
ಎಂಇಎಸ್ ಗೂಂಡಾಗಳ ಪುಂಡಾಟದಲ್ಲಿ ಹಲ್ಲೆಗೆ ಒಳಗಾದ ಯುವಕ
ಬೆಳಗಾವಿ ತಾಲೂಕಿನ ಧಾಮನೆ ಗ್ರಾಮದಲ್ಲಿ ತಡರಾತ್ರಿ ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ MES ಪುಂಡರು ವರ ಸಿದ್ದು ಸಹೋದರ ಭರಮ ಎಂಬುವರ ಬೈಕ್ಗೆ ಬೆಂಕಿ ಹಚ್ಚಿ ಕಿರಿಕ್ ಮಾಡಿದ್ದಾರೆ.
ಬೆಳಗಾವಿ: ಜಿಲ್ಲೆಯಲ್ಲಿ ಮತ್ತೆ ಎಂಇಎಸ್ ಗೂಂಡಾಗಳ ಪುಂಡಾಟ ಶುರುವಾಗಿದೆ. ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ವಧು ವರ, ಕನ್ನಡಿಗ ಯುವಕರ ಮೇಲೆ MES ಪುಂಡರು ಹಲ್ಲೆ ನಡೆಸಿದ್ದಾರೆ. ಬೆಳಗಾವಿ ತಾಲೂಕಿನ ಧಾಮನೆ ಗ್ರಾಮದಲ್ಲಿ ತಡರಾತ್ರಿ ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ MES ಪುಂಡರು ವರ ಸಿದ್ದು ಸಹೋದರ ಭರಮ ಎಂಬುವರ ಬೈಕ್ಗೆ ಬೆಂಕಿ ಹಚ್ಚಿ ಕಿರಿಕ್ ಮಾಡಿದ್ದಾರೆ. ರಾಣಿ ಚನ್ನಮ್ಮ ನಗರ ಅಂತಾ ಕನ್ನಡದಲ್ಲಿ ಬರೆದಿದ್ದ ಬೋರ್ಡ್ ಎದುರು ಧರ್ಮವೀರ ಸಂಭಾಜಿ ನಗರ ಎಂಬ ಮರಾಠಿ ಬೋರ್ಡ್ ಹಾಕಿದ ಉದ್ಧಟತನ ಮೆರೆದಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಘಟನೆ ಖಂಡಿಸಿ ಕರವೇ ಹಾಗೂ ಕುಟುಂಬಸ್ಥರ ಪ್ರತಿಭಟನೆ
ಇನ್ನು ಮತ್ತೊಂದು ಕಡೆ ಎಂಇಎಸ್ ಪುಂಡರ ವಿರುದ್ಧ ಕರವೇ ಹಾಗೂ ಕುಟುಂಬಸ್ಥರು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಬೆಳಗಾವಿಯ ಸಾಹಿತ್ಯ ಭವನದಲ್ಲಿ ಆರೋಪಿಗಳ ಬಂಧನಕ್ಕೆ ಕರವೇ, ಕುಟುಂಬಸ್ಥರು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಕನ್ನಡಿಗರ ಮೇಲೆ ಈ ಪುಂಡರು ಹಲ್ಲೆ ನಡೆಸಿದ್ದರು. ಹೀಗಾಗಿ ಎಂಇಎಸ್ ಗೂಂಡಾಗಳನ್ನ ಗಡಿಪಾರು ಮಾಡಿ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.