ಚಾಮರಾಜನಗರ : ಜಿ್ಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರ ಎದುರು ನಮ್ಮ ಅವ್ವನಿಗೆ ವೆಂಟಿಲೇಟರ್ ಕೊಡಿಸಿ ಎಂದು ಯುವಕನೋರ್ವ ಕೈಮುಗಿದು ಅಳಲು ತೋಡಿಕೊಂಡ ಘಟನೆ ನಡೆಯಿತು.

ನಮ್ಮ ಅವ್ವನನ್ನ ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಈಗಾಗಲೇ ಅಡ್ಮಿಟ್ ಮಾಡಿಕೊಂಡಿದ್ದಾರೆ.. ಆದ್ರೆ ವೆಂಟಿಲೇಟರ್ ಬೇಕು ಅಂತಾ ಡಾಕ್ಟರ್ ಹೇಳಿದ್ದಾರೆ. ನಮ್ಮ ತಾಯಿ ಬದುಕಬೇಕಾದ್ರೆ ವೆಂಟಿಲೇಟರ್ ಬೇಕು. ದಯಮಾಡಿ ವೆಂಟಿಲೇಟರ್ ವ್ಯವಸ್ಥೆ ಮಾಡಿ ಸರ್ ಎಂದು ಗುಂಡ್ಲುಪೇಟೆಯ ಯುವಕ ಸಚಿವರ ಮುಂದೆ ಅಳಲು ತೋಡಿಕೊಂಡಿದ್ದಾನೆ.

ಈ ಯುವಕನ ತಾಯಿ ಶಾಂತಮ್ಮ ಅವರಿಗೆ ಮೂರು ದಿನಗಳ ಹಿಂದೆ ಕೋವಿಡ್ ದೃಢವಾಗಿದ್ದು..ಗುಂಡ್ಲುಪೇಟೆ ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ಅಲೆಸಿದ್ದಾರೆ.. ಡಾಕ್ಟರ್ ಬಳಿ ಕೇಳಿದ್ರೆ ಬೆಡ್ ಇದೆ ವೆಂಟಿಲೇಟರ್ ಇಲ್ಲ ಅಂತಾರೆ ಎಂದು ಆರೋಪಿಸಿದ್ದಾನೆ.

ಅಲ್ಲದೇ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಯುವಕ ನಾವು ವೋಟ್ ಹಾಕಿರೋದು ಕಮಲಕ್ಕೆ.. ವೋಟ್ ಕೇಳೋಕೆ ಮನೆ ಬಾಗಿಲಿಗೆ ಬಂದು ಕಾಲಿಗೆ ಬೀಳ್ತಾರೆ. ಸಾಯ್ತಿದ್ರೆ ಯಾರೂ ಬಂದು ನೋಡಲ್ಲ ಎಂದು ಕಿಡಿಕಾರಿದ್ದಾನೆ. ಯುವಕನ ಪೋನ್ ನಂಬರ್ ಪಡೆದ ಸಚಿವ ಸುರೇಶ್ ಕುಮಾರ್ ವೆಂಟಿಲೇಟರ್ ಕೊಡಿಸುವ ಭರವಸೆ ನೀಡಿದ್ದಾರೆ.

The post ಕಮಲಕ್ಕೆ ವೋಟ್ ಹಾಕಿದ್ದೇನೆ.. ನಮ್ಮವ್ವನ್ನ ಬದುಕಿಸಿಕೊಡಿ ಸಾರ್: ಕೈ ಮುಗಿದು ಬೇಡಿದ ಯುವಕ appeared first on News First Kannada.

Source: newsfirstlive.com

Source link