ಬ್ಲಾಕ್ ಅಂಡ್ ವೈಟ್​ ಫಂಗಸ್​ ಆಯ್ತು.. ಇದೀಗ ಯೆಲ್ಲೋ ಫಂಗಸ್ ಸರದಿ.. ಕೊರೊನಾ ಮಹಾಮಾರಿಯ ಮಧ್ಯೆ ದಿಗಿಲು ಹುಟ್ಟಿಸಿರುವ ಫಂಗಸ್​ ರೋಗದ ಸರಣಿ ಲಕ್ಷಣಗಳು, ಮತ್ತಷ್ಟು ಆತಂಕವನ್ನ ಹುಟ್ಟಿಸುತ್ತಿದೆ. ಇದೀಗ ಉತ್ತರ ಪ್ರದೇಶದ ಘಾಜಿಯಾಬಾದ್​​ನಲ್ಲಿ ಹಳದಿ ಫಂಗಸ್ ಕಾಣಿಸಿಕೊಂಡಿದೆ.

ಈ ಯೆಲ್ಲೋ ಫಂಗಸ್​ ಬ್ಲಾಕ್ ಅಂಡ್​ ವೈಟ್​ ಫಂಗಸ್​ಕ್ಕಿಂತ ತುಂಬಾ ಡೇಂಜರ್ ಆಗಿದೆ ಅಂತಾ ತಜ್ಞರು ಎಚ್ಚರಿಕೆಯನ್ನ ನೀಡಿದ್ದಾರೆ. ಘಾಜಿಯಾಬಾದ್​ ಆಸ್ಪತ್ರೆ ಒಂದರ ರೋಗಿ ಒಬ್ಬರಲ್ಲಿ ಈ ಹಳದಿ ಫಂಗಸ್ ಕಾಣಿಸಿಕೊಂಡಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ ಅಂತಾ ವರದಿಯಾಗಿದೆ.

ಏನಿದು ಯೆಲ್ಲೋ ಫಂಗಸ್​​..?
ಯೆಲ್ಲೋ ಫಂಗಸ್​ ಈ ಮೊದಲು ಕಾಣಿಸಿಕೊಂಡ ಎರಡು ಸೋಂಕಿಗಿಂತ ಮಾರಕವಾಗಿದೆ. ಯಾಕಂದ್ರೆ ಇದು ದೇಹದ ಇತರೆ ಇಂಟರನಲ್ ಆರ್ಗನ್ಸ್​ ಮೇಲೆ ಹಾನಿಯುಂಟುಮಾಡುತ್ತದೆ. ದೇಹದಲ್ಲಿ ಗಾಯಗಳಿದ್ದರೆ ಗುಣವಾಗುವ ಪ್ರಮಾಣ ತುಂಬಾ ಕಡಿಮೆ ಇದೆ. ಸೋಂಕಿನ ತೀವ್ರತೆಯಿಂದ ಕೆಲವೊಮ್ಮೆ ಆರ್ಗನ್​ ಕೂಡ ಫೇಲ್ಯೂರ್ ಆಗುವ ಸಾಧ್ಯತೆ ಇದೆ. ಕಣ್ಣುಗಳ ಸಮಸ್ಯೆ ಕೂಡ ಕಂಡು ಬರುತ್ತದೆ ಅಂತಾ ಹೇಳಲಾಗಿದೆ.

ಯಾರಿಗೆಲ್ಲಾ ರಿಸ್ಕ್​..?
ಈಗಾಗಲೇ ಹಲವು ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಯೆಲ್ಲೋ ಫಂಗಸ್ ಡೇಂಜರ್ ಆಗಿದೆ. ​​

ಲಕ್ಷಣಗಳೇನು..?

  • ಆಲಸ್ಯ
  • ತೂಕ ಕಡಿಮೆ ಆಗುವುದು
  • ಹಸಿವಾಗದಿರೋದು
  • ಗಾಯಗಳಿಂದ ಕೀವು ಸೋರುವುದು
  • ಗಾಯಗಳು ಕ್ಯೂರ್ ಆಗೋದು ತುಂಬಾ ನಿಧಾನ
  • ಕಣ್ಣಿನಲ್ಲಿ ಸಮಸ್ಯೆ ಉಂಟಾಗುವುದು

ಯೆಲ್ಲೋ ಫಂಗಸ್​​ಗೆ ಟ್ರೀಟ್ಮೆಂಟ್​:
ಯೆಲ್ಲೋ ಫಂಗಸ್​ ರೋಗವನ್ನೂ ಸಹ ಗುಣಪಡಿಸಬಹುದಾಗಿದೆ. ಆಂಫೊಟೆರಿಸಿನ್ ಬಿ ಇಂಜೆಕ್ಷನ್​​ ಮೂಲಕ ಇದನ್ನ ಗುಣಪಡಿಸಬಹುದಾಗಿದೆ. ಆದರೆ ಕೊರೊನಾದ ಎರಡನೇ ಅಲೆ ಕಾಣಿಸಿಕೊಂಡ ಸೋಂಕಿತರಲ್ಲೇ ಈ ಫಂಗಸ್​ ಕಾಯಿಲೆ ಕಾಣಿಸಿಕೊಳ್ತಿರೋದು ಆತಂಕಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಫಂಗಸ್​ ಕಾಯಿಲೆಯನ್ನ ಕೆಲವು ರಾಜ್ಯಗಳು ಸಾಂಕ್ರಾಮಿಕ ಅಂತಾ ಘೋಷಣೆ ಮಾಡಿವೆ.

The post ಕಪ್ಪು, ಬಿಳಿಗಿಂತ ಮತ್ತಷ್ಟು ಡೇಂಜರ್ ಆಗಿರೋ ಯೆಲ್ಲೋ ಫಂಗಸ್​ ಪತ್ತೆ  appeared first on News First Kannada.

Source: newsfirstlive.com

Source link