ಕಬೀರ್​​​​ ಸಿಂಗ್​​ ಯಶಸ್ಸಿನ ಬಳಿಕವೂ ಒಂದು ಸಿನಿಮಾಗಾಗಿ ಭಿಕ್ಷುಕನಂತೆ ಅಲೆದಿದ್ದೆ; ಶಾಹೀದ್​ ಕಪೂರ್


”ಕಬೀರ್​ ಸಿಂಗ್”​ ​ ಸಿನಿಮಾದ ಯಶಸ್ಸಿನ ನಂತರ ನಾನು ಭಿಕ್ಷುಕನಂತೆ ಅಲೆದಾಡಿದೆ ಎಂದು ಬಾಲಿವುಡ್​ ನಟ ಶಾಹಿದ್ ಶಾಕಿಂಗ್​ ಹೇಳಿಕೆ ನೀಡಿದ್ದಾರೆ.​ ”ಕಬೀರ್​ ಸಿಂಗ್”​ ಸಿನಿಮಾ ಮೂಲತಃ ತೆಲುಗಿನಲ್ಲಿ ವಿಜಯ್​ ದೇವರ ಕೊಂಡ ನಟಿಸಿ ಬ್ಲಾಕ್​ ಬಸ್ಟರ್​ ಹಿಟ್​ ಆಗಿದ್ದ ”ಅರ್ಜುನ್​ ರೆಡ್ಡಿ” ಸಿನಿಮಾದ ರೀಮೇಕ್​. ರಿಮೇಕ್​ ಆದ್ರೂ ”ಕಬೀರ್​ ಸಿಂಗ್”​ ಸಿನಿಮಾ ಬಾಲಿವುಡ್​​ನಲ್ಲೂ ಸೂಪರ್​ ಹಿಟ್​ ಆಗಿದ್ದಲ್ಲದೆ ಶಾಹೀದ್​​ಗೆ ರಾತ್ರೋ ರಾತ್ರಿ ಸ್ಟಾರ್​ ಗಿರಿ ತಂದುಕೊಟ್ಟಿತ್ತು.

ಈ ಕುರಿತು ಮಾತನಾಡಿರುವ ಶಾಹಿದ್​ ನಾನು 16 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ರು ನನಗೆ ಒಂದು ಹಿಟ್​ ಸಿಕ್ಕಿರಲಿಲ್ಲ. ಮತ್ತು 200 ಕೋಟಿ ಕ್ಲಬ್​ ಸೇರೋ ಅಂತ ಸಿನಿಮಾವನ್ನು ಮಾಡಿರಲಿಲ್ಲ. ಆದರೆ ”ಕಬೀರ್​ ಸಿಂಗ್​” ನನಗೆ ಎಲ್ಲವನ್ನೂ ನೀಡಿತು. ಈ ಸಿನಿಮಾ 200 ಕೋಟಿ ಕ್ಲಬ್​ ಸೇರಿದ ಖುಷಿಯಲ್ಲಿ ನಾನು, ಯಾರೆಲ್ಲಾ 200 ಕೋಟಿ ಕ್ಲಬ್​ ಸೇರಿದ್ದ ಸಿನಿಮಾಗಳನ್ನು ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದರೋ, ಅವರಲ್ಲರ ಬಳಿ ನನಗೊಂದು ಸಿನಿಮಾ ಮಾಡಿ ಎಂದು ಭಿಕ್ಷುಕನಂತೆ ಅಲೆದಾಡಿದ್ದೇನೆ ಎಂದು ಮನಸಿನ ಮಾತನ್ನು ಹೇಳಿದ್ದಾರೆ.

‘ಕಬೀರ್​ ಸಿಂಗ್” ಯಶಸ್ಸಿನ ನಂತರ ರಮೇಕ್​​ಗೆ ಅಂಟಿಕೊಂಡಿರುವ ಶಾಹೀದ್​, ತೆಲುಗಿನಲ್ಲಿ ನ್ಯಾಚ್ಯುರಲ್​ ಸ್ಟಾರ್​ ನಟಿಸಿದ್ದ ”ಜೆರ್ಸಿ” ಸಿನಿಮಾವನ್ನು ಹಿಂದಿಗೆ ರೀಮೇಕ್​ ಮಾಡಲಿದ್ದಾರೆ. ”ಜೆರ್ಸಿ” ಸಿನಿಮಾದ ಟ್ರೈಲರ್​ ಲಾಂಚ್​ನಲ್ಲಿ ತಮ್ಮ ಮನದಾಳತ ಮಾತನ್ನು ಬಿಚ್ಚಿಟ್ಟಿದ್ದಾರೆ. ಇನ್ನು ತೆಲುಗಿನ ”ಜೆರ್ಸಿ ”ಗೆ ಆ್ಯಕ್ಷನ್​ ಕಟ್​ ಹೇಳಿದ್ದ ಗೌತಮ್​ ತಿನ್ನಾರು ಬಾಲಿವುಡ್​ ”ಜೆರ್ಸಿ” ಗೂ ಆ್ಯಕ್ಷನ್​ ಕಟ್ ಹೇಳುವ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ.

News First Live Kannada


Leave a Reply

Your email address will not be published. Required fields are marked *