ನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕೊನೇಯ ಹಂತ ತಲುಪಿದ್ದು, ಇನ್ನೇನು ಲಾಸ್ಟ್ ಎಪಿಸೋಡ್, ಮನೆಗೆ ಹೊರಡಬೇಕು ಎನ್ನುವಾಗಲೇ ಸ್ಪರ್ಧಿಗಳಿಗೆ ಅವರ ಮನೆಯಿಂದ ಪತ್ರಗಳು ಬಂದಿವೆ. ಅದೇ ರೀತಿ ಅರವಿಂದ್ ತಂದೆ ಸಹ ಪ್ರೀತಿಯ ಮಗನಿಗೆ ಪತ್ರ ಬರೆದಿದ್ದು, ಕ್ಯಾಪ್ಟೆನ್ಸಿ ಚೆನ್ನಾಗಿ ನಿಭಾಯಿಸಿದ್ದೀಯಾ ಎಂದು ಹಾಡಿ ಹೊಗಳಿದ್ದಾರೆ.

ಪ್ರೀತಿಯ ಅರವಿಂದ್ ನಿನ್ನ ತಂದೆ, ತಾಯಿ ಹಾಗೂ ಪ್ರಶಾಂತುನು ಮಾಡುವ ಆಶೀರ್ವಾದಗಳು. ನಾವೆಲ್ಲರೂ ಕ್ಷೇಮವಾಗಿದ್ದೇವೆ, ನಿನ್ನ ಆರೋಗ್ಯವನ್ನೂ ಚೆನ್ನಾಗಿ ನೋಡಿಕೊ. ಬಿಗ್ ಬಾಸ್ ವೇದಿಕೆಯಲ್ಲಿ ನಿನ್ನ ಆಟಗಳನ್ನು ನೋಡಿ ನಮಗೆಲ್ಲ ಬಹಳ ಸಂತೋಷವಾಗುತ್ತಿದೆ. ನಿನಗೆ ನೀಡಿದ ಕ್ಯಾಪ್ಟನ್ಸಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೀಯಾ ಎಂದು ಹಾಡಿ ಹೊಗಳಿದ್ದಾರೆ.

ಮನೆಯ ಹತ್ತಿರದವರು, ಕುಟುಂಬಸ್ಥರು, ಗೆಳೆಯರು, ಊರಿನವರು ಹಾಗೂ ಪರ ಊರಿನವರು ಬಿಗ್ ಬಾಸ್ ಮನೆಯಲ್ಲಿ ನಿನ್ನ ಚಟುವಟಿಕೆಗಳನ್ನು ನೋಡಿ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಿಂದ ನಿನಗೆ ಶುಭವಾಗಲಿ, ದೇವರು ನಿನಗೆ ಒಳ್ಳೆಯದು ಮಾಡಲಿ ನಿನ್ನ ಪ್ರೀತಿಯ ತಂದೆ ಪ್ರಭಾಕರ್ ಪಾಥ್ಯ ಎಂದು ಹೇಳಿ ಕೊನೇಯದಾಗಿ ಕಪ್ ತೆಗೆದುಕೊಳ್ಳದೆ ಮನೆಗೆ ಬರಬೇಡ ಎಂದು ಬ್ರಾಕೆಟ್‍ನಲ್ಲಿ ಬರೆದಿದ್ದಾರೆ.

ಅರವಿಂದ್ ಬಗ್ಗೆ ತಂದೆ ಹಾಗೂ ಮನೆಯವರು ಪತ್ರದ ಮೂಲಕ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಕಪ್ ಗೆಲ್ಲದೆ ಮನೆಗೆ ಬರಬೇಡ ಎಂದು ಹೇಳುವ ಮೂಲಕ ಆತ್ಮಸ್ಥೈರ್ಯ ತುಂಬಿದ್ದಾರೆ. ಕಪ್ ಗೆಲ್ಲುವ ಕುರಿತು ಹೇಳಿದ್ದಕ್ಕೆ ಅರವಿಂದ್ ನಕ್ಕು, ಹೇ ಇಲ್ಲ…ಇಲ್ಲ… ಅಂದಿದ್ದಾರೆ. ಅಲ್ಲದೆ ಮನೆಯವರೆಲ್ಲ ಪತ್ರ ಚೆನ್ನಾಗಿದೆ ಎಂದು ಹೇಳಿದ್ದಕ್ಕೆ, ನನಗೆ ಮನೆಯಲ್ಲಿ ಬೈಯುವುದು ಒಂದೇ ವಿಚಾರಕ್ಕೆ ಗಲಾಟೆ ಮಾಡಿರುವುದಕ್ಕೆ ಮಾತ್ರ ಬೈಯ್ಯುತ್ತಾರೆ. ಬೇರೆ ಯಾವುದಕ್ಕೂ ತೊಂದರೆ ಇಲ್ಲ. ಗಲಾಟೆ ಮಾತ್ರ ಆಗುವುದೇ ಇಲ್ಲ ಮನೆಯಲ್ಲಿ ಎಂದಿದ್ದಾರೆ.

The post ಕಪ್ ಗೆಲ್ಲದೆ ಮನೆಗೆ ಬರಬೇಡ- ಅರವಿಂದ್‍ಗೆ ಮನೆಯವರಿಂದ ಭಾವನಾತ್ಮಕ ಪತ್ರ appeared first on Public TV.

Source: publictv.in

Source link