ಡ್ರೋನ್ನಲ್ಲಿ ಸೆರೆಯಾದ ಆನೆಗಳು
ಚಿಕ್ಕಮಗಳೂರು: ನಾಡಿನೆಲ್ಲೆಡೆ ಸಂಕ್ರಾಂತಿ ಹಬ್ಬದ ಸಂಭ್ರಮ, ಸಡಗರ ಮನೆ ಮಾಡಿತ್ತು. ಈ ಸಂತಸದ ನಡುವೆ ಹಬ್ಬ ಆಚರಿಸಲು ಮೂರು ಆನೆಗಳು ಕಬ್ಬಿನಗದ್ದೆಗೆ ಎಂಟ್ರಿ ಕೊಟ್ಟಿವೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಿನ್ನೆ ಸಂಕ್ರಾಂತಿ ಸಂಭ್ರಮ, ಸಡಗರ ಮನೆ ಮಾಡಿತ್ತು. ಈ ನಡುವೆ ವೀಕೆಂಡ್ ಕರ್ಫ್ಯೂ ಬೇರೆ. ಹೀಗಾಗಿ ಅನೇಕರು ಸಂಕ್ರಾಂತಿಯನ್ನ ಅಷ್ಟೊಂದು ವಿಜೃಂಭಣೆಯಾಗಿ ಆಚರಿಸಿಲ್ಲ. ಹಾಗಂತ ನಾವ್ ಯಾವ್ದೆ ಕಾರಣಕ್ಕೂ ಹಬ್ಬ ಮಾಡ್ದೇ ಬಿಡಲ್ಲ ಅಂತಾ ಈ ಮೂವರು ಡಿಸೈಡ್ ಮಾಡಿಯೇ ಚಿಕ್ಕಮಗಳೂರು ನಗರಕ್ಕೆ ಹೊಂದಿಕೊಂಡಂತೆ ಇರುವ ಎರೇಹಳ್ಳಿ ಗ್ರಾಮಕ್ಕೆ ಎಂಟ್ರಿಕೊಟ್ಟಿದ್ದವು. ಹೀಗೆ ಬಂದ ಕಾಡಾನೆಗಳಿಗೆ ಕಂಡಿದ್ದು ವಿಸ್ತಾರವಾದ ಕಬ್ಬಿನಗದ್ದೆ.. ಎತ್ತಾ ಕಣ್ ಹಾಯ್ಸಿದ್ರೂ ಕಬ್ಬಿನಗದ್ದೆಯ ಸಿಹಿಯೇ. ಈ ಮೂವರಿಗಂತೂ ಸ್ವರ್ಗವೇ ಎದುರಾದಂತಾಯ್ತು. ಲಾಡು ಬಾಯಿಗೆ ಬಂದು ಬಿದ್ದಂತಾಯ್ತು. ನಮ್ದೆ ಅಡ್ಡಾ ಕಣ್ರೋ ಅಂತಾ ಈ ಮೂರು ಒಂಟಿ ಸಲಗಗಳು ತೋರಿದ ಆರ್ಭಟ ಅಷ್ಟಿಷ್ಟಲ್ಲ. ಇವ್ರ ಆರ್ಭಟ ನೋಡಿ ಇಡೀ ದಿನ ಕಬ್ಬು ಬೆಳೆದ ರೈತರೇ ಬೆಕ್ಕಸ ಬೆರಗಾಗಿ ಹೋದ್ರು.
ಕಾಡಾನೆಗಳು ನಗರದ ಸಮೀಪ ಎಂಟ್ರಿ ಕೊಟ್ಟಿದ್ದಾವೆ ಅನ್ನೋ ಸುದ್ದಿ ತಿಳಿದು ಎದ್ನೋ, ಬಿದ್ನೋ ಅಂತಾ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಕೂಡ ಸ್ಥಳಕ್ಕೆ ದೌಡಾಯಿಸಿದ್ರು. ಅರಣ್ಯ ಇಲಾಖೆಯವರು, ಸ್ಥಳೀಯರು ಎಷ್ಟೇ ಹುಡುಕಾಡಿದ್ರೂ ಯಾರ ಕಣ್ಣಿಗೂ ಕೂಡ ಈ ಮೂರು ಆನೆಗಳು ಸೈಟ್ ಆಗಲೇ ಇಲ್ಲ. ಈ ವೇಳೆ ಮೂವರನ್ನ ಬೆನ್ನಟ್ಟಿದ್ದೇ ಅದೊಂದು ದ್ರೋಣ್ ಕ್ಯಾಮೆರಾ. ಕಬ್ಬಿನಗದ್ದೆ ಮಧ್ಯೆ ಸೇರಿಕೊಂಡಿದ್ದ ಮೂವರನ್ನ ದ್ರೋಣ್ ಬೆನ್ನಟ್ಟಿತ್ತು. ಯಾರೇ ಹೋರಾಡಲಿ, ಊರೇ ಕೂಗಾಡಲಿ ನಮ್ದೆ ಅಡ್ಡಾ ಅಂತಾ ಮೆರೆಯುತ್ತಿದ್ದ ಮೂವರು, ದ್ರೋಣ್ ಬೆನ್ನಟ್ಟಿದ್ದ ಕೂಡಲೇ ಕಾಲ್ಕಿಳೋ ಮನಸ್ಸು ಮಾಡಿದ್ರು.
ಯಾವಾಗ ದ್ರೋಣ್ ಕ್ಯಾಮೆರಾ ನಮ್ಮನ್ನ ಸೆರೆಹಿಡಿಯುತ್ತಿದೆ ಅನ್ನೋದು ಗೊತ್ತಾಯ್ತೋ ಆಗ ಮೂರು ಒಂಟಿ ಸಲಗಗಳು ಎದ್ನೋ ಬಿದ್ನೋ ಅಂತಾ ಅತ್ತಿಂದತ್ತ ಓಡತೊಡಗಿದವು. ಕಾಡಾನೆಗಳ ಈ ಮಜ್ಬುತ್ತಾದ ದೃಶ್ಯ ಕಂಪ್ಲೀಟ್ ಆಗಿ ದ್ರೋಣ್ನಲ್ಲಿ ಸೆರೆಯಾಯ್ತು. ಒಟ್ಟಿನಲ್ಲಿ ವೀಕೆಂಡ್ ಕರ್ಫ್ಯೂ ಅಂತಾ ಜನಸಾಮಾನ್ಯರು ಸಂಕ್ರಾಂತಿಯನ್ನ ಸರಳವಾಗಿ ಆಚರಿಸಿದ್ರೆ, ಈ ಮೂವರಂತೂ ಕಬ್ಬಿನಗದ್ದೆಯಲ್ಲಿ ಸಂಕ್ರಾಂತಿಯನ್ನ ಸ್ಪೆಷಲ್ ಆಗಿ ಆಚರಿಸಿ ಎಲ್ಲರ ಗಮನ ಸೆಳೆದ್ರು. ಆಧುನಿಕ ಭರಾಟೆಯಲ್ಲಿ ಕಾಡುಗಳು ಮಾಯವಾಗುತ್ತಿರುವ ಈ ಕಾಲಘಟ್ಟದಲ್ಲಿ ಮೂಖಪ್ರಾಣಿಗಳು ನಾಡಿಗೆ ಬರದೇ ಇನ್ನೆಲ್ಲಿ ಹೋಗಬೇಕು ಅನ್ನೋ ಪ್ರಶ್ನೆ ಕೂಡ ಉದ್ಬವಿಸದಂತೂ ಸತ್ಯ.
ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು