ಕಬ್ಬಿನ ಹಾಲಿನ ಪಾಯಸ

ಬೇಕಾಗುವ ಪದಾರ್ಥಗಳು…

  • ಹಾಲು- 1 ಸಣ್ಣ ಬಟ್ಟಲು
  • ಕಬ್ಬಿನ ರಸ- 1 ದೊಡ್ಡ ಲೋಟ
  • ದ್ರಾಕ್ಷಿ, ಗೋಡಂಬಿ- ಸ್ವಲ್ಪ
  • ತುಪ್ಪ- ಸ್ವಲ್ಪ
  • ಅಕ್ಕಿ- 1 ಸಣ್ಣ ಬಟ್ಟಲು (ಅರ್ಧಗಂಟೆ ನೆನೆಸಿಟ್ಟುಕೊಳ್ಳಬೇಕು)

ಮಾಡುವ ವಿಧಾನ…

  • ಒಲೆಯ ಮೇಲೆ ಪಾತ್ರೆ ಇಟ್ಟು ಅದಕ್ಕೆ ತುಪ್ಪ ಹಾಕಿ, ದ್ರಾಕ್ಷಿ ಹಾಗೂ ಗೋಡಂಬಿ ಹುರಿದಿಟ್ಟುಕೊಳ್ಳಬೇಕ. 
  • ಇದೇ ಪಾತ್ರೆಗೆ ಕಬ್ಬಿನ ರಸ ಹಾಕಿ ಬಿಸಿಯಾಗುವವರೆಗೂ ಕೈಯಾಡಿಸುತ್ತಿರಬೇಕು. ಕುದಿಯಲು ಆರಂಭವಾದಾಗ ಹಾಲನ್ನು ಹಾಕಿ 5 ನಿಮಿಷ ಕುದಿಯಲು ಬಿಡಬೇಕು.
  • ನಂತರ ಇದಕ್ಕೆ ಅಕ್ಕಿಯನ್ನು ಹಾಕಿ, ಅಕ್ಕಿ ಬೆಂದ ಬಳಿಕ ಹುರಿದಟ್ಟುಕೊಂಡ ದ್ರಾಕ್ಷಿ, ಗೋಡಂಬಿ ಹಾಕಿದರೆ, ರುಚಿಕರವಾದ ಕಬ್ಬಿನ ಹಾಲಿನ ಪಾಯಸ ಸವಿಯಲು ಸಿದ್ಧ. 

Kannadaprabha – ಆಹಾರ-ವಿಹಾರ – https://www.kannadaprabha.com/food/
Read More