ಕನ್ನಡ ಸೀರಿಯಲ್ ಲೋಕದಲ್ಲಿ ಲವ್ ಕಲರವ; ಮದ್ವೆಗೆ ಸಿದ್ಧವಾಗ್ತಿವೆ 4 ಜೋಡಿಗಳು


ಕಿರುತೆರೆಯರ ಲೋಕದ ನಟ ನಟಿಯರು ಅತಿ ಬೇಗನೆ ವೀಕ್ಷಕರಿಗೆ ಚಿರಪರಿಚಿತರಾಗುತ್ತಾರೆ. ತಮ್ಮ ತಮ್ಮ ಪಾತ್ರದ ಮೂಲಕ ಎಲ್ಲರ ಮನೆ ಮಾತಾಗುತ್ತಾರೆ.ಆದಷ್ಟು ಬೇಗನೆ ತಮ್ಮದೆ ಆದ ಅಭಿಮಾನಿ ಬಳಗವನ್ನು ತಮ್ಮ ನಟನೆಯ ಮುಖಾಂತರ ಸೃಷ್ಟಿಸಿಕೊಳ್ಳುತ್ತಾರೆ.

ಸದ್ಯ ವಿಷ್ಯ ಏನಪ್ಪ ಅಂದ್ರೆ, ಇತ್ತೀಚೆಗೆ ಕಿರುತೆರೆಯ ಲೋಕದ ನಟ ನಟಿಯರು ತಮ್ಮ ಪ್ರೀತಿಯ ಗುಟ್ಟನ್ನು ರಟ್ಟು ಮಾಡಿಕೊಳ್ಳುತ್ತಿದ್ದಾರೆ. ಅಂದ್ರೆ ಅವರ ಪ್ರೀತಿಯ ಗುಟ್ಟನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆ ಪ್ರಣಯ ಪಕ್ಷಿಗಳು ಯಾರು ಅಂತ ಕೇಳ್ತಿದ್ದೀರಾ? ನಾವ್ ಹೆಳ್ತೀವಿ ಓದಿ..

ಸಾಗರ್ ಪುರಾಣಿಕ್, ದೀಪಾ ಜಗದೀಶ್

ನಟಿ ದೀಪಾ ಜಗದೀಶ್ ಇಗಾಗಲೆ ನಮ್ಗೆಲ್ಲ ಚಿರಪರಿಚಿತರು. ಕಾವ್ಯಂಜಲಿ ಧಾರಾವಾಹಿಯಲ್ಲಿ ಅಂಜಲಿ ಪಾತ್ರ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಸದ್ಯ ದೀಪಾ ಜಗದೀಶ್ ಇತ್ತೀಚೆಗೆ ತಮ್ಮ ಪ್ರೀತಿಯ ವಿಷಯವನ್ನು ತಮ್ಮ ಇನ್ಸ್ಟಾಗ್ರಾಂಮ್ ಮೂಲಕ ಹಂಚಿಕೊಂಡಿದ್ದಾರೆ. ದೀಪಾ ಅವ್ರು ತಮ್ಮ ಸ್ನೇಹಿತನಾದ ನಿರ್ದೆಶಕ ಸಾಗರ್ ಪುರಾಣಿಕ್ ಅವರನ್ನು ಪ್ರೀತಿಸಿ ಮದುವೆ ಆಗಲು ಸಜ್ಜಾಗಿದ್ದಾರೆ.

ರಶ್ಮಿ ಪ್ರಭಾಕರ್, ನಿಖಿಲ್ ಭಾರ್ಗವ್

ಲಕ್ಷ್ಮೀಬಾರಮ್ಮ ಖ್ಯಾತಿಯ ನಟಿ ರಶ್ಮಿ ಪ್ರಭಾಕರ್ ಅವರು ಕೆಲವು ತಿಂಗಳ ಹಿಂದೆ ತಮ್ಮ ಸ್ನೇಹಿತರಾದ ನಿಖಿಲ್ ಭಾರ್ಗವ್ ಅವರೊಟ್ಟಿಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ತಮ್ಮಿಬ್ಬರ ಪ್ರೇಮ ಕತೆಯನ್ನು ಒಂದು ಸುಂದರವಾದ ಫೇರಿಟೈಲ್ ಕತೆಯನ್ನಾಗಿಸಿ ಎಳೆ ಎಳೆಯಾಗಿ ತಮ್ಮ ಇನ್ಸ್ಟಗ್ರಾಂಮ್ ಖಾತೆಯಲ್ಲಿ ಫೋಟೊಸ್ ಹಾಕುವ ಮೂಲಕ ಹಂಚಿಕೊಂಡರು. ಸದ್ಯದಲ್ಲೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ನಟಿ ರಶ್ಮಿ ಪ್ರಭಾಕರ್.

ಗಗನ್ ಚಿನ್ನಪ್ಪ, ಪ್ರಾರ್ಥನಾ

ಇನ್ನೂ, ನಟ ಗಗನ್ ಚಿನ್ನಪ್ಪ ಅವರು ಮಂಗಳ ಗೌರಿ ಧಾರಾವಾಹಿ ಮೂಲಕ ಹೆಸರು ಮಾಡಿದವರು. ಖಡಕ್ ಪೋಲಿಸ್ ಗೆಟಪ್​ನಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು.ಇವರು ಸಹ ಇತ್ತೀಚಿನ ದಿನಗಳಲ್ಲಿ ಅವರ ಪ್ರೀತಿಯ ಗುಟ್ಟನ್ನು ತಮ್ಮ ಇನ್ಸ್ಟಗ್ರಾಂಮ್ ಮೂಲಕ ಬಹಿರಂಗ ಪಡಿಸಿಕೊಂಡಿದ್ದಾರೆ.ಅವರ ಪ್ರೇಯಸಿಯಾದ ಪ್ರಾರ್ಥನಾ ಅವರನ್ನು ಮದುವೆಯಾಗಲ್ಲಿದ್ದಾರೆ. ಪಾರ್ಥನಾ ಅವರು ಕೂಡ ಒಬ್ಬ ಒಳ್ಳೆಯ ಸಕ್ಸಸ್ ಫುಲ್ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ.

ನಿನಾದ್ ಹರಿತ್ಸ, ರಮ್ಯಾ

ಇನ್ನೂ, ನಟ ನಿನಾದ್ ಹರಿತ್ಸ, ನಾಗಿಣಿ 2 ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ. ಇವರು ಸಹ ಮೊನ್ನೆಯಷ್ಟೆ ತಮ್ಮ ಪ್ರೇಯಸಿಯಾದ ರಮ್ಯಾ  ಅವರೊಟ್ಟಿಗೆ ಎಲ್ಲ ಗರು-ಹಿರಿಯರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಎಂಗೇಜ್ಮೆಂಟ್ ಫೋಟಸ್​ಗಳನ್ನು ತಮ್ಮ ಇನ್ಸ್ಟಗ್ರಾಂಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ಕಿರುತೆರೆಯ ಲೋಕದ ನಟ ನಟಿಯರು ತಮ್ಮ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಅವರ ಈ ಹೊಸ ಪಯಣಕ್ಕೆ ನಮ್ಮ ಕಡೆಯಿಂದ ಬೆಸ್ಟ್ ವಿಶಸ್.

The post ಕನ್ನಡ ಸೀರಿಯಲ್ ಲೋಕದಲ್ಲಿ ಲವ್ ಕಲರವ; ಮದ್ವೆಗೆ ಸಿದ್ಧವಾಗ್ತಿವೆ 4 ಜೋಡಿಗಳು appeared first on News First Kannada.

News First Live Kannada


Leave a Reply

Your email address will not be published.