾಗಿದ್ದಾರೆ ಅಂತಾ ಅನ್ನಿಸುತ್ತಿದೆ. ಕೇವಲ ಡೈಲಾಗ್ನಿಂದ ಮಾತ್ರವಲ್ಲ,, ಅವರ ಮ್ಯಾನರಿಸಮ್, ಡ್ಯಾನ್ಸ್, ಫೈಟಿಂಗ್ ಎಲ್ಲವು ಅವರನ್ನ ಇಂದಿಗು ಮರೆಯದಂತೆ ಕನ್ನಡಿಗರ ಮನದಲ್ಲಿ ಉಳಿದುಕೊಂಡಿದೆ. ಅಪ್ಪು ಒಮ್ಮೆ ನಟನೆಗೆ ನಿಂತು ಬಿಟ್ಟರೆ ಎಲ್ಲಿಯೂ ಬೇಸರ ತರಿಸೋದೆ ಇಲ್ಲಾ ಯಾಕಂದ್ರೆ ಅವರ ನಟನೆಯೇ ಹಾಗೆ.
ಹುಟ್ಟಿದ 6 ತಿಂಗಳಿಗೆ ಸಿನಿಮಾದಲ್ಲಿ ನಟನೆ ಮಾಡಿದ್ದವರು ಅಪ್ಪು. ಅಂಬೆಗಾಲನ್ನ ಇಡೋದಕ್ಕಿಂತ ಮುಂಚೆಯೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟವರು ಅವರು.. ಹೀಗೆ ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಅಪ್ಪು ಕೆಲ ಕಾಲ ಸಿನಿಮಾ ರಂಗದಲ್ಲಿ ಬಾಲ ನಟನಾಗಿ ಗುರುತಿಸಿಕೊಂಡಿದ್ದರು. ಆದ್ರೆ ಬೆಳೆದು ದೊಡ್ಡವರಾದ ಮೇಲೆ ಸುಮಾರು 13 ವರ್ಷಗಳ ಕಾಲ ಸಿನಿಮಾದಿಂದಲೇ ದೂರ ಉಳಿದುಕೊಂಡಿದ್ದರು. ಆದ್ರೆ ಅಣ್ಣಾವ್ರ ಅಪೇಕ್ಷೆಯಂತೆ ಪುನೀತ್ ರಾಜ್ಕುಮಾರ್ ಅವರು ಮತ್ತೆ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು.
ಹೌದು… ನೋಡೋದಕ್ಕೆ ಕಪ್ಪಾಗಿದ್ದ ಅಪ್ಪು ಯಾವುದೆ ಕಾರಣಕ್ಕು ಸಿನಿಮಾ ರಂಗದಲ್ಲಿ ಹೆಸರು ಮಾಡೋಲ್ಲಾ ಅಂದುಕೊಂಡಿದ್ದವರು ಆ ಒಂದು ಮಾಸ್ ಎಂಟ್ರಿಯಿಂದಲೇ ತಾನು ಏನು ಅನ್ನೋದನ್ನ ನಿರೂಪಿಸಿಕೊಂಡಿದ್ದರು.. ಅಲ್ಲಿಂದ ಅವರ ನಾಯಕ ನಾಟನಾಗಿ ಕೆರಿಯರ್ ಆರಂಭಿಸಿದ್ದರು.. ಅಪ್ಪು ಸಿನಿಮಾದಿಂದ ಶುರು ಆಗಿದ್ದ ಅದೃಷ್ಟ ಪರೀಕ್ಷೆ ಎಂದಿಗೂ ಹಿಂದೆ ತಿರುಗಿ ನೋಡುವಂತೆ ಮಾಡಿರಲಿಲ್ಲ.
29 ಸಿನಿಮಾಗಳನ್ನ ಅಭಿನಯಸಿದ್ದ ಪವರ್ ಸ್ಟಾರ್
ಹುಟ್ಟಿದಾಗಿನಿಂದಲು 46 ಸಿನಿಮಾಗಳಲ್ಲಿ ಅಭಿನಯಿಸಿರೋ ಅಪ್ಪು, ನಾಯಕ ನಟನಾಗಿ ಸುಮಾರು 29 ಸಿನಿಮಾಗಳಲ್ಲಿ ನಟಿಸಿದ್ದಾರೆ. 1989 ರಲ್ಲಿ ಪರಶುರಾಮ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಅವರು, ಬಳಿಕ ಅಂದ್ರೆ 13 ವರ್ಷಗಳ ನಂತರ 2002 ರಲ್ಲಿ ಅಪ್ಪು ಸಿನಿಮಾದಿಂದ ಮತ್ತೆ ರೀ ಎಂಟ್ರಿ ಕೊಟ್ಟಿದ್ದರು. ಅಪ್ಪು ಸಿನಿಮಾದಿಂದ ಎಂಟ್ರಿ ಕೊಟ್ಟ ಅವರು ಬರೋಬ್ಬರಿ 29 ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು.
ಅಪ್ಪು ಸಿನಿಮಾಗಳು ಬಹುತೇಕ ಯಶಸ್ಸು ಕಂಡಿತ್ತು
ಹೌದು.. 2002 ರಲ್ಲಿ ತೆರೆ ಕಂಡಿದ್ದ ಅಪ್ಪು ಸಿನಿಮಾ ಬರೋಬ್ಬರಿ 100 ದಿನಗಳ ಕಾಲ ಭರ್ಜರಿ ಪ್ರದರ್ಶನ ಕಂಡಿತ್ತು. ಬಳಿಕ ಅಭಿನಯಿಸಿದ್ದ, ಅಭಿ. ವೀರ ಕನ್ನಡಿಗ, ಮೌರ್ಯ, ಆಕಾಶ್, ನಮ್ಮ ಬಸವ, ಅಜಯ್, ಅರಸು, ಮಿಲನ, ಬಿಂದಾಸ್, ವಂಶಿ, ರಾಜ್ ದಿ ಶೋಮ್ಯಾನ್, ರಾಮ್, ಪೃಥ್ವಿ, ಮೈತ್ರಿ, ರಣ ವಿಕ್ರಮ, ಚಕ್ರವ್ಯೂಹ, ದೊಡ್ಮನೆ ಹುಡುಗ, ರಾಜಕುಮಾರಮ ಅಂಜನಿ ಪುತ್ರ, ನಟ ಸಾರ್ವಭೌಮ, ಯುವರತ್ನ.. ಹೀಗೆ 29 ಸಿನಿಮಾಗಳನ್ನ ನಾಯಕ ನಟನಾಗಿ ಅಭಿನಯಿಸಿದ್ದಾರೆ.
ಶೇ.95 ರಷ್ಟು ಸಿನಿಮಾಗಳು ಯಶಸ್ವಿ ಪ್ರದರ್ಶನ
ಭಾರತೀಯ ಸಿನಿಮಾ ರಂಗದಲ್ಲಿ ಟಾಲಿವುಡ್, ಮಾಲಿವುಡ್, ಸ್ಯಾಂಡಲ್ವುಡ್, ಕಾಲಿವುಡ್, ಬಾಲಿವುಡ್ ಹೀಗೆ ಒಂದೊಂದು ಭಾಷೆ ಸಿನಿಮಾಗಳಿಗೆ ಹೋಲಿಕೆ ಮಾಡಿ ನೋಡಿದಾಗ ಯಾವೊಬ್ಬ ನಟನ ಚಿತ್ರಗಳು ಶೇಕಡ 90 ರಷ್ಟು ಯಶಸ್ಸನ್ನ ಕಂಡಿಲ್ಲ. ಆದ್ರೆ ಅಪ್ಪು ಅಭಿನಯಿಸಿದ ಅಷ್ಟು ಸಿನಿಮಾಗಳ ಪೈಕಿ ಶೇಕಡ 95 ರಷ್ಟು ಯಶಸ್ಸನ್ನ ಕಂಡಿದೆ.. ಇವತ್ತು ಅನೇಕ ಮೇರು ನಟರಿದ್ದಾರೆ. ಅವರ ನಟಿಸಿರೋ ಸಿನಿಮಾಗಳಿಗಿಂತ ಅಪ್ಪು ಸಿನಿಮಾಗಳು ಹೆಚ್ಚು ಯಶಸ್ಸು ಕಂಡಿದೆ ಎಂದು ಹೇಳಲಾಗುತ್ತಿದೆ.
29 ಚಿತ್ರದಲ್ಲಿ 18 ಕ್ಕೂ ಹೆಚ್ಚು ಚಿತ್ರ ಶತದಿನೋತ್ಸವ
ಅಪ್ಪು ಅಭಿನಯದ ಸಿನಿಮಾ ಅಂದ್ರೆ ಅಲ್ಲೊಂದು ಸಂದೇಶವಿರುತ್ತೇ, ಫ್ಯಾಮಿಲಿ ಕೂತು ನೋಡುವಂತಹದ್ದಾಗಿರುತ್ತೆ. ಅದಕ್ಕಾಗಿಯೆ ಅಭಿಮಾನಿನಿಗಳು ಅಪ್ಪು ಸಿನಿಮಾ ಅಂದ್ರೆ ಹೆಚ್ಚು ಇಷ್ಟ ಪಡುತ್ತಾರೆ. ಹಾಗೇಯೆ ಅಪ್ಪು ಕುಡ ಸಿನಿಮಾ ಕಥೆಗಳನ್ನ ಕೇಳಿ ನಂತರ ಇಷ್ಟ ಆದ್ರೆ ಮಾತ್ರ ಅವರು ನಟಿಸೋಕೆ ಒಪ್ಪಿಕೊಳ್ಳುತ್ತಿದ್ದರು. ಇಲ್ಲವಾದರೆ ಅಷ್ಟೇ ನಯವಾಗಿ ತಿರಸ್ಕರಿಸುತ್ತಿದ್ದರು. ಅದಕ್ಕಾಗಿಯೇ ಇಂದಿಗೂ ಅಪ್ಪು ಅಭಿನಯಿಸಿರೋ 29 ಚಿತ್ರಗಳ ಪೈಕಿ 18 ಕ್ಕೂ ಹೆಚ್ಚು ಸಿನಿಮಾಗಳು ಚಿತ್ರಮಂದಿರಗಳಲ್ಲಿ ನೂರಕ್ಕೂ ಹೆಚ್ಚು ದಿನ ಪ್ರದರ್ಶನ ಕಂಡಿದೆ. ಆ ಮೂಲಕ 18 ಸಿನಿಮಾಗಳು ಚಿತ್ರಮಂದಿರಗಳಲ್ಲೇ ಶತದಿನೋತ್ಸವವನ್ನ ಆಚರಿಸಲಾಗಿದೆ.
ಇನ್ನು ಪವರ್ ಸ್ಟಾರ್ ಆಯ್ಕೆ ಮಾಡಿಕೊಳ್ಳುತ್ತಿದ್ದ ಸಿನಿಮಾಗಳು ಹೆಚ್ಚು ಕೌಂಟುಂಬಿಕ ಆಧಾರಿತವಾಗಿರುತ್ತದೆ. ಮನೆ ಮಂದಿಯೆಲ್ಲಾ ಅಂದ್ರೆ ಕುಟುಂಬ ಸಮೇತರವಾಗಿ ಸಿನಿಮಾ ಮಂದಿರಗಳಿಗೆ ತೆರಳಿ ಕೂತು ನೋಡುವಂತಹ ಕಥೆಗಳನ್ನ ಅವರು ಆರಿಸಿಕೊಳ್ಳುತ್ತಿದ್ದರು. ಅದೇ ರೀತಿ ಅಭಿನಯಿಸುತ್ತಿದ್ದರು. ಅವರು ಮಾಡಿರೋ ಸಿನಿಮಾಗಳ ಪೈಕಿ ಅತಿ ಹೆಚ್ಚು ಖ್ಯಾತಿ ಪಡೆದ, ಅತಿ ಹೆಚ್ಚು ಯಶಸ್ಸು ಕಂಡಿದ್ದು ಮಿಲನ ಚಿತ್ರ.. ಆ ಚಿತ್ರದಲ್ಲಿ ಒಂದು ಸಂದೇಶವಿತ್ತು, ಆ ಸಿನಿಮಾವನ್ನ ನೋಡಿದ ಮೇಲೆ ಎಷ್ಟೋ ಜನ ನಾವು ಹಾಗೆಯೇ ಬದುಕಬೇಕು ಅಂತಾ ತಮ್ಮನ್ನ ತಾವು ತಿದ್ದಿ ತೀಡಿಕೊಂಡು ಬದುಕಿನ ಬಂಡಿ ಮುನ್ನಡೆಸಿದ್ದರು. ಆ ಸಿನಿಮಾ ಕೂಡ ಹಾಗೆ ಇತ್ತು ಬಿಡಿ.
ಈ ಸಿನಿಮಾದಲ್ಲಿ ಅಪ್ಪು ನಟನೆ ಬಗ್ಗೆ ಹೇಳೋದೆ ಬೇಡ.. ಅವರ ಆ ಅಭಿನಯ, ಆ ಫೈಟಿಂಗ್, ಡ್ಯಾನ್ಸ್ ವಾವ್ ಗ್ರೇಟ್ ಎಫರ್ಟ್ ಅಂದ್ರು ತಪ್ಪಾಗೋದಿಲ್ಲ. ನಮಗೆಲ್ಲಾ ಗೊತ್ತಿರೋ ಹಾಗೆ ಇದೊಂದು ಒಳ್ಳೆಯ ಸಿನಿಮಾ, ಜೊತೆಗೆ ಸ್ಯಾಂಡಲ್ವುಡ್ನಲ್ಲಿ ದಾಖಲೆ ಬರೆದ ಸಿನಿಮಾ.
600 ದಿನ ಪ್ರದರ್ಶನ ಕಂಡ ಏಕೈಕ ಚಿತ್ರವಾಗಿ ದಾಖಲೆ
2007 ರಲ್ಲಿ ಬಿಡುಗಡೆಗೊಂಡಿದ್ದ ಮಿಲನ ಸಿನಿಮಾ ಅಂದಿನ ದಿನದ ದಾಖಲೆ ಸಿನಿಮಾ ಆಗಿತ್ತು. ರಾಜ್ಯಾದ್ಯಾಂತ ಮಿಲನ ಸಿನಿಮಾ ಬಿಡುಗಡೆಗೊಂಡಿತ್ತು. ಅದ್ರಂತೆ ಮಲ್ಟಿಪ್ಲೆಕ್ಸ್ಗಳಲ್ಲಿಯೂ ಬಿಡುಗಡೆಗೊಂಡಿತ್ತು. ಸಾಮಾನ್ಯವಾಗಿ ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಗೊಂಡ ಸಿನಿಮಾಗಳು ಹೆಚ್ಚೆಂದ್ರೆ 30 ರಿಂದ 50 ದಿನ ಓಡಬಹುದು. ಆದ್ರೆ ಮಿಲನ ಚಿತ್ರ ಚಿತ್ರ ಮಲ್ಟಿಪ್ಲೆಕ್ಸ್ ನಲ್ಲಿ 600 ದಿನ ಪ್ರದರ್ಶನ ಕಂಡ ಏಕೈಕ ಚಿತ್ರವಾಗಿತ್ತು. ಆ ದಾಖಲೆಯನ್ನ ಹಿಂದೆ ಯಾರು ಬರೆದಿರಲಿಲ್ಲ. ಮುಂದೆ ಯಾರು ಬರೆಯೋದಕ್ಕೆ ಸಾಧ್ಯವೂ ಇಲ್ಲ..
ಹೀಗೆ ಒಂದೊಂದು ಸಿನಿಮಾಗಳಿಂದ ಒಂದೊಂದು ಸಂದೇಶವನ್ನ ನೀಡುತ್ತ, ಅದೇ ರೀತಿ ಸಿನಿಮಾಗಳನ್ನ ಆಯ್ಕೆ ಮಾಡಿಕೊಂಡು ನಟನೆ ಮಾಡುತ್ತಿದ್ದ ಅಪ್ಪು ಇಂದು ನಮ್ಮೊಂದಿಗೆ ಇಲ್ಲಾ ಅನ್ನೋದೆ ಬೇಸರದ ಸಂಗತಿ.. ಆದ್ರೆ ಅಪ್ಪು ಎಂದೆಂದಿಗೂ ಅಮರ..
ಮಿಲನ ಸಿನಿಮಾ ಬರೆದ ದಾಖಲೆ, ಅಪ್ಪು ಅಭಿನಯಿಸಿದ್ದ 18 ಕ್ಕೂ ಹೆಚ್ಚು ಸಿನಿಮಾಗಳು ಶತದಿನೋತ್ಸವ, ಶೇ 95 ರಷ್ಟು ಯಶಸ್ಸು.. ಇದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಆಲ್ ಟೈಮ್ ರೆಕಾರ್ಡ್.. ವಿ ರಿಯಲ್ಲಿ ಮಿಸ್ ಯೂ ಅಪ್ಪು..